For Quick Alerts
  ALLOW NOTIFICATIONS  
  For Daily Alerts

  "ಹಾಸ್ಟೆಲ್ ಹುಡುಗರಲ್ಲ.. ದುರಾಸೆಯ ಹುಡುಗರು.. 10 ಮಿಲಿಯನ್ ವೀವ್ಸ್ ಬೇಕಂತೆ"– ಅಜನೀಶ್!

  |

  ಸ್ಯಾಂಡಲ್‌ವುಡ್‌ನಲ್ಲಿ 'ಹಾಸ್ಟೆಲ್ ಹುಡುಗರ' ಹಾವಳಿ ಜೋರಾಗಿದೆ. ಸಿನಿಮಾ ಪ್ರಮೋಷನ್‌ಗೆ ಅಂತ ಚಿತ್ರ-ವಿಚಿತ್ರವಾದ ಪ್ರಚಾರವನ್ನು ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಿಡ್ನಾಪ್ ಮಾಡಿರೋ ನಾಟಕ ಆಡಿದ್ದರು.

  'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಹೊಸಬರ ಸಿನಿಮಾದ ಹಾಡು ಮೊದಲ ಹಾಡು ರಿಲೀಸ್ ಆಗಿದೆ. ಹೊಸಬರ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಾಸ್ಟೆಲ್ ಪ್ರೊಟೆಸ್ಟ್ ಸಾಂಗ್ ಬಿಡುಗಡೆಯಾಗದ ಮೂರೇ ದಿನಕ್ಕೆ ಎರಡು ಮಿಲಿಯನ್ ಹತ್ತಿರ ವೀವ್ಸ್ ಗಿಟ್ಟಿಸಿಕೊಂಡಿದೆ.

  'ಹಾಸ್ಟೆಲ್ ಹುಡುಗರು' ಸಿನಿಮಾವನ್ನು ರಿಲೀಸ್ ಮಾಡಲು ಮುಂದೆ ಬಂದ ರಕ್ಷಿತ್ ಶೆಟ್ಟಿ!'ಹಾಸ್ಟೆಲ್ ಹುಡುಗರು' ಸಿನಿಮಾವನ್ನು ರಿಲೀಸ್ ಮಾಡಲು ಮುಂದೆ ಬಂದ ರಕ್ಷಿತ್ ಶೆಟ್ಟಿ!

  ಹೀಗಿದ್ದರೂ ಹಾಸ್ಟೆಲ್ ಹುಡುಗರು 10 ಮಿಲಿಯನ್ ವೀವ್ಸ್ ಆಗಲೇಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರಂತೆ. ಅದಕ್ಕಾಗಿ ಅಜನೀಶ್ ಲೋಕನಾಥ್ ಪ್ರತ್ರವೊಂದನ್ನು ಬರೆದಿದ್ದಾರೆ. ಅಂದ್ಹಾಗೆ, ಈ ಪತ್ರ ಕೂಡ ಪ್ರಚಾರಕ್ಕಾಗಿಯೇ ಬರೆದಿದ್ದಾರೆ. ಆದರೆ, ಈ ಲೆಟರ್‌ ಓದುಗರಿಗೆ ಹಾಸ್ಯಸ್ಪದ ಎನಿಸಲಿದ್ದು, ನಗು ತರಿಸಲಿದೆ. ಆ ಪತ್ರದ ಸಾರಾಂಶ ಹೀಗಿದೆ ನೋಡಿ.

  ಅಕ್ಷರಶ: ದುರಾಸೆಯ ಹುಡುಗರು

  ಅಕ್ಷರಶ: ದುರಾಸೆಯ ಹುಡುಗರು

  "ಕರ್ನಾಟಕದ ಜನತೆಯೊಂದು ಮನವಿ. ಈ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಕಿಡಿಗೇಡಿಗಳ ತಂಡ ನನ್ನ ಕಿಡ್ನಾಪ್ ಮಾಡಿ ಎರಡು ವಾರಗಳಾಗಿವೆ. ಹಾಡು ಬಿಡುಗಡೆಯಾಗಿ 3 ದಿನಗಳಾಗಿದ್ದರೂ ಕೂಡ ಇವರು ನನ್ನನ್ನು ಬಿಡುಗಡೆ ಮಾಡುತ್ತಿಲ್ಲ. ಮೊದಲು ಒಂದು 1 ಮಿಲಿಯನ್ ವೀವ್ಸ್ ಆದರೆ ಸಂತೋಷ ಎನ್ನುತ್ತಿದ್ದ ಇವರು, ಹಟಾತ್ತಾನೆ 10 ಮಿಲಿಯನ್ ವೀವ್ಸ್‌ಗೆ ಬೇಡಿಕೆ ಇಟ್ಟಿದ್ದಾರೆ. ಅಕ್ಷರಶ: ದುರಾಸೆಯ ಹುಡುಗರು." ಎಂದು ಅಜನೀಶ್ ಲೋಕನಾಥ್ ಪತ್ರದಲ್ಲಿ ಬರೆದಿದ್ದಾರೆ.

