'ದಿ ಕಾಶ್ಮೀರ್ ಫೈಲ್ಸ್' ಬಳಿಕ 'ದಿ ಕಾಶ್ಮೀರ್' ಸಾಂಗ್: ಮತ್ತೆ ವಿವಾದ ಸೃಷ್ಟಿಸುತ್ತಾ?

ಬಾಲಿವುಡ್ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿತ್ತು. ಪರ-ವಿರೋಧದ ನಡುವೆಯೂ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಾಕ್ಸಾಫೀಸ್‌ನಲ್ಲೂ ಬೇಜಾನ್ ಸದ್ದು ಮಾಡಿತ್ತು. ಸೂಪರ್‌ಸ್ಟಾರ್ ಸಿನಿಮಾಗಳನ್ನೇ ಹಿಂದಿಕ್ಕಿ ಗೆದ್ದು ಬೀಗಿತ್ತು.

'ದಿ ಕಾಶ್ಮೀರ್ ಫೈಲ್ಸ್' ಕಾಶ್ಮೀರಿ ಪಂಡಿತರ ಹತ್ಯೆಯನ್ನು ಆಧರಿಸಿ ಸಿನಿಮಾ ಮಾಡಲಾಗಿತ್ತು. 90 ದಶಕದಲ್ಲಿ ನಡೆದ ಈ ಹತ್ಯೆಯನ್ನು ಸಿನಿಮಾದಲ್ಲಿ ವಿವೇಕ್ ಅಗ್ನಿಹೋತ್ರಿ ಬಿಂಬಿಸಿದ್ದರು. ಈ ಸಿನಿಮಾ ದೇಶಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಭಾರತದಲ್ಲಿಯೇ ಹಲವು ಮಂದಿ ಈ ಸಿನಿಮಾವನ್ನು ವಿರೋಧಿಸಿದ್ದರು. ವಾಸ್ತವಕ್ಕೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವಿರುದ್ಧವಾಗಿದೆ ಎಂದು ಆರೋಪ ಮಾಡಲಾಗಿತ್ತು.

ಇನ್ನೊಂದು ಕಡೆ ಹಲವು ದೇಶಗಳು ಕೂಡ ಈ ಸಿನಿಮಾವನ್ನು ಬಿಡುಗಡೆಗೆ ಅನುಮತಿ ನೀಡಿರಲಿಲ್ಲ. ಇದೇ ವಿಚಾರಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರೋಧ ಕೂಡ ವ್ಯಕ್ತಪಡಿಸಿದ್ದರು. ಈ ವಿವಾದಾತ್ಮಕ ಸಿನಿಮಾದ ಬೆನ್ನಲ್ಲೇ ಮತ್ತೊಂದು ಕಾಶ್ಮೀರಕ್ಕೆ ಸಂಬಂಧಿಸಿದ ಹಾಡೊಂದು ಬಿಡುಗಡೆಯಾಗಿದೆ.

After The Kashmir Files Movie The Kashmir Song Will Be Releasing

'ದಿ ಕಾಶ್ಮೀರ್ ಫೈಲ್ಸ್‌'ನಲ್ಲಿ ಬಿಂಬಿಸಿದಂತೆ ಕರಾಳತೆಯನ್ನಯ ಬಿಚ್ಚಿಡುವ 'ದಿ ಕಾಶ್ಮೀರ' ಸಾಂಗ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಶನಿವಾರ ( ಜೂನ್ 18) ಕಾಶ್ಮೀರ ಸಾಂಗ್ ಬಿಡುಗಡೆಯಾಗಲಿದೆ. ಈ ಹಾಡಿನಲ್ಲಿ ಕೋವಿದ್ ಮಿತ್ತಲ್ ಎಂಬುವವರು ನಟಿಸಿದ್ದು, ಕಾಶ್ಮೀರ ಹಿಂದೂಗಳಿಗೆ ಸಮರ್ಪಣೆ ಮಾಡುವ ಹಾಡು ಎಂದಿದ್ದಾರೆ.

ಹಾಡಿನ ಬರುವ ನಾಯಕ ಆದಿತ್ಯ 25 ವರ್ಷದ ಬಳಿಕ ತನ್ನ ತಾಯ್ನಡು ಕಾಶ್ಮೀರಕ್ಕೆ ಬರುತ್ತಾನೆ. ಆ ವೇಳೆ ಹಳೆ ನೆನೆಪುಗಳನ್ನು ಮೆಲುಕು ಹಾಕುತ್ತಾ ಸಾಗುವಾಗ ಕಾಶ್ಮೀರದ ಕರಾಳತೆಯನ್ನು ಹಾಡಿನಲ್ಲಿ ವಿವರಿಸಲಾಗಿದೆ. ಕೋವಿದ್ ಮಿತ್ತಲ್ ಹಾಗೂ ವೀರ್ ಸಮರ್ಥ್ ಈ ಹಾಡಿನಲ್ಲಿ ನಟಿಸಿದ್ದಾರೆ.

After The Kashmir Files Movie The Kashmir Song Will Be Releasing

'ದಿ ಕಾಶ್ಮೀರ' ಹಾಡಿಗೆ ಶೇಖರ್ ಅಸ್ತಿತ್ವ ಸಾಹಿತ್ಯ ರಚಿಸಿದ್ದರೆ. ವೀರ್ ಸಮರ್ಥ್ ಸಂಗೀತ ನೀಡುವುದರ ಜೊತೆಗೆ ಧ್ವನಿ ನೀಡಿದ್ದಾರೆ. ಕ್ರಿಶ್ ಜೋಷಿ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮನು ಛಾಯಾಗ್ರಹಣ, ದೀಪಕ್ ಕೆ ರಾಜು ಸಂಕಲನ ಹಾಡಿಗಿದ್ದು, ಕೆಎಂ ಮೀಡಿಯಾ ಮತ್ತು ಪ್ರೊಡಕ್ಷನ್ ನಡಿ ನಿರ್ಮಾಣ ನಿರ್ವಹಣೆ ಸಾಗರ್ ಬರರ್ದಾಪುರೆ ಹೊತ್ತುಕೊಂಡಿದ್ದಾರೆ. ಮನಾಲಿಯಲ್ಲಿ ಈ ಹಾಡನ್ನು ಶೂಟ್ ಮಾಡಲಾಗಿದೆ.

More from Filmibeat

English summary
After The Kashmir Files Movie The Kashmir Song Will Be Releasing, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X