"ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು.. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು":ಅಧ್ಯಕ್ಷರ ಹೊಸ ಹಾಡು

ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ಹೀರೊಗಳು ಮತ್ತೊಬ್ಬ ಹೀರೊ ಸಿನಿಮಾಗೆ ಹಾಡೋದು ಹೊಸದೇನಲ್ಲ. ಅಷ್ಟೇ ಅಲ್ಲದೆ ಸ್ಟಾರ್ ಹೀರೊಗಳು ಹೊಸಬರ ಸಿನಿಮಾಗಳಿಗೆ ಹಾಡಿದ ಉದಾಹರಣೆ ಸಾಕಷ್ಟಿದೆ. ಈ ಸಂಸ್ಖೃತಿ ಅತೀ ಹೆಚ್ಚಾಗಿ ಕಂಡು ಬರೋದು ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬೇರೆ ನಟರ ಸಿನಿಮಾಗಳಲ್ಲಿಗೆ ಧ್ವನಿ ನೀಡುತ್ತಿದ್ದರು. ಹೊಸ ಸಿನಿಮಾಗಳಿಗೂ ಹಾಡಿ ಪ್ರೋತ್ಸಾಹ ನೀಡುತ್ತಿದ್ದರು. ಇವರೊಂದಿಗೆ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಕೂಡ ಹಾಡಿ ಸಿನಿಪ್ರಿಯರಿಗೆ ಕಿಕ್ ಕೊಡುತ್ತಿದ್ದರು.

Actor Sharan Sung a Song For Kannada Movie Just Pass

ಈಗ ಬಹಳ ದಿನಗಳ ಬಳಿಕ ಅಧ್ಯಕ್ಷರು ಮತ್ತೆ ಅಖಾಡಕ್ಕೆ ಇಳಿಸಿದ್ದಾರೆ. ಮೈಕ್ ಮುಂದೆ ನಿಂತು ಬೇರೆ ನಟನ ಸಿನಿಮಾಗೆ ಹಾಡಿದ್ದಾರೆ. ಹೀರೊ ಆಗಿಯೂ ಸಕ್ಸಸ್ ಕಂಡಿರೋ ಶರಣ್, ಗಾಯಕರಾಗಿಯೂ ಗೆದ್ದಿದ್ದಾರೆ. ಅದರಂತೆ 'ಜಸ್ಟ್ ಪಾಸ್' ಅನ್ನೋ ಸಿನಿಮಾದ ಹಾಡೊಂದಕ್ಕೆ ಶರಣ್ ಹಾಡಿದ್ದಾರೆ.

'ಜಸ್ಟ್ ಪಾಸ್' ಸಿನಿಮಾವನ್ನು ಕೆ.ಎಂ.ರಘು ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ ಹಾಡಿನ ಸಾಲುಗಳು ಮಜವಾಗಿದೆ. "ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು.. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು." ಎಂದು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

Actor Sharan Sung a Song For Kannada Movie Just Pass

"ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು" ಅನ್ನುವಂತಹ ಮಜವಾದ ಸಾಲುಗಳನ್ನು ಸಿನಿ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಈ ಹಾಡಿಗೆ ಹರ್ಷವರ್ಧನ್ ರಾಜ್ ಟ್ಯೂನ್ ಹಾಕಿದ್ದು, ಈ ಹಾಡಿನಲ್ಲಿ ಸಾಧುಕೋಕಿಲ ಕಾಣಿಸಿಕೊಳ್ಳಲಿದ್ದಾರೆ.

ಕಾಮಿಡಿ ಕಿಂಗ್ ಸಾಧುಕೋಕಿಲಾಗೆ ಮತ್ತೊಬ್ಬ ಹಾಸ್ಯ ನಟ ಶರಣ್ ಹಾಡಿರೋದು ಈ ಹಾಡಿನ ವಿಶೇಷ. ಈಗಾಗಲೇ ಶರಣ್ ಹಾಡಿದ ಹಲವು ಹಾಡುಗಳು ಸಂಗೀತ ಪ್ರಿಯರಿಗೆ ಸಖತ್ ಮಜಾ ಕೊಟ್ಟಿದೆ. ಅಲ್ಲದೆ ಯೂಟ್ಯೂಬ್‌ನಲ್ಲೂ ದಾಖಲೆಗಳನ್ನೂ ಬರೆದಿವೆ.

ಅಂದ್ಹಾಗೆ 'ಜಸ್ಟ್ ಪಾಸ್' ಸಿನಿಮಾವನ್ನು ಕೆ.ವಿ.ಶಶಿಧರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ. ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಕೆ.ಎಂ.ರಘು ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು ಪ್ರಮುಖ ಪಾತ್ರದಲ್ಲಿ ಶ್ರೀ ನಾಯಕನಾಗಿ ನಟಿಸಿದ್ದಾರೆ. ಪ್ರಣತಿ ಈ ಸಿನಿಮಾದ ನಾಯಕಿ. ಇವರೊಂದಿಗೆ ಸಾಧುಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ(ಕಾಂತಾರ), ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ ಮುಂತಾದವರು ನಟಿಸಿದ್ದಾರೆ.

More from Filmibeat

English summary
Actor Sharan Sung a Song For Kannada Movie Just Pass. This is a new comers movie, and Sadhu Kokila, Rangayana Raghu, and Suchendra Prasad are experienced actors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X