ಆನಂದ್ ಆಡಿಯೋದಿಂದ ಟ್ಯಾಲೆಂಟ್ ಹಂಟ್; ಹೊಸ ಪ್ರತಿಭೆಗಳಿಗೊಂದು ಭರ್ಜರಿ ವೇದಿಕೆ

ಕನ್ನಡ ಚಿತ್ರರಂಗದ ಪ್ರತಿಷ್ಠಿತ ಆಡಿಯೋ ಕಂಪನಿಗಳಲ್ಲಿ ಆನಂದ್ ಆಡಿಯೋ ಕೂಡ ಒಂದು. ಸ್ಯಾಂಡಲ್‌ವುಡ್ ಬಿಗ್ ಬಜೆಟ್ ಸಿನಿಮಾಗಳ ಆಡಿಯೋ ಹಕ್ಕನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡುವ ಕಂಪನಿ ಇದು. ಇತ್ತೀಚೆಗೆ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ'ಯ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿ ಸುದ್ದಿಯಲ್ಲಿದೆ.

ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುತ್ತಿರುವ ಬಹುತೇಕ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಇದೇ ಕಂಪನಿ ಖರೀದಿ ಮಾಡುತ್ತಿದೆ. ಈಗ ಇದೇ ಜೋಷ್‌ನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಹೊಸ ಪ್ರತಿಭೆಗಳ ಅನ್ವೇಷಣೆಗೆ ಮುಂದಾಗಿದೆ. ಆನಂದ್ ಆಡಿಯೋ ವತಿಯಿಂದ ಆಯ್ಕೆಯಾದ ಹೊಸ ಗಾಯಕರಿಗೆ ವೇದಿಕೆ ಕಲ್ಪಿಸಲು ಮುಮದಾಗಿದೆ.

Anand Audio Launches Talent Hunt Singing Star Season 1 for New Singers

ಆನಂದ್ ಆಡಿಯೋ 'ಟ್ಯಾಲೆಂಟ್ ಹಂಟ್ ಸಿಂಗಿಂಗ್ ಸ್ಟಾರ್' ಅನ್ನು ಶೋ ನಡೆಸಲು ಮುಂದಾಗಿದೆ. ಇದು ಮೊದಲ ಸೀಸನ್ ಆಗಿದ್ದು, ಹೊಸ ಪ್ರತಿಭೆಗಳು ಈ ವೇದಿಕೆ ಮೂಲಕ ತಮ್ಮ ಟ್ಯಾಲೆಂಟ್‌ ಅನ್ನು ಪ್ರದರ್ಶನ ಮಾಡಬಹುದಾಗಿದೆ. ಕನ್ನಡದ ಪ್ರತಿಭೆಗಳಿಗೆ ಈ ಅವಕಾಶವನ್ನು ನೀಡಲಾಗುತ್ತಿದೆ.

ಕರ್ನಾಟಕದ ಮೂಲೆ ಮೂಲೆಯಲ್ಲಿ ಅಡಗಿರುವ ಗಾಯಕರನ್ನು ಹುಡುಕುವ ಪ್ರಯತ್ನ ಇದಾಗಿದೆ. ಈಗಾಗಲೇ ಇವರ ಪ್ರಯತ್ನಕ್ಕೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಮೊದಲ ಸೀಸನ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ಹಂತದ ಪ್ರಯತ್ನವಾಗಿ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ.

ಮುಂದಿನ ಹಂತದಲ್ಲಿ ಸ್ಟುಡಿಯೋ ರೌಂಡ್ ಇದ್ದು, ಅದಕ್ಕೂ ಆಡಿಷನ್ ಮೂಲಕವೇ ಆಯ್ಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಯೋಗರಾಜ್ ಭಟ್ ನಿರ್ದೇಶಿಸಿದ 'ಕರಟಕ ದಮನಕ' ಸಿನಿಮಾದ ಜನಪ್ರಿಯ ಗೀತೆಯನ್ನು ಹಾಡಿದ್ದ ಶ್ರುತಿ ಪ್ರಹ್ಲಾದ್ ಜಡ್ಜ್ ಆಗಿರಲಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ಕಲ್ಪಿಸಿಕೊಡುವುದಕ್ಕೆ ಆನಂದ್ ಆಡಿಯೋ ಮುಂದಾಗಿದೆ.

Anand Audio Launches Talent Hunt Singing Star Season 1 for New Singers

1999ರಲ್ಲಿ ಆನಂದ್ ಆಡಿಯೋ ಕಂಪನಿ ಆರಂಭ ಆಗಿತ್ತು. ಅಲ್ಲಿಂದ ಸುಮಾರು 25 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. 2011ರಲ್ಲಿ ಯೂಟ್ಯೂಬ್‌ಗೆ ಎಂಟ್ರಿ ಕೊಟ್ಟಿದ್ದ ಆನಂದ್ ಆಡಿಯೋಗೆ 12 ಮಿಲಿಯನ್‌ಗೂ ಅಧಿಕ ಚಂದಾದಾರರು ಇದ್ದಾರೆ. ಈ 13 ವರ್ಷಗಳಲ್ಲಿ 9 ಬಿಲಿಯನ್‌ಗೂ ಅಧಿಕ ವೀವ್ಸ್ ಈ ಚಾನೆಲ್‌ಗೆ ಸಿಕ್ಕಿದೆ. ಈ ಟ್ಯಾಲೆಂಟ್ ಶೋ ಮೂಲಕ ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಮುಂದಾಗಿದೆ.

More from Filmibeat

English summary
Anand Audio's Talent Hunt Singing Star Season 1 aims to discover new singing talents. An opportunity for upcoming singers to shine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X