"ಮೀನಾ ಮದುವೆಯಾಗಲು ರೆಡಿ" ಎಂದ ಯೂಟ್ಯೂಬರ್; ನಿತ್ಯಾ ಮೆನನ್, ಹನಿ ರೋಸ್ ಕಿರುಕುಳ ನೀಡಿದ್ದ ಕಿರಿಕ್ ಪಾರ್ಟಿ!

ಬಹುಭಾಷಾ ನಟಿ ಮೀನಾ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಪತಿ ವಿದ್ಯಾಸಾಗರ್ ನಿಧನದ ಬಳಿಕ ನಟಿ ಮೀನಾ ಮದುವೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಹಿಂದೆ ಸಾಕಷ್ಟು ಸಂದರ್ಶನಗಳಲ್ಲಿ ನಟ ಧನುಷ್‌ರನ್ನು ಮೀನಾ ಮದುವೆ ಆಗುತ್ತಾರೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿ ಅವರಿಗೆ ಸುಸ್ತಾಗಿದೆ. ಈಗ ವಿವಾದಾತ್ಮಕ ಯೂಟ್ಯೂಬರ್ ಒಬ್ಬ ಕಾಟ ಕೊಡುವುದಕ್ಕೆ ಶುರು ಮಾಡಿದ್ದಾನೆ.

ಮೀನಾ ದಕ್ಷಿಣ ಭಾರತದ ಜನಪ್ರಿಯ ನಟಿ. ರಜನಿಕಾಂತ್, ಕಮಲ್ ಹಾಸನ್, ರವಿಚಂದ್ರನ್, ವಿಷ್ಣುವರ್ಧನ್ ಅಂತಹ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. 90ರ ದಶಕದಲ್ಲಿ ಮೀನಾ ಬಹುಬೇಡಿಕೆಯ ನಟಿಯಾಗಿದ್ದರು. ಈ ಸಮಯದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ವಿವಾಹದ ಬಳಿಕ ಸಿನಿಮಾದಿಂದ ಕೊಂಚ ದೂರ ಉಳಿದಿದ್ದ ನಟಿ ಮತ್ತೆ ಕಮ್‌ ಬ್ಯಾಕ್ ಮಾಡಿದ್ದರು.

Youtuber Santhosh Varkey says he would like to marry Meena Controversial comments

ಆದರೆ, ದುರಾದೃಷ್ಟವಶಾತ್ ಮೀನಾ ಪತಿ ವಿದ್ಯಾಸಾಗರ್ ಶ್ವಾಸಕೋಸದ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದರು. ಅಂದಿನಿಂದ ಮೀನಾಗೆ ಮತ್ತೊಂದು ತಲೆ ನೋವು ಶುರುವಾಗಿತ್ತು. ಮೀನಾ ಎರಡನೇ ಮದುವೆ ಆಗುತ್ತಾರೆ. ಇತ್ತೀಚೆಗಷ್ಟೇ ಪತ್ನಿಯಿಂದ ದೂರ ಆಗಿರೋ ಧನುಷ್ ಜೊತೆ ವಿವಾಹವಾಗುತ್ತಾರೆ ಎಂಬ ಸುದ್ದಿ ಓಡಾಡಿತ್ತು. ಇದೆಲ್ಲ ಸುಳ್ಳು ಅಂತ ಹೇಳಿ ಮೀನಾನೇ ಸುಸ್ತಾಗಿದ್ದಾರೆ. ಈ ಮಧ್ಯೆ ವಿವಾದಾತ್ಮಕ ಯೂಟ್ಯೂಬರ್ ಸಂತೋಷ್ ವಾರ್ಕಿ ಒಪ್ಪಿದರೆ ಮೀನಾರನ್ನು ಮದುವೆ ಆಗಲು ರೆಡಿ ಎಂದು ಹೇಳಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಸಂತೋಷ್ ವಾರ್ಕಿ ಕೇರಳ ಮೂಲದ ವಿವಾದಾತ್ಮಕ ವಿಮರ್ಶಕ ಮತ್ತು ಯೂಟ್ಯೂಬರ್. ಆಗಾಗ ನಟಿಯನ್ನು ಕೆಣಕಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದೇ ಹೆಚ್ಚು. ಈಗ ಮೀನಾ ಹಿಂದೆ ಬಿದ್ದಿದ್ದಾನೆ. ಕೆಲವೇ ದಿನಗಳ ಹಿಂದಷ್ಟೇ ಒಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ. ಅದರಲ್ಲಿ " ಮೀನಾ ಒಪ್ಪುವುದಾದರೆ ಅವರನ್ನು ಮದುವೆ ಆಗಲು ರೆಡಿ" ಎಂದು ಹೇಳಿಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

