ಸೀರೆಯುಟ್ಟು ಕಣ್ಣಲ್ಲೇ ಬಾಣ ಬಿಟ್ಟ ಕಣ್‌ ಸನ್ನೆ ಹುಡುಗಿ: "ಸೀರೆಯಲ್ಲಿ ಹುಡುಗಿಯ ನೋಡಲೇ ಬಾರದು" ಎಂದ ನೆಟ್ಟಿಗರು

By ಫಿಲ್ಮಿಬೀಟ್ ಡೆಸ್ಕ್

ಕಣ್‌ ಸನ್ನೆಯಿಂದಲೇ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆದ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಣಿನ ಒಂದೇ ಒಂದು ಸನ್ನೆ ಮಲಯಾಳಿ ಹುಡುಗಿಯ ಬದುಕನ್ನೇ ಬದಲಾಯಿಸಿತ್ತು. ರಾತ್ರಿ ಕಳೆದ ಬೆಳಗಾಗುವಷ್ಟರಲ್ಲಿ ಈ ಬ್ಯೂಟಿ ಹುಡುಗರ ಪಾಲಿಗೆ ಕ್ರಶ್ ಆಗಿದ್ದರು.

2019ರಲ್ಲಿ ತೆರೆಕಂಡಿದ್ದ ಸಿನಿಮಾ 'ಒರು ಅಡಾರ್ ಲವ್' ಸಿನಿಮಾ ನಾಯಕಿ ಈಕೆ. ಈ ಸಿನಿಮಾದ ಒಂದು ತುಣುಕನ್ನು ತಂಡ ರಿಲೀಸ್ ಮಾಡಿದ್ದಷ್ಟೇ. ಅದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣು ಮಿಟುಕಿಸಿದ ಪರಿಗೆ ಹುಡುಗರು ಹೃದಯವನ್ನೇ ಕಳೆದುಕೊಂಡಿದ್ದರು.

Wink girl Priya Prakash Varrier Glamouros Show in Wet Saree Photos Goes Viral

ಅಲ್ಲಿಂದ ಪ್ರಿಯಾ ಪ್ರಕಾಶ್ ವಾರಿಯರ್ ಅನ್ನೋ ಹೆಸರು ಕೇವಲ ದಕ್ಷಿಣ ಭಾರತದಲ್ಲಷ್ಟೇ ಅಲ್ಲ. ಉತ್ತರ ಭಾರತದಲ್ಲಿಯೂ ಜನಪ್ರಿಯವಾಯ್ತು. ಈಗ ಮತ್ತೆ ಕಣ್‌ ಸನ್ನೆ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾಳೆ. ಅದಕ್ಕೆ ಕಾರಣ, ಹೊಸ ಫೋಟೊ ಶೂಟ್. ಸೀರೆಯುಟ್ಟು ನೀರಿಗಿಳಿದ ಈ ಬ್ಯೂಟಿಯ ಫೋಟೊಗಳಿಗೆ ಹುಡುಗರು ಮತ್ತೆ ನಿದ್ದೆಯನ್ನೇ ಕಳೆದುಕೊಂಡಿದ್ದಾರೆ.

ಸೀರೆಯುಟ್ಟು ನೀರಿಗಿಳಿದ ಕಣ್ ಸನ್ನೆ ಹುಡುಗಿ

ಪ್ರಿಯಾ ಪ್ರಕಾಶ್ ವಾರಿಯರ್ ಹೊಸ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಬಾರಿ ಪಕ್ಕಾ ಮಲಯಾಳಿ ಹುಡುಗಿ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಮಲಯಾಳಿ ಹುಡುಗಿಯರು ಧರಿಸುವ ಝರಿ ಝರಿ ಬಾರ್ಡರ್ ಇರುವ ಬಿಳಿ ಸೀರೆ, ಬಿಳಿ ಬ್ಲೌಸ್ ಧರಿಸಿ ನೀರಿಗಿಳಿದು ಕ್ಯಾಮರಾ ಮುಂದೆ ಬಂದಿದ್ದಾರೆ. ಈ ಗ್ಲಾಮರಸ್ ಫೋಟೊವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೊಗಳೇ ಈಗ ವೈರಲ್ ಆಗುತ್ತಿವೆ.

