ಮಲಯಾಳಂ ನಟ ಉನ್ನಿ ಮುಕುಂದನ್ ಜೊತೆ ಅನುಶ್ರೀ ಮದುವೆ? ನಟನ ಪ್ರತಿಕ್ರಿಯೆ ಏನು?

ದಕ್ಷಿಣ ಭಾರತದ ನಟ ಉನ್ನಿ ಮುಕುಂದನ್ ಮಲಯಾಳಿಗಳ ಫೇವರಿಟ್ ನಟ. ಮಾಲಿವುಡ್‌ನ ಸ್ಫುರದ್ರೂಪಿ ನಟರಲ್ಲಿ ಉನ್ನಿ ಮುಕುಂದನ್ ಕೂಡ ಒಬ್ಬರು. ಒಬ್ಬ ಹೀರೊಗೆ ಬೇಕಿರೋ ಫೀಚರ್ಸ್ ಇರುವ ನಟನೀತ. 36 ವರ್ಷದ ನಟ ಮಲಯಾಳಿಗಳ ಫೇವರಿಟ್ ನಟ ಕೂಡ ಹೌದು. ಸಾಕಷ್ಟು ಉತ್ತಮ ಸಿನಿಮಾಗಳಲ್ಲಿ ನಟಿಸುವ ಮೂಲಕ ಮಲಯಾಳಿಗಳನ್ನು ಸೆಳೆದಿಟ್ಟುಕೊಂಡಿದ್ದಾರೆ.

ಕೆಲವು ದಿನಗಳಿಂದ ಉನ್ನಿ ಮುಕುಂದನ್ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಮಲಯಾಳಂ ನಟ ಉನ್ನಿ ಮುಕುಂದನ್ ಹಾಗೂ ಅನುಶ್ರೀ ಮದುವೆಯಾಗುತ್ತಿದ್ದಾರೆ. ಶೀಘ್ರದಲ್ಲಿಯೇ ಈ ನಟ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂತೆಲ್ಲ ಸುದ್ದಿಗಳು ಹಬ್ಬಿದ್ದವು. ಆ ಸುದ್ದಿ ವೈರಲ್ ಆಗುತ್ತಿದ್ದಂತೆ ಉನ್ನಿ ಮುಕುಂದನ್ ಪ್ರತಿಕ್ರಿಯೆ ನೀಡಿದ್ದಾರೆ.

Unni Mukundan Marriage with Anushree finally Malayalam actor reacted to this news

ಕೆಲವು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಉನ್ನಿ ಮುಕುಂದನ್ ಹಾಗೂ ಅನುಶ್ರೀ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿಯೊಂದು ಸಂಚಲನ ಸೃಷ್ಟಿಸಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಮಲಯಾಳಂ ನಟ ಉನ್ನಿ ಮುಕುಂದನ್ ಪ್ರತಿಕ್ರಿಯೆ ನೀಡಿದ್ದಾರೆ. ಅಸಲಿಗೆ ಈ ಸುದ್ದಿ ಹೊರಬಿದ್ದಿದ್ದು ಹೇಗೆ? ಉನ್ನಿ ಮುಕುಂದನ್ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಉನ್ನಿ ಮುಕುಂದನ್ ಹಾಗೂ ಅನುಶ್ರೀ ಇಬ್ಬರೂ ಇವೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದ್ದವು. ಅದೇ ಫೋಟೊಗಳನ್ನು ಇಟ್ಟುಕೊಂಡು ಉನ್ನಿ ಮುಕುಂದನ್, ಅನುಶ್ರೀಯನ್ನು ಮದುವೆ ಆಗುತ್ತಾರೆ ಅಂತ ಸುದ್ದಿ ಹಬ್ಬಿಸಲಾಗಿತ್ತು. ಅಸಲಿಗೆ ಇದು ಸುಳ್ಳು ಸುದ್ದಿ. ಈ ಸುದ್ದಿ ಬಗ್ಗೆ ಮಲಯಾಳಂ ನಟ ಪ್ರತಿಕ್ರಿಯೆ ನೀಡಿದ್ದಾರೆ.

ಉನ್ನಿ ಮುಕುಂದನ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡು ಮಲಯಾಳಂನಲ್ಲಿ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. " ಇಂತಹ ಸುಳ್ಳು ಸುದ್ದಿಗಳನ್ನು ನಿಲ್ಲಿಸುವುದಕ್ಕೆ ನಿಮಗೆ ನಾನು ಎಷ್ಟು ಹಣ ಕೊಡಬೇಕು" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಇದು ಸುಳ್ಳು ಸುದ್ದಿ ಅನ್ನೋದನ್ನು ಮಲಯಾಳಂ ನಟ ಸ್ಪಷ್ಟ ಪಡಿಸಿದ್ದಾರೆ.

Unni Mukundan Marriage with Anushree finally Malayalam actor reacted to this news

ಉನ್ನಿ ಮುಕುಂದನ್ ಜೊತೆ ಕಾಣಿಸಿಕೊಂಡಿರೋ ಅನುಶ್ರೀ ಕೂಡ ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. 2012ರಲ್ಲಿ 'ಡೈಮಂಡ್ ನೆಕ್ಲೆಸ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ '12th ಮ್ಯಾನ್', 'ಕಲ್ಲನುಂ ಭಗವತಿಯುಂ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ 'ತಾರಾ' ಅನ್ನೋ ಸಿನಿಮಾ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

2017ರಲ್ಲಿ ಉನ್ನಿ ಮುಕುಂದನ್ ವಿರುದ್ದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಸಿನಿಮಾದ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಎಡಪಲ್ಲಿಯಲ್ಲಿರುವ ಉನ್ನಿ ಮುಕುಂದನ್ ಮನೆಗೆ ತೆರಳಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪ ಮಾಡಲಾಗಿತ್ತು. ಇದು ಹೈ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. 2023ರಲ್ಲಿ ಹೈಕೋರ್ಟ್ ಉನ್ನಿ ಮುಕುಂದನ್ ಮೇಲಿದ್ದ ಕೇಸ್ ಅನ್ನು ರದ್ದುಗೊಳಿಸಿತ್ತು.

More from Filmibeat

English summary
Unni Mukundan Marriage with Anushree is fake news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X