Asha Bhosle: 20 ಭಾಷೆ.. 11 ಸಾವಿರ ಸಾಂಗ್ಸ್.. 90ರ ಸಂಭ್ರಮದಲ್ಲಿರೋ ಗಾಯಕಿ ಆಶಾ ಭೋಂಸ್ಲೆ ಕುರಿತ ಈ ವಿಷಯಗಳು ಗೊತ್ತೇ?
ಹಿಂದಿ ಗಾಯಕಿ ಅಂತ ಹೆಚ್ಚು ಜನಪ್ರಿಯರಾಗಿದ್ದರೂ, ಕನ್ನಡವೂ ಸೇರಿದಂತೆ ಸುಮಾರು 20 ಭಾಷೆಯಲ್ಲಿ ಹಾಡಿದ್ದಾರೆ. ಇವರ ಖಾತೆಯಲ್ಲಿ 11 ಸಾವಿರಕ್ಕೂ ಅಧಿಕ ಹಾಡುಗಳು ಇವೆ. ಭಾರತ ಕಂಡ ಇಂತಹ ಅದ್ಭುತ ಗಾಯಕಿಯೇ ಆಶಾ ಭೋಂಸ್ಲೆ.
ಗಿನ್ನಿಸ್ ದಾಖಲೆಯಲ್ಲಿ ಆಶಾ ಭೋಂಸ್ಲೆ ಹೆಸರು ದಾಖಲಾಗಿದೆ ಅಂದ್ರೆ, ಈ ಗಾಯಕಿಯ ಸಾಧನೆ ಎಷ್ಟಿರಬಹುದು ಅನ್ನೋದನ್ನು ಊಹಿಸಿ. ಆಶಾ ಭೋಂಸ್ಲೆಯವರದ್ದು ಸುಮಾರು ಏಳೆಂಟು ದಶಕಗಳ ಸುದೀರ್ಘ ಸಂಗೀತ ಜರ್ನಿ. ಅಂದಿನ ಜನಪ್ರಿಯರ ಗಾಯಕ ಹಾಗೂ ನಟ ಪಂಡಿತ್ ದೀನನಾಥ್ ಮಂಗೇಶ್ಕರ್ ತೃತೀಯ ಪುತ್ರಿಯಾಗಿ ಆಶಾ ಭೋಂಸ್ಲೆ ಜನಿಸಿದ್ದರು.

ತನ್ನ ಹನ್ನೊಂದನೇ ವಯಸ್ಸಿನಲ್ಲಿಯೇ ಗಾಯನವನ್ನು ಶುರು ಮಾಡಿದ್ದ ಆಶಾ ಭೋಂಸ್ಲೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ರಾಕ್ ಶೈಲಿಯ ಹಾಡುಗಳಾಗಲಿ, ಇಲ್ಲ ಘಜಲ್ ಮಾದರಿಯ ಹಾಡುಗಳಾಗಲಿ ಎಲ್ಲದಕ್ಕೂ ಹೊಂದಿಕೊಳ್ಳುವ ಗಾಯಕಿ ಆಶಾ ಭೋಂಸ್ಲೆ. ಇಂದು (ಸೆಪ್ಟೆಂಬರ್ 8) ಈ ಲೆಜೆಂಡರಿ ಗಾಯಕಿ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಆಶಾ ಭೋಂಸ್ಲೆ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಪೆಪ್ಪು ಹಾಡುಗಳ ಗಾಯಕಿ ಘಜಲ್‌ಗೆ ರಾಷ್ಟ್ರ ಪ್ರಶಸ್ತಿ
80ರ ದಶಕದಲ್ಲಿ ಆಶಾ ಭೋಂಸ್ಲೆ ಅಕ್ಕ ಲತಾ ಮಂಗೇಶ್ಕರ್‌ಗಿಂತ ವಿಭಿನ್ನ ಶೈಲಿಯ ಹಾಡುಗಳನ್ನು ಆಯ್ಕೆ ಮಾಡಿಕೊಂಡಿರು. ಕ್ಯಾಬರೇ ಅಥವಾ ಪೆಪ್ಪಿ ಮಾದರಿಯ ಹಾಡುಗಳು ಯಶಸ್ಸು ಕೊಟ್ಟಿದ್ದವು. ಒಂದು ಕಾಲದಲ್ಲಿ ಆಶಾ ಭೋಂಸ್ಲೆ ಅಂದರೆ, ಕ್ಯಾಬರೇ ಹಾಡುಗಳು ಅನ್ನುಷ್ಟು ಫೇಮಸ್ ಆಗಿದ್ದರು. ಆದರೆ, 1981ರಲ್ಲಿ ತೆರೆಕಂಡ 'ಉಮ್ರೋ ಜಾನ್' ಸಿನಿಮಾದಲ್ಲಿ ಸಂಗೀತ ನಿರ್ದೇಶಕ ಖಯ್ಯಾಮ್ ಹೊಸ ಇಮೇಜ್ ಕೊಟ್ಟಿದ್ದರು. ಇದೇ ಸಿನಿಮಾದ "ದಿಲ್ ಚೀಜ್ ಕ್ಯಾ ಹೇ.." ಹಾಡಿಗೆ ಆಶಾ ಭೋಂಸ್ಲೆ ಧ್ವನಿ ನೀಡಿದ್ದರು. ಈ ಹಾಡಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಇದು ಘಜಲ್ ಮಾದರಿಯ ಹಾಡು ಅನ್ನೋದು ವಿಶೇಷ.
