ಸ್ಯಾಂಡಲ್ ವುಡ್ ಒಗ್ಗಟ್ಟಿಗೆ ವೇದಿಕೆಯಾದ 'ಜರಾಸಂಧ'
ಮಾವಳ್ಳಿಯಿಂದ ಮೆರವಣಿಗೆ ಮೂಲಕ ಗಣೇಶನ ವಿಗ್ರಹವನ್ನು ಕತ್ರಿಗುಪ್ಪೆ ರಾಮರಾವ್ ಆಟದ ಮೈದಾನದಲ್ಲಿ ಪ್ರತಿಷ್ಠಾಪಿಸಿದ ಚಿತ್ರತಂಡ ಗಣೇಶನ ಮುಂದೆ ಆಡಿಯೋ ಬಿಡುಗಡೆ ಮಾಡಿದೆ. ಮೆರವಣಿಗೆ ಉದ್ದಕ್ಕೂ ಕುಣಿದು ಕುಪ್ಪಳಿಸಿದ ಚಿತ್ರತಂಡದ ಸದಸ್ಯರು ಮತ್ತು ನಟರು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದುಕೊಟ್ಟರು. ಗೃಹ ಸಚಿವ ಆರ್ ಅಶೋಕ್ ಧ್ವನಿಸುರುಳಿ ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗಮನಿಸಬೇಕಾದ ಅಂಶವೇನಂದರೆ, ಚಿತ್ರೋದ್ಯಮ ಒಗ್ಗಟ್ಟು ಪ್ರದರ್ಶಿಸಿದ್ದು. ಕನ್ನಡ ಚಿತ್ರರಂಗದ ಎಲ್ಲಾ ಪ್ರಮುಖ ನಟರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನಸುಗಾರ ರವಿಚಂದ್ರನ್ ಶೂಟಿಂಗ್ ರದ್ದುಪಡಿಸಿ ಕಾರ್ಯಕ್ರಮಕ್ಕೆ ಬಂದಿದ್ದು ನಾವೆಲ್ಲರೂ ಒಂದಾದರೆ ನಮಗಾರು ಸಾಟಿ ಎನ್ನುವಂತಿತ್ತು.
ಪುನೀತ್ ರಾಜಕುಮಾರ್, ದರ್ಶನ್ ತೂಗುದೀಪ್, ಗಣೇಶ್, ನೆನಪಿರಲಿ ಪ್ರೇಮ್, ತಬಲಾ ನಾಣಿ, ನಗರದ ವಿವಿಧ ವಾರ್ಡ್ ನ ಜನಪ್ರತಿನಿಧಿಗಳು, ಅವ್ರು ಇವ್ರು ಅನ್ಕೊಂಡು ಬಹಳಷ್ಟು ಜನ ಭಾಗವಹಿಸಿ ಕಾರ್ಯಕ್ರಮಕ್ಕೆ ಒಂದು ಅರ್ಥ ಕಲ್ಪಿಸಿಕೊಟ್ಟರು. ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲಿ ದುನಿಯಾ ವಿಜಯ್, ಪ್ರಣೀತಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಕನ್ನಡದ ರೆಹಮಾನ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.


Click it and Unblock the Notifications












