ಮೋಹನ್ ಲಾಲ್ ಯಾಕೆ ಗಡ್ಡ ತೆಗೆಯೋದಿಲ್ಲ? ಮಲಯಾಳಂ ಸೂಪರ್‌ಸ್ಟಾರ್‌ಗಿರೋ ಆರೋಗ್ಯ ಸಮಸ್ಯೆ ಏನು?
ಮಲಯಾಳಂ ಮಂದಿಗೆ ಮೋಹನ್‌ಲಾಲ್ ಒಬ್ಬ ಕಂಪ್ಲೀಟ್ ಆಕ್ಟರ್. ತನ್ನ ಮುಖದಿಂದಲೇ ಅಭಿನಯಿಸೋ ನಟನಿಗೆ ಅಭಿಮಾನಿಗಳೇನು ಕಮ್ಮಿಯಿಲ್ಲ. ಇಂದಿಗೂ ಯುವ ನಟರಿಗೆ ಕಾಂಪಿಟೇಷನ್ ಕೊಡುವ ಮಲಯಾಳಂ ಸೂಪರ್‌ಸ್ಟಾರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತವೆ.
ಮಲಯಾಳಿಗಳಿಗೆ ಮೋಹನ್ ಲಾಲ್ ಫೇವರಿಟ್ ನಟ. ಆದರೆ, ಎಲ್ಲರಿಗೂ ಒಂದು ಚಿಕ್ಕ ಅನುಮಾನವಿದ್ದೇ ಇದೆ. ಮೋಹನ್‌ಲಾಲ್ ಇತ್ತೀಚೆಗೆ ಅದೆಷ್ಟೇ ಸಿನಿಮಾ ಮಾಡಿದರೂ, ಯಾಕೆ ಗಡ್ಡ ತೆಗೆಯುವುದಿಲ್ಲ? ಗಡ್ಡ ತೆಗೆದು ಯಾಕೆ ಸಿನಿಮಾ ಮಾಡೋದಿಲ್ಲ? ಅನ್ನೋ ಪ್ರಶ್ನೆ ಎದ್ದಿರುತ್ತೆ. ಅದಕ್ಕೆ ಮೋಹನ್‌ಲಾಲ್ ಸಹೋದರ ಬಿಜು ಗೋಪಿನಾಥನ್ ನಾಯರ್ ಉತ್ತರ ಕೊಟ್ಟಿದ್ದಾರೆ.

ಬಿಜು ಗೋಪಿನಾಥನ್ ನಾಯರ್ ಸಹೋದರ ಮೋಹನ್‌ಲಾಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಮಾಸ್ಟರ್‌ಬಿನ್ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. 'ಒಡಿಯಾನ್' ಅನ್ನೋ ಸಿನಿಮಾಗಾಗಿ ಮೋಹನ್‌ಲಾಲ್ ಚಿಕಿತ್ಸೆ ಪಡೆದಿದ್ದರು. ಅದರಿಂದ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದು ಮೋಹನ್‌ಲಾಲ್‌ಗೆ ಆದ ಅನಿರೀಕ್ಷಿತ ಹಿನ್ನಡೆ ಎಂದಿದ್ದಾರೆ. ಅಷ್ಟಕ್ಕೂ ಮೋಹನ್‌ಲಾಲ್ ಯಾಕೆ ಗಡ್ಡ ತೆಗೆಯೋದಿಲ್ಲ? ಅವರಿಗಿರೋ ಆರೋಗ್ಯ ಸಮಸ್ಯೆ ಏನು? ತಿಳಿಯಲು ಮುಂದೆ ಓದಿ..
2018ರಲ್ಲಿ ಮೋಹನ್‌ಲಾಲ್ 'ಒಡಿಯನ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಮೋಹನ್‌ಲಾಲ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೊಂದು 25 ವರ್ಷದ ಯುವಕನ ಪಾತ್ರ. ಈ ರೋಲ್‌ಗಾಗಿ ಮೋಹನ್‌ಲಾಲ್ ಚಿಕಿತ್ಸೆ ಪಡೆದಿದ್ದರು. ಇದರಿಂದ ಮುಖದ ಮೇಲಿನ ಸುಕ್ಕು ಮಾಯವಾಗುತ್ತೆ. ಪಾತ್ರಕ್ಕಾಗಿ ತಮ್ಮ ವಯಸ್ಸನ್ನು ತಗ್ಗಿಸಿಕೊಳ್ಳಲು ಈ ನಿರ್ಧರಕ್ಕೆ ಬಂದಿದ್ದರು. ಆದರೆ, ಆ ಲಸಿಕೆಯಿಂದ ರಿಯಾಕ್ಷನ್ ಆಗಿತ್ತು. ಮೋಹನ್‌ಲಾಲ್ ಮುಖದ ಸ್ನಾಯು ಹಾಗೂ ಕಣ್ಣು ಹಿಂದಿನಂತೆ ಈಗ ಇಲ್ಲ ಎಂದು ಬಿಜು ಗೋಪಿನಾಥನ್ ನಾಯರ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾಗಿ ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.