ಹೂಗ್ಲಿ ನದಿಯಲ್ಲಿ ಹುಟ್ಟಿದ ಹಾಡು
ಆಶಾ ಭೋಂಸ್ಲೆ ಹಾಗೂ ಪತಿ, ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್ ಹೂಗ್ಲಿ ನದಿ ತೀರದಲ್ಲಿ ಸಂಜೆಯೊಂದನ್ನು ಕಳೆಯುತ್ತಿದ್ದರು. ಈ ವೇಳೆ ಅಂಬಿಕ ಹಾಡೊಂದನ್ನು ಹಾಡುತ್ತಾ ಮುಂದೆ ಸಾಗುತ್ತಿದ್ದ. ಅದೇ ಗುಂಗಿನಲ್ಲಿ ಬಂದಿದ್ದ ಆರ್ ಡಿ ಬರ್ಮನ್ ಪತ್ನಿ ಆಶಾ ಭೋಂಸ್ಲೆ ಜೊತೆ ಹೂಗ್ಲಿ ನದಿ ತೀರಕ್ಕೆ ಹೋಗಿ 'ದಿ ಗ್ರೇಟ್ ಗ್ಯಾಂಬ್ಲರ್' ಸಿನಿಮಾ " ದೋ ಲಫ್‌ಜೊನ್ ಕೀ ಹೈ ದಿಲ್ ಕಿ ಕಹಾನಿ.." ಅನ್ನೋ ಜನಪ್ರಿಯ ಹಾಡಿಗೆ ಟ್ಯೂನ್ ಹಾಕಿದ್ರು. ಅದನ್ನು ಆಶಾ ಭೋಂಸ್ಲೆ ಹಾಡಿದ್ದರು.

54ನೇ ಬರ್ತ್‌ಡೇ ಹಾಡು ರಿಲೀಸ್
ಆಶಾ ಭೋಂಸ್ಲೆಗೆ ತನ್ನ ಪತಿ ಆರ್‌ಡಿ ಬರ್ಮನ್ ಹಾಗೂ ಗುಲ್ಜಾರ್ ಒಟ್ಟಿಗೆ ಕೆಲಸ ಮಾಡಬೇಕು ಅಂತ ಬಯಸಿದ್ದರು. ಆದರೆ, ಇಬ್ಬರು ಒಟ್ಟಿಗೆ ಕೆಲಸ ಮಾಡಲೇ ಇಲ್ಲ. ಆಶಾ ಭೋಂಸ್ಲೆ ಆ ಕನಸನ್ನೇ ಮರೆತುಬಿಟ್ಟಿದ್ದರು. ಆರ್‌ಡಿ ಬರ್ಮನ್ 'ಜೇಮ್ಸ್ ಬಾಂಡ್' ಸಿನಿಮಾ ನೋಡುವಾಗ ಹಾಡು ಹೊಳೆದಿತ್ತು. ಅದೇ "ದಿಲ್ ಪಡೋಸಿ ಹೇ.." ತಕ್ಷಣವೇ ಗುಲ್ಜಾರ್‌ಗೆ ಕರೆ ಮಾಡಿದ ಆರ್‌ಡಿ ಬರ್ಮನ್ ಟ್ಯೂನ್ ಹಾಕಿ ಕಂಪೋಸ್ ಮಾಡಿ, ಆಶಾ ಭೋಂಸ್ಲೆ 54ನೇ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದರು.