ಕಣ್‌ಸನ್ನೆ ಹುಡುಗಿ ಲುಕ್‌ಗೆ ನೆಟ್ಟಿಗರು ಏನಂದ್ರು?

ಬಿಳಿ ಸೀರೆಗೆ ಬಂಗಾರದ ಬಾರ್ಡರ್ ಅದಕ್ಕೆ ಬಿಳಿ ಬಣ್ಣದ ಬ್ಲೌಸ್ ತೊಟ್ಟು ಮಿಂಚಿದ್ದಾರೆ. ಈ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಕೆಲವರಿಗೆ ಕಿಚ್ಚ ಸುದೀಪ್ 'ರನ್ನ' ಸಿನಿಮಾ ನೆನಪಾಗಿದೆ. "ಸೀರೆಯಲ್ಲಿ ಹುಡುಗಿಯ ನೋಡಲೇ ಬಾರದು" ಎಂದು ಹಾಡುವುದಕ್ಕೆ ಶುರು ಮಾಡಿದ್ದಾರೆ. ಇನ್ನೊಬ್ಬರು "ಪಕ್ಕಾ ವೈಫ್ ಮೆಟಿರಿಯಲ್" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಮಲಯಾಳಿ ಮತ್ಸ್ಯಕನ್ಯೆ" ಅಂತ ಟೈಟಲ್ ಕೊಡುತ್ತಿದ್ದಾರೆ.

'ವಿಷ್ಣು ಪ್ರಿಯ'ಳಾಗಿ ಕನ್ನಡಕ್ಕೆ ಬಂದ ಪ್ರಿಯಾ

ಪ್ರಿಯಾ ಪ್ರಕಾಶ್ ವಾರಿಯರ್ ಅತೀ ಕಡಿಮೆ ಸಮಯದಲ್ಲೇ ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿಯೂ ನಟಿಸಿದ್ದಾರೆ. ಮಲಯಾಳಂ, ತೆಲುಗು ಹಾಗೂ ಕನ್ನಡ ಭಾಷೆಯ ಸಿನಿಮಾದಲ್ಲೂ ನಟಿಸಿದ್ದಾರೆ. ಕೆ ಮಂಜು ಪುತ್ರ ಶ್ರೇಯಸ್ ಮಂಜು ನಟಿಸಿರುವ 'ವಿಷ್ಣು ಪ್ರಿಯಾ' ಸಿನಿಮಾಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಈ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಸಿನಿಮಾ ರಿಲೀಸ್ ಆದರೆ, ಕನ್ನಡದಲ್ಲೂ ಫೇಮಸ್ ಆಗಬಹುದು ಎನ್ನಲಾಗಿದೆ.


ಕಣ್‌ಸನ್ನೆ ಹುಡುಗಿ ಬಗ್ಗೆ ಏನಂತಾರೆ ಫ್ಯಾನ್ಸ್?

ಪ್ರಿಯಾ ಪ್ರಕಾಶ್ ವಾರಿಯರ್ ಒಂದು ಕಣ್‌ಸನ್ನೆಯಿಂದಲೇ ನ್ಯಾಷನಲ್ ಕ್ರಶ್ ಆಗುತ್ತಿದ್ದಂತೆ ಕೆಲವು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದರು. ಸುಖಾಸುಮ್ಮನೆ ಓವರ್ ಹೈಪ್ ಮಾಡಲಾಗುತ್ತಿದ್ದರೆ ಎಂದಿದ್ದರು. ಇದೇ ಪ್ರಿಯಾ ವೃತ್ತಿ ಬದುಕಿಗೆ ನೆಗೆಟಿವ್ ಆಗಲು ಶುರುವಾಗಿತ್ತು. 'ಒರು ಅಡಾರ್ ಲವ್' ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಆ ಬಳಿಕ ನಟಿಸಿದ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡಲೇ ಇಲ್ಲ.

More from Filmibeat

English summary
Wink girl Priya Prakash Varrier Glamouros Show in Wet Saree Photos Goes Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X