ಮುಕೇಶ್ ಅಂಬಾನಿ ಪುತ್ರನ ಪ್ರಿ ವೆಂಡ್ಡಿಂಗ್‌ನಲ್ಲಿ ಪಾಪ್ ಕ್ವೀನ್ ರಿಹಾನ್ನಾ ಪರ್ಫಾಮೆನ್ಸ್; ಸಂಭಾವನೆ, ಕಾರ್ಯಕ್ರಮದ ಪಟ್ಟಿ ಇಲ್ಲಿದೆ

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭ ಭಾರತದ ಅತಿ ದೊಡ್ಡ ಇವೆಂಟ್‌ಗಳಲ್ಲೊಂದು ಎನಿಸಿಕೊಂಡಿದೆ. ಕಳೆದ ಹಲವು ದಿನಗಳಿಂದ ಈ ವಿವಾಹ ಪೂರ್ವ ಸಮಾರಂಭದ ಸಂಭ್ರಮದಲ್ಲಿ ಅಂಬಾನಿ ಕುಟುಂಬ ಮುಳುಗಿ ಏಳುತ್ತಿವೆ. ಈಗಾಗಲೇ ವಿಶ್ವದ ಮೂಲೆ ಮೂಲೆಯಲ್ಲಿರೋ ವಿವಿಐಪಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರೆಲ್ಲರೂ ಗುಜರಾತ್‌ನ ಜಾಮ್‌ನಗರಕ್ಕೆ ಬಂದು ಸೆಟಲ್ ಆಗಿದ್ದಾರೆ.

ಇಂದಿನಿಂದ (ಮಾರ್ಚ್ 1) ಮುಕೇಶ್ ಅಂಬಾನಿಯ ಕೊನೆಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಜೆಂಟ್ ಪ್ರಿ ವೆಡ್ಡಿಂಗ್ ಸಮಾರಂಭ ಆರಂಭ ಆಗಿದೆ. ಇಂದು (ಮಾರ್ಚ್ 1) ಈ ಸಮಾರಂಭದ ಮೊದಲನೇ ದಿನ. ಮೂರು ದಿನಗಳ ಕಾಲ ನಡೆಯೋ ಈ ಸಮಾರಂಭದ ಪ್ರಮುಖ ಆಕರ್ಷಣೆ ಪಾಪ್ ಲೋಕದ ಕ್ವೀನ್ ರಿಹಾನ್ನಾ. ಮೊದಲನೇ ದಿನ ಈ ಪಾಪ್ ತಾರೆ ರಿಹಾನ್ನಾ ಪರ್ಫಾಮೆನ್ಸ್ ಮಾಡುತ್ತಿದ್ದಾರೆ.

Anant Ambani-Radhika pre-wedding festivities Pop queen Rihanna paid 74 crore

ಅಂದ್ಹಾಗೆ ಮೊದಲ ದಿನದ ಕಾರ್ಯಕ್ರಮ ಹೇಗಿದೆ ಅಂದ್ರೆ, ಬೆಳಗ್ಗೆ 11 ಗಂಟೆಗೆ ಅತಿಥಿಗಳನ್ನು ಉಪಹಾರ ನೀಡುವ ಮೂಲಕ ಸ್ವಾಗತ ಮಾಡಲಾಗಿದೆ. ಇಂದು (ಮಾರ್ಚ್ 1) 5.30ರಿಂದ ಕಾರ್ಯಕ್ರಮಗಳು ಆರಂಭ ಆಗುತ್ತವೆ. ಮೊದಲು ಅಂಬಾನಿ ಕುಟುಂಬ ಅತಿಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದೆ. ಇಲ್ಲಿಂದ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಸರ್ಕ್ ಡಿ ಸೊಲೈಲ್ ಆಕ್ಟ್ ನಡೆಯಲಿದೆ. ಆನಂತ್ರ ವಂತಾರ ಶೋ ನಡೆಯಲಿದೆ.

