Meena: "ಹೃತಿಕ್ ಅಂದ್ರೆ ಇಷ್ಟ.. ಅಂತಹ ಗಂಡನನ್ನೇ ಹುಡುಕಿಕೊಡಿ".. ಅಮ್ಮನಿಗೆ ಗಂಟುಬಿದ್ದಿದ್ದ ನಟಿ ಮೀನಾ!

ದಕ್ಷಿಣ ಭಾರತದ ಬಹುಭಾಷಾ ನಟಿ ಮೀನಾ. ಸಿನಿಮಾರಂಗಕ್ಕೆ ಕಾಲಿಟ್ಟು ಹೆಚ್ಚು ಕಡಿಮೆ 40 ವರ್ಷಗಳಾಗಿವೆ. ಆದರೂ, ಮೀನಾ ಖದರ್ ಏನು ಬದಲಾಗಿಲ್ಲ. ಪೋಷಕ ಪಾತ್ರಗಳಲ್ಲಿ ನಟಿಸಿದ್ದರೂ ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದರೆ ಮಾತ್ರ ಮೀನಾ ಒಟ್ಟಿಕೊಳ್ಳುತ್ತಾರೆ. ಆದರೆ ಆರಂಭದ ಎರಡು ದಶಕಗಳು ಈ ನಟಿ ಅಂದಿನ ಸ್ಟಾರ್ ನಟರೊಂದಿಗೆ ನಟಿಸಿದ್ದರು.

ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯರಾಗಿದ್ದರೂ, ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸಿ ಸಿನಿಮಾ ಪ್ರಿಯರಿಗೆ ಹತ್ತಿರವಾಗಿದ್ದಾರೆ. ಬಾಲ ನಟಿಯಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ ನಟಿ ತದನಂತರ ಚಿರಂಜೀವಿ, ರಜನಿಕಾಂತ್, ಮೋಹನ್‌ಲಾಲ್, ರವಿಚಂದ್ರನ್, ಸುದೀಪ್ ಅಂತಹ ಸೂಪರ್‌ಸ್ಟಾರ್ ಜೊತೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

actress-meena-hrithik-roshan

ಒಂದು ಕಾಲದಲ್ಲಿ ಮೇರು ನಟರೊಂದಿಗೆ ನಟಿಸಿದ್ದ ನಟಿಯೀಗ ಚಿಕ್ಕಪುಟ್ಟ ಪಾತ್ರಗಳಲ್ಲಿ ಮಿಂಚಲು ಹಿಂದೇಟು ಹಾಕುವುದಿಲ್ಲ. ಇಂತಹ ದಿಟ್ಟ ನಟಿ ತನ್ನ ಮದುವೆ ಬಗ್ಗೆ ಕನಸನ್ನೇ ಕಟ್ಟಿಕೊಂಡಿದ್ದರು. ಬಾಲಿವುಡ್ ನಟನಂತಹ ಹ್ಯಾಂಡ್ಸಮ್ ವ್ಯಕ್ತಿಯನ್ನೇ ವಿವಾಹವಾಗಬೇಕು ಎಂದು ಬಯಸಿದ್ದರು. ಹಳೇ ಸಂದರ್ಶನದಲ್ಲಿ ಮೀನಾ ಈ ಮಾತು ಹೇಳಿದ್ದರು.

ಮೀನಾ ಇಷ್ಟ ಪಟ್ಟಿದ್ದ ಆ ಹೀರೊ ಯಾರು?