ನಟನೆ, ಸಂಗೀತ ನಿರ್ದೇಶನಕ್ಕೂ ಸೈ
ಆಶಾ ಭೋಂಸ್ಲೆ ಸಿಕ್ಕಾಪಟ್ಟೆ ಆಕ್ಟೀವ್. ಗಾಯನದ ಜೊತೆ ಸಂಗೀತ ನಿರ್ದೇಶನ ಹಾಗೂ ನಟನೆಯನ್ನೂ ಟ್ರೈ ಮಾಡಿದ್ದರು. 2002ರಲ್ಲಿ 'ಆಪ್ ಕಿ ಆಶಾ' ಅನ್ನೋ ಅಲ್ಬಮ್ ಹೊರತಂದಿದ್ದರು. 79ನೇ ವಯಸ್ಸಿನಲ್ಲಿ ಮರಾಠಿ ಸಿನಿಮಾ 'ಮೈ'ನಲ್ಲಿ ನಟಿಸಿದ್ದರು.
ಗ್ರ್ಯಾಮಿಗೆ ಆಯ್ಕೆಯಾದ ಮೊದಲ ಭಾರತದ ಗಾಯಕಿ
ಗ್ರ್ಯಾಮಿ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಭಾರತದ ಗಾಯಕಿ ಆಶಾ ಭೋಂಸ್ಲೆ. 1997ರಲ್ಲಿ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿದದರು. 12 ಕ್ಲಾಸಿಕಲ್ ಹಾಡುಗಳ 'ಲೆಗಸಿ' ಅನ್ನೋ ಅಲ್ಬಮ್ ಅನ್ನು ಸಿದ್ಧಪಡಿಸಿದ್ದರು. ಇದರಲ್ಲಿ ಆಶಾ ಭೋಂಸ್ಲೆ ಜೊತೆ ಉಸ್ತಾದ್ ಅಲಿ ಅಕ್ಬರ್ ಖಾನ್ ಸರೋದ್ ನುಡಿಸಿದ್ದರು.
ಸಿನಿಮಾದಲ್ಲಿ ಇಲ್ಲದ ಹಾಡಿಗೆ ಫಿಲ್ಮ್‌ಫೇರ್
1974ರಲ್ಲಿ ಆಶಾ ಭೋಂಸ್ಲೆ "ಚೈನ್ ಸೆ ಹಮ್ ಕೊ ಕಭೀ ಆಫ್ ನೆ ಜಾನೆ ನಾ ದಿಯಾ.." ಅನ್ನೋ ಹಾಡಿಗೆ ಧ್ವನಿ ನೀಡಿದ್ದರು. 'ಪ್ರಾಣ್ ಜಾಯೆ ಪರ್ ವಚನ್ ನಾ ಜಾಯೆ' ಅನ್ನೋ ಸಿನಿಮಾಗಾಗಿ ಈ ಹಾಡನ್ನು ಕಂಪೋಸ್ ಮಾಡಲಾಗಿತ್ತು. ಆದರೆ, ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಾಡಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು. ಈ ಮೂಲಕ ಸಿನಿಮಾದಲ್ಲಿ ಇಲ್ಲದ ಹಾಡಿಗೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಗಾಯಕಿ ಅನ್ನೋ ವಿಶಿಷ್ಠ ದಾಖಲೆ ಬರೆದಿದ್ದಾರೆ.
ಉದ್ಯಮಿಯೂ ಹೌದು
ಗಾಯನದ ಜೊತೆಗೆ ಆಶಾ ಭೋಂಸ್ಲೆ ವಿದೇಶಗಳಲ್ಲಿ ರೆಸ್ಟೋರೆಂಟ್‌ಗಳನ್ನೂ ಹೊಂದಿದ್ದಾರೆ. 'ಆಶಾಸ್' ಅನ್ನೋ ಬ್ರ್ಯಾಂಡ್‌ನಲ್ಲಿ ರೆಸ್ಟೋರೆಂಟ್ ಇದೆ. ದುಬೈ, ಬಹ್ರೈನ್, ಅಬು ಧಾಬಿ, ಕತಾರ್, ಕುವೈಟ್, ಬರ್ಮಿಂಗ್ಹ್ಯಾಮ್, ಯುಕೆನಲ್ಲಿ ರೆಸ್ಟೋರೆಂಟ್‌ಗಳಿವೆ. ಇಲ್ಲಿ ಆಶಾ ಭೋಂಸ್ಲೆ ಬಾಲ್ಯದಲ್ಲಿ ಸವಿದ ಅಡುಗೆಗಳು ಹಾಗೂ ಪತಿ ಆರ್‌ಡಿ ಬರ್ಮನ್ ಅವರ ಮೆಚ್ಚಿನ ಊಟವನ್ನು ಬಡಿಸಲಾಗುತ್ತೆ.


Click it and Unblock the Notifications