ಆದರೆ, ಈ ದಿನ ಸಂಜೆಯ ಹೈಲೈಟ್ ಅಂದರೆ, ಪಾಪ್ ಸಿಂಗರ್ ರಿಹಾನ್ನಾ ಶೋ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ರಿಹಾನ್ನಾ ಪರ್ಫಾಮೆನ್ಸ್ ಕೊಡುತ್ತಿದ್ದು, ಅಲ್ಲಿಗೆ ಬಂದಿರೋ ಅತಿಥಿಗಳಿಗೆ ರಿಹಾನ್ನಾ ತನ್ನ ಫೇಮಸ್ ಟ್ರ್ಯಾಕ್‌ಗಳನ್ನು ಹಾಡಿ ರಂಜಿಸಲಿದ್ದಾಳೆ. ಭಾರತದಲ್ಲಿ ಈ ಪಾಪ್ ತಾರೆಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಸದ್ಯ ಅಂಬಾನಿ ಅತಿಥಿಗಳಿಗೆ ಮಾತ್ರ ಈ ರಿಹಾನ್ನಾ ಪರ್ಫಾಮೆನ್ಸ್ ಕಣ್ತುಂಬಿ ಕೊಳ್ಳುವುದಕ್ಕೆ ಅವಕಾಶವಿದೆ.

Anant Ambani-Radhika pre-wedding festivities Pop queen Rihanna paid 74 crore

ಇದೆಲ್ಲಕ್ಕಿಂತ ಹುಬ್ಬೇರಿಸುವಂತೆ ಮಾಡುತ್ತಿರೋದು ಪಾಪ್ ಗಾಯಕಿ ರಿಹಾನ್ನಾ ಪಡೆದಿರೋ ಸಂಭಾವನೆ. ಇಂದು (ಮಾರ್ಚ್ 1) ಜಾಮ್‌ನಗರದಲ್ಲಿ ರಿಹಾನ್ನಾ ನೀಡುತ್ತಿರುವ ಪರ್ಫಾಮೆನ್ಸ್‌ಗೆ ಪಡೆದಿರೋ ಸಂಭಾವನೆ 8 ರಿಂದ 9 ಮಿಲಿಯನ್ ಡಾಲರ್ ಎಂದು ವರದಿಗಳಾಗಿವೆ. ಅಂದರೆ, ಭಾರತದ ಕರೆನ್ಸಿಯಲ್ಲಿ ಈ ಪಾಪ್ ಗಾಯಕಿಗೆ 66 ರಿಂದ 74 ಕೋಟಿ ರೂಪಾಯಿ ಸಂಭಾವನೆ ನೀಡಿದಂತೆ ಆಗಿದೆ.

ಫೆಬ್ರವರಿ 29ರಂದೇ ರಿಹಾನ್ನಾ ತಂಡ ಗುಜರಾತಿನ ಜಾಮ್‌ನಗರಕ್ಕೆ ಬಂದು ಇಳಿದಿದೆ. ಒಂದು ದಿನ ಮುನ್ನವೇ ಪರ್ಫಾಮೆನ್ಸ್‌ಗೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಂಜೆ 5.30 ಬಳಿಕ ರಿಹಾನ್ಸಾ ಪರ್ಫಾಮೆನ್ಸ್ ನೀಡಲಿದ್ದಾಳೆ. ಇದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೆ ಕೇವಲ ಒಬ್ಬ ಗಾಯಕಿಗೆ ಅಂಬಾನಿ ಕುಟುಂಬ ಸುರಿಯುತ್ತಿರುವ ಹಣ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಜುಲೈ 12ರಂದು ಅದ್ಧೂರಿಯಾಗಿ ನಡೆಯಲಿದೆ. ಆದರೆ, ಅದಕ್ಕೂ ಮುನ್ನ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ. ಕೆಲವು ದಿನಗಳಿಂದ ಜಾಮ್‌ನಗರದ 51 ಸಾವಿರ ಮಂದಿ ಗ್ರಾಮಸ್ಥರಿಗಾಗಿ ಅನ್ನ ಸೇವೆ ಕಾರ್ಯಕ್ರಮ ಕೂಡ ನಡೆದಿದೆ. ಇಂದಿನಿಂದ ಇನ್ನು ಮೂರು ದಿನದ ಸಂಭ್ರಮ ಮತ್ತಷ್ಟು ಅದ್ಧೂರಿಯಾಗಿ ಇರುತ್ತೆ.

More from Filmibeat

English summary
Pop queen Rihanna charged whopping Rs.74cr to perform in Anant Ambani-Radhika pre wedding:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X