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮೀನಾ ಭಾಗವಹಿಸಿದ್ದರು. ಈ ವೇಳೆ ತಮ್ಮ ಮೆಚ್ಚಿನ ನಟ ಯಾರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅವರು ದಕ್ಷಿಣ ಭಾರತದ ನಟನಲ್ಲ. ಬಾಲಿವುಡ್‌ನ ಹ್ಯಾಂಡ್ಸಮ್‌ ಹಂಕ್ ಹೃತಿಕ್ ರೋಷನ್. "ಆತನ ಮದುವೆ ಬಳಿಕ ನಾನು ಹತಾಶಳಾದೆ. ನನಗೆ ಅವನಂತಹ ಗಂಡನನ್ನೇ ಹುಡುಕಿಕೊಡುವಂತೆ ನನ್ನ ಅಮ್ಮನಿಗೆ ಹೇಳಿದ್ದೆ" ಎಂದು ಸಂದರ್ಶನದಲ್ಲಿ ತಮಾಷೆಯಾಗಿ ನಟಿ ಮೀನಾ ಮಾತಾಡಿದ್ದಾರೆ.

actress-meena-hrithik-roshan

ಸುಹಾಸಿನಿ ಚಾಟ್ ಶೋನಲ್ಲಿ ಮೀನಾ

ಮೀನಾ ದಕ್ಷಿಣ ಭಾರತದ ಮತ್ತೊಬ್ಬ ನಟಿ ಸುಹಾಸಿನಿಯೊಂದಿಗೆ ಚಾಟ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಮೀನಾ ತಮ್ಮ ನೆಚ್ಚಿನ ನಟನ ಬಗ್ಗೆ ಬಹಿರಂಗಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೃತಿಕ್ ಜೊತೆಗೆ ಮೀನಾ ನಿಂತಿರುವ ಫೋಟೊವನ್ನು ತೋರಿಸಲಾಗಿತ್ತು. ಆ ವೇಳೆ "ನನಗೆ ಹೃತಿಕ್ ರೋಷನ್ ಅಂದರೆ ತುಂಬಾನೇ ಇಷ್ಟ. ಈ ಪೋಟೊವನ್ನು ತೋರಿಸಿದಾಗ ನನ್ನ ಹೃದಯ ಭಾರವಾಗಿತ್ತು. ಏಕೆಂದರೆ ಹೃತಿಕ್ ರೋಷನ್ ಮದುವೆ ಆದಾಗ ನನಗೆ ಮದುವೆಯಾಗಿರಲಿಲ್ಲ. ಹೀಗಾಗಿ ಹೃತಿಕ್‌ನಂತಹ ಹುಡುಗನನ್ನೇ ಹುಡುಕಿ ಅಂತ ನನ್ನ ತಾಯಿಗೆ ಹೇಳಿದ್ದೆ" ಎಂದು ಮೀನಾ ಸಂದರ್ಶನದಲ್ಲಿ ಗುಟ್ಟನ್ನು ರಿವೀಲ್ ಮಾಡಿದ್ದರು.

ಹೃತಿಕ್ ವಿವಾಹವಾದ 9 ವರ್ಷಗಳಾದ್ಮೇಲೆ ಮೀನಾ ಮದುವೆ

ದಕ್ಷಿಣ ಭಾರತದಲ್ಲಿ ನಟಿ ಮೀನಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಸ್ಟಾರ್ ನಟರೊಂದಿಗೆ ನಟಿಸುತ್ತಿದ್ದರು. ಹೃತಿಕ್ ರೋಷನ್ ಚಿತ್ರರಂಗಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಅಂದರೆ, 2000ದಲ್ಲಿ ವಿವಾಹವಾದರು. ಅದೇ ಮೀನಾ ಬರೋಬ್ಬರಿ 9 ವರ್ಷಗಳ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂಜಿನಿಯರ್ ಆಗಿದ್ದ ವಿದ್ಯಾಸಾಗರ್ ಎಂಬುವವರನ್ನು ಮದುವೆಯಾದರು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮೀನಾ ಪತಿ ಕಳೆದ ವರ್ಷವಷ್ಟೇ ನಿಧನ ಹೊಂದಿದ್ದಾರೆ. ಈ ನಡುವೆ ಮೀನಾ ಎರಡನೇ ಮದುವೆ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

More from Filmibeat

English summary
Viral initial days Meena Wanted marry like Hrithik Roshan says an old interview
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X