Armaan Malik: "ಒಂದು ಮಳೆ ಬಿಲ್ಲು.. ಒಂದು ಮಳೆ ಮೋಡ" ಎನ್ನುತ್ತಲೇ ಗೆಳತಿಗೆ ಪ್ರಪೋಸ್ ಮಾಡಿದ ಅರ್ಮಾನ್ ಮಲಿಕ್

ಸಂಗೀತ ಪ್ರಿಯರ ನೆಚ್ಚಿನ ಗಾಯಕ ಅರ್ಮಾನ್ ಮಲಿಕ್ ತನ್ನ ಬಹುದಿನ ಗೆಳತಿ ಆಶ್ನಾ ಶ್ರಾಫ್‌ ಜೊತೆ ಎಂಗೇಜ್‌ ಆಗಿದ್ದಾರೆ. ಗೆಳೆತಿ ಪ್ರಪೋಸ್ ಮಾಡಿರುವ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

'ಮುಂಗಾರು ಮಳೆ 2' ಸಿನಿಮಾದ "ಸರಿಯಾಗಿ ನೆನಪಿದೆ ನನಗೆ..", 'ಚಕ್ರವರ್ತಿ' ಸಿನಿಮಾದ "ಒಂದು ಮಳೆ ಬಿಲ್ಲು.. ಒಂದು ಮಳೆ ಮೋಡ.." ಅಂತಹ ಹಾಡುಗಳನ್ನು ಹಾಡಿರೋ ಅರ್ಮಾನ್ ಮಲಿಕ್ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.

armaan-malik-engaged-with-aashna-shroff

ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಕನ್ನಡದಲ್ಲೂ ಹೆಚ್ಚೆಚ್ಚು ಹಾಡುಗಳನ್ನು ಹಾಡುತ್ತಿದ್ದು, ಅರ್ಮಾನ್ ಮಲಿಕ್ ಗೆಳತಿಗೆ ಪ್ರಪೋಸ್ ಮಾಡಿರೋ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈಲರ್ ಆಗುತ್ತಿದೆ. ಗಾಯಕ ಅರ್ಮಾನ್ ಮಲಿಕ್ ಎಂಗೇಜ್ ಆಗಿರೋ ಆಶ್ನಾ ಶ್ರಾಫ್ ಯಾರು? ಇಬ್ಬರ ಲವ್‌ ಸ್ಟೋರಿ ಶುರುವಾಗಿದೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅರ್ಮಾನ್ ಮಲಿಕ್ ಭಾವಿ ಪತ್ನಿ ಹಿನ್ನೆಲೆ ಏನು?

ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿ ಜನಪ್ರಿಯರಾಗಿರೋ ಅರ್ಮಾನ್ ಮಲಿಕ್ ಎಂಗೇಜ್ ಆಗಿರೋ ಸುದ್ದಿ ವೈರಲ್ ಆಗುತ್ತಿದೆ. ಅಂದ್ಹಾಗೆ ಅರ್ಮಾನ್ ಭಾವಿ ಪತ್ನಿ ಆಶ್ನಾ ಶ್ರಾಫ್ ಸೋಶಿಯಲ್ ಮೀಡಿಯಾ ಪರ್ಸನಾಲಿಟಿ. ಅಲ್ಲದೆ ಫ್ಯಾಷನ್‌ಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಾರೆ. ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಫ್ಯಾಷನ್ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಹಾಗೇ ಅರ್ಮಾನ ಮಲಿಕ್‌ಗೆ ಸಂಬಂಧಿಸಿದ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಎಂಗೇಜ್ ಬಗ್ಗೆ ಅರ್ಮಾನ್ ಮಲಿಕ್ ಪೋಸ್ಟ್

ಅರ್ಮಾನ್ ಮಲಿಕ್ ಎಂಗೇಜ್ ಆದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಗೆಳತಿ ಆಶ್ನಾ ಶ್ರಾಫ್‌ಗೆ ಪ್ರಪೋಸ್ ಮಾಡಿರೋ ಫೋಟೊಗಳ ಹಂಚಿಕೊಂಡು "ನಮ್ಮಿಬ್ಬರ ಶಾಶ್ವತ ಬದುಕು ಈಗಷ್ಟೇ ಶುರುವಾಗಿದೆ." ಎಂಬ ಅರ್ಥದಲ್ಲಿ ಅರ್ಮಾನ್ ಮಲಿಕ್ ಪೋಸ್ಟ್ ಮಾಡಿದ್ದಾರೆ. ಆಶ್ನಾ ಕೂಡ ಈ ಪೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲವ್‌ಸ್ಟೋರಿ ಶುರುವಾಗಿದ್ಯಾವಾಗ?

ಅರ್ಮಾನ್ ಮಲಿಕ್ ಹಾಗೂ ಆಶ್ನಾ ಶ್ರಾಫ್ ಇಬ್ಬರ ಲವ್‌ ಸ್ಟೋರಿ 2019ರಿಂದ ಶುರುವಾಗಿತ್ತು. ಆದರೆ, ಅರ್ಮಾನ್ ಮಲಿಕ್ ಹಾಗೂ ಆಶ್ನಾ ಇಬ್ಬರೂ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಈಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. ಅರ್ಮಾನ್ ಹಂಚಿಕೊಂಡ ಫೋಟೊಗಳನ್ನೇ ಆಶ್ನಾ ಶೇರ್ ಮಾಡಿಕೊಂಡಿದ್ದು, " ನಿಮ್ಮಲ್ಲಿರುವ ನಂಬಿಕೆಯು ನನ್ನೆಲ್ಲ ನಂಬಿಕೆಯನ್ನು ನಿಮ್ಮ ಮೇಲೆ ಇಡುವಂತೆ ಮಾಡಿದೆ" ಎಂದು ಆಶ್ನಾ ಖುಷಿಯನ್ನು ಹಂಚಿಕೊಂಡಿದ್ದಾರೆ.

ಬ್ರೇಕಪ್ ಬಳಿಕ ಮತ್ತೆ ಒಂದಾದ ಜೋಡಿ

ಗಾಯಕ ಅರ್ಮಾನ ಮಲಿಕ್ ಹಾಗೂ ಆಶ್ನಾ ಶ್ರಾಫ್ 2017ರಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ, ಕೆಲವೇ ದಿನಗಳಲ್ಲಿ ಬ್ರೇಕಪ್ ಮಾಡಿಕೊಂಡಿದ್ದರು. ಮತ್ತೆ 2019ರಲ್ಲಿ ಈ ಜೋಡಿ ಮತ್ತೆ ಒಂದಾಗಿ ಡೇಟಿಂಗ್ ಮಾಡಿಕೊಳ್ಳುವುದಕ್ಕೆ ಶುರು ಮಾಡಿತ್ತು. ಈ ಜೋಡಿ ಆಗಾಗಿ ಹಲವು ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿದೆ.

More from Filmibeat

English summary
Armaan Malik engaged with longtime girlfriend Aashna Shroff
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X