"Just Married" ಮದುವೆ ಆಗೋರಿಗೆ ಸಿಕ್ಕಿದ ಹೊಸ ಕನ್ನಡ ಗೀತೆ ಇದೇನೆ.
ಒಂದ್ಕಡೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ. ಅದೇ ಇನ್ನೊಂದು ಕಡೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಸದ್ಯ ಎರಡು ದೋಣಿಯ ಮೇಲೆ ಕಾಲಿಟ್ಟಿರುವ ಅಜನೀಶ್ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಅದುವೇ 'ಜಸ್ಟ್ ಮ್ಯಾರೀಡ್' (Just Married). ಇತ್ತೀಚೆಗೆ ಈ ಸಿನಿಮಾದ ಹಾಡೊಂದನ್ನು ರಿಲೀಸ್ ಆಗಿದ್ದು, ಸಂಗೀತ ಪ್ರಿಯರಿಗಷ್ಟೇ ಅಲ್ಲ. ಮದುವೆಗೆ ಸಜ್ಜಾಗಿರುವ ನವ ಜೋಡಿಗಳ ಫೇವರಿಟ್ ಸಾಂಗ್ ಆಗ್ಬಿಟ್ಟದೆ.
'ಜಸ್ಟ್ ಮ್ಯಾರೀಡ್' ಸಿನಿಮಾವನ್ನು ನಿರ್ದೇಶಿಸಿರೋದು ಸಿ.ಆರ್.ಬಾಬಿ. ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ಈಗ ಸಿನಿಮಾ ನಿರ್ದೇಶನದ ಕಡೆಗೆ ಮುಖ ಮಾಡಿದ್ದಾರೆ. ಇವರು ನಿರ್ದೇಶಿಸಿದ ಈ ಸಿನಿಮಾದ ಒಂದು ಹಾಡು ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. "ಮಾಂಗಲ್ಯಂ ತಂತು ನಾನೇನಾ' ಎಂಬ ಹಾಡು ಈಗ ರಿಲೀಸ್ ಆಗಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ 2 ಮಿಲಿಯನ್ ವೀವ್ಸ್ ಕಡೆ ಮುಖ ಮಾಡಿದೆ.

ಈ ಹಾಡು ಟ್ರೆಂಡಿಂಗ್‌ನಲ್ಲಿ 16ನೇ ಸ್ಥಾನದಲ್ಲಿದೆ. ಅದ್ಧೂರಿಯಾಗಿ ಚಿತ್ರೀಕರಿಸುವ ಈ ಮ್ಯಾರೇಂಜ್ ಸಾಂಗ್ ನವ ವಧು ವರರ ಫೇವರಿಟ್ ಆಗಿಬಿಟ್ಟಿದೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕಿರುವ ಈ ಹಾಡು ಕನ್ನಡಿಗರಿಗೆ ಇಷ್ಟ ಆಗಿದೆ. ಈ ಹಾಡನ್ನು ಸಂಜಿತ್ ಹಗ್ಡೆ, ಐಶ್ವರ್ಯ ರಂಗರಾಜನ್ ಹಾಗೂ ವರುಣ್ ರಾಮಚಂದ್ರನ್ ಸುಮಧರವಾಗಿ ಹಾಡಿದ್ದಾರೆ. ಈ ಸಾಂಗ್ ಕೇಳುವುದಕ್ಕೆಷ್ಟೇ ಅಲ್ಲ, ನೋಡುವುದಕ್ಕೂ ಅಷ್ಟೇ ಕಿಕ್ ಕೊಡುತ್ತಿದೆ.
