ಖ್ಯಾತ ಸಂಗೀತ ನಿರ್ದೇಶಕ, ಗಾಯಕ 'ಬಪ್ಪಿ ಲಹಿರಿ' ನಿಧನ!
ಇತ್ತೀಚೆಗೆ ಸಿನಿಮಾರಂಗದಲ್ಲಿ ಹೆಚ್ಚಾಗಿ ಸಾವಿನ ಸುದ್ದಿಗಳು ಕೇಳಿ ಬರುತ್ತಿವೆ. ಇತ್ತೀಚಿಗಷ್ಟೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಅಗಲಿಕೆ ಮನಸ್ಸು ಭಾರ ಆಗುವಂತೆ ಮಾಡಿತ್ತು. ಈ ಮತ್ತೊಬ್ಬ ಖ್ಯಾತ ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ ಆಗಿದ್ದ 'ಬಪ್ಪಿ ಲಹಿರಿ' ಇಹಲೋಕ ತ್ಯಜಿಸಿದ್ದಾರೆ. 69ನೇ ವಯಸ್ಸಿನಲ್ಲಿ ಅವರು ನಿಧನ ಹೊಂದಿದ್ದಾರೆ.
ಬಪ್ಪಿ ಲಹಿರಿ ಹಲವು ದಿನಗಳಿಮದ ಅನಾರೋಗ್ಯದಿಂದ ಬಳಲುತ್ತಿದ್ದರು. ಮುಂಬೈನ ಆಸ್ಪತ್ರೆಯಲ್ಲಿ ಇಂದು (ಫೆಬ್ರವರಿ 16) ನಿಧನರಾಗಿದ್ದಾರೆ. ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. "ಲಹಿರಿ ಅವರು ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತು ಸೋಮವಾರ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಮತ್ತೆ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಪ್ಪಿ ಅವರು ಮಧ್ಯರಾತ್ರಿಗೆ ನಿಧನ ಹೊಂದಿದ್ದಾರೆ." ಎಂದು ಕ್ರಿಟಿಕೇರ್ ಆಸ್ಪತ್ರೆಯ ನಿರ್ದೇಶಕರಾದ ಡಾ ದೀಪಕ್ ನಾಮಜೋಶಿ ತಿಳಿಸಿದ್ದಾರೆ.
ನಟ, ಹೋರಾಟಗಾರ ದೀಪ್ ಸಿಧು ಅಪಘಾತದಲ್ಲಿ ನಿಧನ
ಭಾರತಕ್ಕೆ ಡಿಸ್ಕೋವನ್ನು ಪರಿಚಯಿಸಿದ ಗಾಯಕರಲ್ಲಿ ಬಪ್ಪಿ ಲಹಿರಿ ಕೂಡ ಒಬ್ಬರು. ಈ ಪ್ರಕಾರದಲ್ಲಿ ಬಪ್ಪಿ ಹಲವಾರು ಹಿಟ್ ಗೀತೆಗಳನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಬಪ್ಪಿ ಲಹಿರಿ ದೊಡ್ಡ ಹೆಸರು ಮಾಡಿದ್ದಾರೆ. ಅವರು ಕೊನೆಯದಾಗಿ 'ಬಾಗಿ 3' ಚಿತ್ರದ ಹಾಡು ಹಾಡಿದ್ದಾರೆ. ಬಿಗ್ ಬಾಸ್ 15ರ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಿದ್ದರು.



Click it and Unblock the Notifications