"ಮೀನಾ ಅವರು ಒಪ್ಪಿದರೆ ನಾನು ಮದುವೆ ಆಗುವುದಕ್ಕೆ ಸಿದ್ಧ. ಅವರಿಗೆ ಮತ್ತೊಂದು ಬಾಳು ಕೊಡುತ್ತೇನೆ. ಮೀನಾಗೆ ಮಗಳಿದ್ದರೂ ನನಗೆ ಏನೂ ಸಮಸ್ಯೆಯಿಲ್ಲ. ಮಂಜು ವಾರಿಯರ್ ಅಂತಯೇ ಮೀನಾ ಕೂಡ ಒಳ್ಳೆಯ ಮಹಿಳೆ." ಎಂದು ವಿವಾದಾತ್ಮಕ ಯೂಟ್ಯೂಬರ್ ಸಂತೋಷ್ ವಾರ್ಕಿ ಹೇಳಿಕೊಂಡಿದ್ದಾರೆ. ಈತನ ಹೇಳಿಕೆ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Youtuber Santhosh Varkey says he would like to marry Meena Controversial comments

ಅಷ್ಟಕ್ಕೂ ಈ ಸಂತೋಷ್ ವಾರ್ಕಿ ಯಾರು ಅಂತಿರಾ? ಈತ ಕೇರಳದಲ್ಲಿ ತಮ್ಮ ಆವೇಷಭರಿತ ಸಿನಿಮಾ ವಿಮರ್ಶೆ ಮೂಲಕ ಫೇಮಸ್ ಆಗಿದ್ದಾನೆ. ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಕೇರಳದಾದ್ಯಂತ ಆಗಾಗ ವೈರಲ್ ಆಗುತ್ತಾನೆ. ಕೆಲವೊಮ್ಮೆ ಟೀಕೆಗೂ ಗುರಿಯಾಗುತ್ತಾನೆ. ಈತ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿಮಾನಿ ಎಂದೂ ಹೇಳಿಕೊಂಡಿದ್ದಾನೆ.

ಈತ ಕೆಲವು ವರ್ಷಗಳ ಹಿಂದ ನಿತ್ಯಾ ಮೆನನ್‌ ಅನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ. ಬಳಿಕ ಆಕೆ ಒಪ್ಪಿದರೂ ನಾನು ಮದುವೆ ಆಗುವುದಿಲ್ಲ ಎಂದೂ ಮರು ಹೇಳಿಕೆ ಕೊಟ್ಟಿದ್ದ. ಮತ್ತೊಂದು ಸಂದರ್ಭದಲ್ಲಿ ನಿತ್ಯಾ ಮೆನನ್ ಪರೋಕ್ಷವಾಗಿ ಸಂತೋಷ್ ವಾರ್ಕಿ ಕಿರುಕುಳದ ಬಗ್ಗೆ ಮಾತಾಡಿದ್ದರು. ತದ ನಂತಹ ಮತ್ತೊಬ್ಬ ಮಲಯಾಳಂ ನಟಿ ಹನಿರೋಸ್ ಬಗ್ಗೆನೂ ಕಮೆಂಟ್ ಮಾಡಿದ್ದ. ಹನಿರೋಸ್ ಸಿಕ್ಕಾಪಟ್ಟೆ ಹಾಟ್ ಅಂಡ್ ಸೆಕ್ಸಿ. ಹುಡುಗರ ಇಂದ್ರಿಯಗಳನ್ನು ಕೆರಳಿಸುವಂತಹ ದೇಹಾಕಾರವನ್ನು ಹೊಂದಿದ್ದಾರೆ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದ. ಈಗ ನಟಿ ಮೀನಾ ಹಿಂದೆ ಬಿದ್ದಿದ್ದಾನೆ.

More from Filmibeat

English summary
Youtuber Santhosh Varkey wants to marry Meena and gave life:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X