ಅಜನೀಶ್ ಲೋಕನಾಥ್ ಟ್ಯೂನ್ ಹಾಕಿರುವ ಈ ಹಾಡಿಗೆ ಸಾಹಿತ್ಯ ರಚಿಸಿದ್ದು ಡಾ.ವಿ. ನಾಗೇಂದ್ರ ಪ್ರಸಾದ್. ಟ್ಯೂನ್‌ಗೆ ತಕ್ಕಂತೆ ಸಾಹಿತ್ಯ ಬಿದ್ದ ಮೇಲೆ ಜನಪ್ರಿಯ ಗಾಯಕ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದು, ಇವರಿಗೆ ಐಶ್ವರ್ಯ ರಂಗರಾಜನ್ ಹಾಗೂ ವರುಣ್ ರಾಮಚಂದ್ರನ್ ಜೊತೆಯಾಗಿದ್ದಾರೆ. ಈ ಮೂವರು ಮೋಡಿದ್ದು, ಯೂಟ್ಯೂಬ್‌ನಲ್ಲಿ 19.85 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.
ಪ್ರಮುಖವಾಗಿ ಈ ಹಾಡಿನಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ಅಂಕಿತಾ ಅಮರ್ ಪ್ರಮುಖದಲ್ಲಿ ನಟಿಸಿದ್ದಾರೆ. ಹಾಗಂತ ಇವರಷ್ಟೇ ಅಲ್ಲ. ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ಇದೆ. ಹಿರಿಯ ನಟ ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ, ಅನಿಲ್, ವೇದಿಕಾ ಕಾರ್ಕಳ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
'ಜಸ್ಟ್ ಮ್ಯಾರೀಡ್' ಸಿನಿಮಾಗೆ ಸಿ.ಆರ್. ಬಾಬಿ ಅವರೇ ಕಥೆ ಬರೆದಿದ್ದು, ಚಿತ್ರಕಥೆಯನ್ನು ಸಿ.ಆರ್. ಬಾಬಿ ಹಾಗೂ ಧನಂಜಯ್ ರಂಜನ್ ಬರೆದಿದ್ದಾರೆ. ಈ ಸಿನಿಮಾದ ಎಲ್ಲಾ ಹಾಡುಗಳು ಸಂಗೀತ ಪ್ರಿಯರಿಗೆ ಇಷ್ಟ ಆಗುತ್ತೆ ಎನ್ನುವ ನಂಬಿಕೆ ತಂಡದಲ್ಲಿದೆ. ಈ ಸಿನಿಮಾದ ಹಾಡುಗಳನ್ನು ಕೆ. ಕಲ್ಯಾಣ್, ಡಾ.ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಧನಂಜಯ್ ರಂಜನ್ ಜಾಗೇ ಶಶಿ ಕಾವೂರ್ ರಚಿಸಿದ್ದಾರೆ.
ಅಂಕಿತಾ ಅಮರ್ ಮತ್ತು ಶೈನ್ ಶೆಟ್ಟಿ ಅವರ ನಡುವಿನ ಕೆಮಿಸ್ಟ್ರಿ ಅದ್ಭಿತವಾಗಿದೆ. ನವಜೋಡಿಗಳ ಅನುರಾಗವನ್ನು ನಿಖರವಾಗಿ ಚಿತ್ರಿಸುತ್ತಾ, ಪ್ರೇಮದ ಹೊಸ ಮುಖವನ್ನು ಈ ಹಾಡು ಪರಿಚಯಿಸುತ್ತದೆ. ಈ ಹಾಡು ಕೇಳಿದಾಗ ಬಹುಮಂದಿಗೆ ಡಾ. ರಾಜ್‌ಕುಮಾರ್ ಅವರ ಹಳೆಯ ಮದುವೆ ಹಾಡುಗಳು ನೆನಪಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೂ ಇದರಲ್ಲಿದೆ ಆಧುನಿಕ ತಾಜಾತನ, ಜಾನಪದದ ನಗು ಮತ್ತು ಹೃದಯದ ನಂಟು. ಈ ಮದುವೆ ಹಾಡುಗಳು ಹೊಸ ಕನ್ನಡಿಗರು ಬಹಳಷ್ಟು ಮಂದಿ ಇಷ್ಟ ಪಟ್ಟಿದ್ದಾರೆ.


Click it and Unblock the Notifications