ಮೋಹನ್‌ಲಾಲ್ ತೆಗೆದುಕೊಂಡ ಲಸಿಕೆಯಿಂದ ಅಲರ್ಜಿಯಾಗಿದೆ. ಹೀಗಾಗಿ ಅವರು ಗಡ್ಡವನ್ನು ತೆಗೆಯುವಂತಿಲ್ಲ. ಅದಕ್ಕೆ 'ಒಡಿಯಾನ್' ಸಿನಿಮಾ ಬಳಿಕ ಗಡ್ಡವನ್ನೇ ಬೋಳಿಸಿಲ್ಲ ಎಂದು ಸಹೋದರ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಮೋಹನ್‌ಲಾಲ್ ಅಮೆರಿಕದಲ್ಲಿರುವ ವೈದ್ಯರನ್ನೂ ಸಂಪರ್ಕಿಸಿದ್ದರು. ಕಾಲಕ್ರಮೇಣ ಸರಿಹೋಗಬಹುದು. ಅದು ಬಿಟ್ಟರೆ ಬೇರೆ ದಾರಿಯಿಲ್ಲವೆಂದು ವೈದ್ಯರು ಹೇಳಿದ್ದಾಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಈ ಆರೋಗ್ಯ ಸಮಸ್ಯೆ ಸರಿಹೋಗುವವರೆಗೂ ಮೋಹನ್‌ಲಾಲ್ ಗಡ್ಡವನ್ನು ತೆಗೆಯುವಂತಿಲ್ಲ. ಶೇವ್ ಮಾಡಿದರೆ ಅವರಿಗೆ ಅಲರ್ಜಿಯಾಗುತ್ತೆ ಎಂದಿದ್ದಾರೆ. ಇದರೊಂದಿಗೆ ಮೋಹನ್‌ಲಾಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಮೋಹನ್‌ಲಾಲ್ ಉತ್ತಮ ಸಂಬಂಧ ಹೊಂದಿಲ್ಲ ಎಂದಿದ್ದಾರೆ.
ಮೋಹನ್ ಲಾಲ್ ಕುಟುಂಬದ ಸದಸ್ಯರಿಗೆ ಸಹಾಯ ಮಾಡುವುದಿಲ್ಲ. ಹತ್ತು ಹದಿನೈದು ವರ್ಷಗಳ ಹಿಂದೆ ನನಗೆ ಎರಡು ಲಕ್ಷ ರೂಪಾಯಿ ಅಗತ್ಯವಿತ್ತು. ಆಗ ಆಂಟೋನಿ ನನ್ನ ಸಹೋದರನನ್ನು ಅಲ್ಲಿಗೆ ಬರಲು ಹೇಳಿ ಹಣವನ್ನು ಕೊಟ್ಟಿದ್ದರು. ಇಷ್ಟೇ ಅಲ್ಲ ಮೋಹನ್‌ಲಾಲ್ ಮನೆಯಲ್ಲಿ ಸಾವು ಸಂಭವಿಸಿದರೂ ಬರುವುದಿಲ್ಲ. ಅವರ ತಂದೆಯ ಸಹೋದರ ಸಾವನ್ನಪ್ಪಿದಾಗಲೂ ಬಂದಿಲ್ಲ. ಅದಕ್ಕೇನು ಕಾರಣ ಅನ್ನೋದು ನನಗೆ ಗೊತ್ತಿಲ್ಲ. ಸಿನಿಮಾದಲ್ಲಿ ಇರುವಂತೆ ಮೋಹನ್‌ಲಾಲ್ ನಿಜ ಜೀವನದಲ್ಲಿ ಇಲ್ಲ ಎಂದು ಸಹೋದರ ಬಿಜು ಗೋಪಿನಾಥ್ ನಾಯರ್ ಅರೋಪಿಸಿದ್ದಾರೆ.


Click it and Unblock the Notifications











