ಅಭಿಷೇಕ್ ಅಂಬರೀಶ್ 2ನೇ ಸಿನಿಮಾ ಆಡಿಯೋ ಬೃಹತ್ ಮೊತ್ತಕ್ಕೆ ಸೇಲ್!

ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದುನಿಯಾ ಸೂರಿ ನಿರ್ದೇಶನ ಮಾಡಿರೋದ್ರಿಂದ ಸಹಜವಾಗಿಯೇ ಕೂತೂಹಲ ಗರಿಗೆದರಿದೆ. ಸದ್ಯ ಇವರಿಬ್ಬರ ಕಾಂಬಿನೇಷನ್‌ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.

ಮೊದಲನೇ ಸಿನಿಮಾ 'ಅಮರ್' ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಲವರ್ ಬಾಯ್ ಎಂಟ್ರಿ ಕೊಟ್ಟಿದ್ದ ಅಭಿಷೇಕ್‌ಗೆ ಎರಡನೇ ಸಿನಿಮಾಗೆ ದಾರಿ ಬದಲಿಸಿದ್ದರು. ಮಾಸ್ ಲುಕ್‌ನಲ್ಲಿ ಬ್ಯಾಡ್ ಮ್ಯಾನರ್ಸ್ ಮೂಲಕ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇನ್ನೂ ಪ್ರಚಾರ ಶುರು ಮಾಡುವ ಮೊದಲೇ 'ಬ್ಯಾಡ್ ಮ್ಯಾನರ್ಸ್'ಗೆ ಬೇಡಿಕೆ ಹೆಚ್ಚಾಗಿದೆ. ಆಡಿಯೋ ಬೃಹತ್ ಮೊತ್ತಕ್ಕೆ ಸೇಲ್ ಆಗಿದೆ.

ದೊಡ್ಡ ಮೊತ್ತಕ್ಕೆ 'ಬ್ಯಾಡ್ ಮ್ಯಾನರ್ಸ್' ಆಡಿಯೋ ಸೇಲ್

ದುನಿಯಾ ಸೂರಿ ಸಿನಿಮಾ ಬಗ್ಗೆ ಸಿನಿಪ್ರಿಯರಿಗೆ ಕುತೂಹಲ ದುಪ್ಪಟ್ಟಿರುತ್ತೆ. ಮಾಸ್ ಅಂಡ್ ರಗಡ್ ಸಿನಿಮಾಗಳನ್ನು ನಿರ್ದೇಶನ ಮಾಡುವುದರಲ್ಲಿ ದುನಿಯಾ ಸೂರಿ ಎತ್ತಿದ ಕೈ. ಇನ್ನುರೆಬೆಲ್ ಸ್ಟಾರ್ ಪುತ್ರನಿಗೆ ಸಿನಿಮಾ ಮಾಡ್ತಾರೆ ಅಂದ್ರೆ ಅವರ ಅಭಿಮಾನಿಗಳಿಗಂತೂ ನಿರೀಕ್ಷೆ ಹೆಚ್ಚಿರುತ್ತೆ. ಅದಕ್ಕೆ ತಕ್ಕಂತೆ 'ಬ್ಯಾಡ್ ಮ್ಯಾನರ್ಸ್' ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಇದೇ ಸುದ್ದಿ.

Abhishek Ambareesh Starrer Bad Manners Audio Sold For 1 Cr to Anand Audio

ಆನಂದ್ ಆಡಿಯೋ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಆಡಿಯೋ ಹಕ್ಕುಗಳನ್ನು ಸುಮಾರು 1 ಕೋಟಿ ರೂ.ಗೆ ಪಡೆದುಕೊಂಡಿದೆ ಎನ್ನಲಾಗಿದೆ. ಆನಂದ್ ಆಡಿಯೋ ಮಾಲೀಕರೊಂದಿಗೆ ಅಭಿಷೇಕ್ ಅಂಬರೀಶ್ ಹಾಗೂ ನಿರ್ಮಾಪಕ ಸುಧೀರ್ ಒಪ್ಪಂದ ಮಾಡಿಕೊಂಡ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2ನೇ ಚಿತ್ರಕ್ಕೆ ದೊಡ್ಡ ಪಡೆದ ಸಿನಿಮಾ

'ಬ್ಯಾಡ್ ಮ್ಯಾನರ್ಸ್' ಸಿನಿಮಾದಲ್ಲಿ ಸುಮಾರು ಐದು ಹಾಡುಗಳಿವೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸೂರಿ ಹಾಗೂ ಚರಣ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾದ ಹಾಡುಗಳು ಸೂಪರ್‌ ಡೂಪರ್ ಹಿಟ್ ಆಗುತ್ತೆ. 'ಟಗರು', 'ಪಾಪ್‌ ಕಾರ್ನ್ ಮಂಕಿ ಟೈಗರ್' ಅಂತಹ ಸಿನಿಮಾಗಳು ಮ್ಯೂಸಿಕಲ್ ಆಗಿ ಸಖತ್ ಸೌಂಡ್ ಮಾಡಿದ್ದವು.

ಅಭಿಷೇಕ್ ಅಂಬರೀಶ್ ಮಾಸ್ ಅವತಾರ, ಸುಕ್ಕಾ ಸೂರಿ ರಗಡ್ ಸ್ಟೋರಿ ಇವೆಲ್ಲವೂ ಸಿನಿಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸಿನಿಮಾ ಇದೇ ನವೆಂಬರ್ 18ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಹೀಗಾಗಿ ಸಿನಿಮಾ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಚಿತ್ರತಂಡ ಬ್ಯುಸಿನೆಸ್ ಆರಂಭಿಸಿದೆ.

Abhishek Ambareesh Starrer Bad Manners Audio Sold For 1 Cr to Anand Audio

ರಾಜಕೀಯಕ್ಕಿಂತ ಸಿನಿಮಾದಲ್ಲಿ ಬ್ಯುಸಿ

ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರುತ್ತಾರೆ ಎಂಬ ಗುಲ್ಲೆದ್ದಿತ್ತು. ಆದರೆ, ಅಭಿಷೇಕ್ ಅಂಬರೀಶ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮುಗಿದಿದೆ. ರಿಲೀಸ್‌ಗೆ ರೆಡಿಯಾಗುತ್ತಿದೆ.

'ಬ್ಯಾಡ್ ಮ್ಯಾನರ್ಸ್' ಬಳಿಕ ಕೃಷ್ಣ ನಿರ್ದೇಶನದ 'ಕಾಳಿ' ಸೆಟ್ಟೇರಿದೆ. ಇದರ ಹಿಂದೆನೇ 'ಮದಗಜ' ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದಲ್ಲೊಂದು ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಅಂಬಿ ಪುತ್ರ ಸ್ಯಾಂಡಲ್‌ವುಡ್‌ ಜರ್ನಿ ಎರಡನೇ ಸಿನಿಮಾದಿಂದ ಸದ್ದು ಮಾಡೋಕೆ ಶುರು ಮಾಡಿದೆ.

More from Filmibeat

English summary
Abhishek Ambareesh Starrer Bad Manners Audio Sold For 1 Cr to Anand Audio, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X