Tagaru Palya: ನೆನಪಿರಲಿ ಪ್ರೇಮ್ ಪಕ್ಕಾ ಹಳ್ಳಿ ಹುಡುಗಿ.. "ಸೂರ್ಯಕಾಂತಿ ನಾನು" ಎಂದು ಹೆಜ್ಜೆ ಹಾಕಿದ ಲವ್ಲಿಸ್ಟಾರ್ ಪುತ್ರಿ

ಬಾಲಿವುಡ್‌ನಲ್ಲಷ್ಟೇ ಅಲ್ಲ ಸ್ಯಾಂಡಲ್‌ವುಡ್‌ನಲ್ಲೂ ಸ್ಟಾರ್ ಮಕ್ಕಳು ಒಬ್ಬೊಬ್ಬರಾಗೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯಕ್ಕೀಗ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಆ ಸಿನಿಮಾವೇ 'ಟಗರು ಪಲ್ಯ'.

ಡಾಲಿ ಧನಂಜಯ್ 'ಟಗರು ಪಲ್ಯ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ಗೊತ್ತೇ ಇದೆ. ಇದೇ ಸಿನಿಮಾದ ಎರಡನೇ ಹಾಡು ಈಗ ಹೊರಬಿದ್ದಿದೆ. ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹಾಗೂ ನಾಗಭೂಷಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಧನಂಜಯ್ ತಾವು ಸಿನಿಮಾಗಳಲ್ಲಿ ನಟಿಸುವುದರೊಂದಿಗೆ ನಿರ್ಮಾಣದಲ್ಲೂ ಬ್ಯೂಸಿಯಾಗಿದ್ದಾರೆ. ಹೊಸ ಪ್ರತಿಭೆಗಳಿಗೆ ತಮ್ಮ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಮೂಲಕ ಅವಕಾಶಗಳನ್ನು ಕೊಡುತ್ತಿದ್ದಾರೆ. ಈಗ ಇದೇ ಸಂಸ್ಥೆಯಿಂದ ಮೂರನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದೇ ಈ 'ಟಗರು ಪಲ್ಯ'.

tagaru-palya-suryakanthi-song-out

'ಟಗರು ಪಲ್ಯ' ಸಿನಿಮಾ ಮೊದಲನೇ ಹಾಡನ್ನು ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಮಾಡಲಾಗಿತ್ತು. ಎರಡನೇ ಹಾಡನ್ನು ರಿಲೀಸ್ ಮಾಡಲಾಗಿದೆ. ಇಡೀ ಹಾಡನ್ನು ಅಮೃತಾ ಪ್ರೇಮ್ ಮೇಲೆ ಫೀಚರ್ ಮಾಡಲಾಗಿದ್ದು, ಗ್ರಾಮೀಣ ಹಿನ್ನೆಲೆಯಲ್ಲಿ ಮೂಡಿ ಬಂದಿದೆ.

ನಾಗಭೂಷಣ ಹಾಗೂ ಅಮೃತಾ ಪ್ರೇಮ್ ಜೋಡಿ 'ಟಗರು ಪಲ್ಯ' ಎರಡನೇ ಹಾಡು "ಸೂರ್ಯಕಾಂತಿ ನಾನು.." ಎಂಬ ಮೆಲೋಡಿ ಹಾಡನ್ನು ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ. ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಲಂಗ ಧಾವಣಿ ತೊಟ್ಟು ಪಕ್ಕಾ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. ಈ ಹಾಡಿಗೆ ಸ್ವತಃ ಡಾಲಿ ಧನಂಜಯ್ ಸಾಹಿತ್ಯ ರಚಿಸಿರುವುದು ವಿಶೇಷ.

ವಾಸುಕಿ ವೈಭವ್ ಟ್ಯೂನ್ ಹಾಕಿರುವ "ಸೂರ್ಯಕಾಂತಿ ನಾನು.." ಹಾಡಿಗೆ ಮಾಧುರಿ ಶೇಷಾದ್ರಿ ಧ್ವನಿ ನೀಡಿದ್ದಾರೆ. ಹಳ್ಳಿ ಸೊಗಡಿನ ಕಂಪು ಪಸರಿಸುವ ಈ ಮೆಲೋಡಿ ಹಾಡಿಗೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಕುಣಿದು ಕುಪ್ಪಳಿಸಿದ್ದಾರೆ.

tagaru-palya-suryakanthi-song-out

ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ್ ನಿರ್ಮಿಸುತ್ತಿರುವ 'ಟಗರು ಪಲ್ಯ' ಸಿನಿಮಾಗೆ ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಿಂದ ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. 'ಟಗರು ಪಲ್ಯ' ಮೂಲಕ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಎಲ್ಲರ ನಿರೀಕ್ಷೆ ಈಗ ಇವರ ಮೇಲಿದೆ.

'ಟಗರು ಪಲ್ಯ' ಸಿನಿಮಾದಲ್ಲಿ ನಾಗಭೂಷಣ ಹಾಗೂ ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ತಾರಾ ಬಳಗವೇ ಜೊತೆಯಾಗಿದೆ. ಈಗಾಗಲೇ ಸಿನಿಮಾ ಪ್ರಚಾರ ಆರಂಭ ಆಗಿದ್ದು, ಪಕ್ಕಾ ಹಳ್ಳಿ ಸೊಗಡಿನ ಸಿನಿಮಾವನ್ನು ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್ ಮಾಡುವುದಕ್ಕೆ ನಿರ್ಮಾಪಕ ಡಾಲಿ ಧನಂಜಯ್ ಹಾಗೂ ಇಡೀ ತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Amrutha Prem and Nagabhushan Starrer Tagaru Palya Movie Suryakanthi song out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X