  "10 ಮಿಲಿಯನ್ ವೀವ್ಸ್ ಬೇಕಂತೆ"

  "ರಾಜ್ಯದ ಜನತೆಗೊಂದು ಕಳಕಳಿಯ ಮನವಿ. ದಯಮಾಡಿ ನೀವುಗಳೆಲ್ಲ ಹಾಸ್ಟೆಲ್ ಪ್ರೊಟೆಸ್ಟ್ ಹಾಡನ್ನು ನೋಡಿ ಲೈಕ್, ಕಮೆಂಟ್ ಮತ್ತು ಶೇರ್ ಮಾಡಿ. ಅತೀ ಶೀಘ್ರದಲ್ಲಿ 10 ಮಿಲಿಯನ್ ವೀವ್ಸ್ ಗಡಿ ಮುಟ್ಟಲು ಸಹಯೋಗಿಸಬೇಕು. ಇಲ್ಲವಾದಲ್ಲಿ ಈ ವಿಚಿತ್ರ ಜೀವಿಗಳು ನನ್ನನ್ನು ಜೀವಂತವಾಗಿ ಉಳಿಸುವುದಿಲ್ಲ. " ಎಂದು ಅಜನೀಶ್ ಲೋಕನಾಥ್ ಅಳಲು ತೋಡಿಕೊಂಡಿದ್ದಾರೆ.

  ನನ್ನ ಬಲಗೈಯಲ್ಲಿ ಉಳಿದಿರೋದು ಎರಡೇ ಬೆರಳು

  ನನ್ನ ಬಲಗೈಯಲ್ಲಿ ಉಳಿದಿರೋದು ಎರಡೇ ಬೆರಳು

  "ನನ್ನ ಬಲಗೈಯಲ್ಲಿ ಉಳಿದಿರುವ ಎರಡೇ ಎರಡು ಬೆರಳುಗಳಲ್ಲಿ ಈ ಪತ್ರವನ್ನು ಬರೆದಿದ್ದೇನೆ. ದಯವಿಟ್ಟು ನನ್ನ ತಡೆಯಲಾಗದ ನೋವನ್ನರಿತು ಸಹಕರಿಸಿ. ಈ ಕಾರ್ಯವನ್ನು ಸಾಧಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಅಥವಾ ಯಾವುದೇ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಸಾಧ್ಯವಿಲ್ಲ. ಕೇವಲ ನಿಮ್ಮಿಂದ ಅಂದರೆ, ನಾಡಿನ ಸಿನಿಮಾ ಅಭಿಮಾನಿಗಳು ಹಾಗೂ ಕಲಾರಸಿಕರಿಂದ ಮಾತ್ರ ಸಾಧ್ಯ." ಎಂದು ಪತ್ರ ಮುಗಿಸಿದ್ದಾರೆ.

  ಟ್ರೆಂಡಿಂಗ್‌ನಲ್ಲಿದೆ ಎರಡನೇ ಸಾಂಗ್

  ಟ್ರೆಂಡಿಂಗ್‌ನಲ್ಲಿದೆ ಎರಡನೇ ಸಾಂಗ್

  ಅಜನೀಶ್ ಲೋಕನಾಥ್ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗಾಗಿ ಟ್ಯೂನ್ ಹಾಕಿರೋ ಮೊದಲ ಹಾಡು ಗೆದ್ದಿದೆ. ಮ್ಯೂಸಿಕ್ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಮೂರು ದಿನಗಳಿಂದಲೂ ಟ್ರೆಂಡಿಂಗ್‌ನಲ್ಲದ್ದು, ಇಡೀ ತಂಡ ಹ್ಯಾಪಿಯಾಗಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವುದಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಎರಡನೇ ಹಾಡು ಕೂಡ ಪ್ರಮೋಷನಲ್ ಸಾಂಗ್ ಆಗಿದ್ದು, ಕಿಕ್ ಕೊಡುತ್ತೆ ಅಂತ ಭರವಸೆ ನೀಡುತ್ತಾರೆ.

  English summary
  Ajaneesh Loknath, Music Director, Wrote a Letter About Hostel Hudugaru, Know More.
  Wednesday, January 11, 2023, 14:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X