For Quick Alerts
  ALLOW NOTIFICATIONS  
  For Daily Alerts

  ಎದೆ ಸೀಳು ಕಾಣುವಂತೆ ಬಟ್ಟೆ ಧರಿಸಿದ್ದಕ್ಕೆ ಟ್ರೋಲ್: ಖಡಕ್ ಉತ್ತರ ನೀಡಿದ ಪ್ರಿಯಾ ವಾರಿಯರ್

  |

  ಸಿನಿಮಾ ಸೆಲೆಬ್ರಿಟಿಗಳು ಆಗಾಗ ಟ್ರೋಲಿಗರಿಗೆ ಆಹಾರವಾಗುತ್ತಿರುತ್ತಾರೆ. ಮಾತು, ಬಟ್ಟೆ, ಸಿನಿಮಾ ಪ್ರತಿಯೊಂದು ವಿಚಾರಕ್ಕೂ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಕಣ್ಸನ್ನೆ ಸುಂದರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಬಟ್ಟೆಯ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.

  ಇತ್ತೀಚಿಗೆ ಪ್ರಿಯಾ ಪ್ರಕಾಶ್ ಫೋಟೋ ಶೂಟ್ ಮಾಡಿದ್ದಾರೆ. ಲೆಹಂಗಾ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ತರಹೇವಾರಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಎದೆ ಭಾಗ ಕಾಣುವಂತ ಬಟ್ಟೆ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ತರಹೇವಾರಿ ರೀತಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

  ಬೆಂಬಲ ನೀಡಿ ಎಂದು ಕನ್ನಡದಲ್ಲಿ ಮನವಿ ಮಾಡಿದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ಬೆಂಬಲ ನೀಡಿ ಎಂದು ಕನ್ನಡದಲ್ಲಿ ಮನವಿ ಮಾಡಿದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

  ಕೆಲವರು ಪ್ರಿಯಾ ಅವರನ್ನು ಹೊಗಳಿದರೆ ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್ಸ್ ಹಾಕುತ್ತಿದ್ದಾರೆ. ಪ್ರಿಯಾ ಖಡಕ್ ಉತ್ತರ ನೀಡಿರುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. 'ಹೇ ಗೈಸ್, ನಾನು ಇತ್ತೀಚಿಗೆ ಪೋಸ್ಟ್ ಮಾಡಿದ ಫೋಟೋಗೆ ಬಂದಿರುವ ಕೆಲವು ಕಾಮಂಟ್ಸ್ ಗಳನ್ನು ನೋಡಿದ್ದೇನೆ. ಕೆಲವರು ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ್ದೀರಿ. ಬಹುಶಃ ನಾನು ಅವರಿಗೆ ಚಪ್ಪಾಳೆಗಳನ್ನು ನೀಡುತ್ತೇನೆ' ಎಂದಿದ್ದಾರೆ.

  'ನಾನು ಇಲ್ಲಿ ದೊಡ್ಡ ನಟಿಯಾಗಿ ಬೆಳೆಯಬೇಕೆಂದುಕೊಂಡಿದ್ದೇನೆ. ಇದೆಲ್ಲ ನನಗೆ ಹೊಸದಲ್ಲ. ನಾನು ಪ್ರತೀ ದಿನ ಈ ರೀತಿಯ ನಾಚಿಕೆಗೇಡಿನ ಮತ್ತು ಬೆದರಿಸುವ ಕಾಮೆಂಟ್ಸ್ ನೋಡುತ್ತಿರುತ್ತೇನೆ. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಪ್ರತಿಯೊಬ್ಬ ಮಹಿಳೆಗೂ ಇರಬೇಕು. ನನ್ನ ಬಗ್ಗೆ ಗಮನ ಹರಿಸಿದ್ದಕ್ಕಾಗಿ ಧನ್ಯವಾದಗಳು' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  Recommended Video

  ಸರ್ಜಾ ಕುಟುಂಬಕ್ಕೆ ನಾಳೆ ಮಹತ್ವದ ದಿನ | Chiranjeevi Sarja Family | Filmibeat Kannada

  ಪ್ರಿಯಾ ಪ್ರಕಾಶ್ ಮಲಯಾಳಂ ಸಿನಿಮಾ ಬಳಿಕ ಹಿಂದಿ ಚಿತ್ರದಲ್ಲಿ ಮಿಂಚಿದ್ದಾರೆ. ಇದೀಗ ತೆಲುಗು ಮತ್ತು ಕನ್ನಡ ಸಿನಿಮಾರಂಗದಲ್ಲೂ ಪ್ರಿಯಾ ಅಭಿನಯಿಸುತ್ತಿದ್ದಾರೆ. ವಿಷ್ಣು ಪ್ರಿಯಾ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸಿನಿಮಾ ಜೊತೆಗೆ ಜಾಹಿರಾತು ಕ್ಷೇತ್ರದಲ್ಲೂ ಪ್ರಿಯಾ ಬ್ಯುಸಿಯಾಗಿದ್ದಾರೆ.

  English summary
  Priya Prakash Varrier hits back trolls for shaming her for flaunting her body.
  Wednesday, October 14, 2020, 18:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X