ಪತ್ನಿಗೆ ಎ.ಆರ್.ರೆಹಮಾನ್ ವಿಚ್ಚೇದನ ನೀಡುತ್ತಿದ್ದಂತೆ ತಂಡದ ಸದಸ್ಯೆಯಿಂದಲೂ ಡಿವೋರ್ಸ್ ಅನೌನ್ಸ್: ಯಾರಿದು ಮೋಹಿನಿ ಡೇ?

ನಿನ್ನೆ ರಾತ್ರಿಯಷ್ಟೇ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಹಾಗೂ ಪತ್ನಿ ಸೈರಾ ಬಾಬು ಬೇರೆಯಾಗುತ್ತಿರುವುದಾಗಿ ಅನೌನ್ಸ್ ಮಾಡಿ ಸಂಗೀತ ಪ್ರಿಯರಿಗೆ ಶಾಕ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಎ ಆರ್ ರೆಹಮಾನ್ ತಂಡದೊಂದಿಗೆ ಗುರುತಿಸಿಕೊಂಡಿದ್ದ ಬೇಸ್ಸಿಸ್ಟ್ ಮೋಹಿನಿ ಡೇ ಕೂಡ ತಮ್ಮ ಪತಿಯಿಂದ ಬೇರೆಯಾಗಿದ್ದಾಗಿ ಘೋಷಣೆ ಮಾಡಿದ್ದಾರೆ. ಸದ್ಯ ಈ ಸುದ್ದಿ ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿದೆ.

ಹೆಚ್ಚು ಕಡಿಮೆ ಮೂರು ದಶಕಗಳ ದಾಂಪತ್ಯಕ್ಕೆ ಎ ಆರ್ ರೆಹಮಾನ್ ತಿಲಾಂಜಲಿ ಹೇಳಿದ್ದು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ರೆಹಮಾನ್ ಪತ್ನಿ ಸೈರಾ ಬಾಬು ತಮ್ಮ ವಕೀಲರ ಮೂಲಕ ವಿಚ್ಛೇದನದ ವಿಷಯವನ್ನು ಹಂಚಿಕೊಂಡಿದ್ದರು. ಆ ಬೆನ್ನಲ್ಲೇ ಎ ಆರ್ ರೆಹಮಾನ್ ಕೂಡ ಡಿವೋರ್ಸ್ ವಿಷಯವನ್ನು ಕನ್ಫರ್ಮ್ ಮಾಡಿದ್ದರು.

Bassist Mohini Dey announced separation from her husband just hours after AR Rahman

ಎ ಆರ್ ರೆಹಮಾನ್ ಡಿವೋರ್ಸ್ ವಿಷಯ ಹೊರ ಬೀಳುತ್ತಿದ್ದ ಕೆಲವೇ ಗಂಟೆಗಳಲ್ಲಿ ಬೇಸ್ಸಿಸ್ಟ್ ಮೋಹಿನಿ ಡೇ ಕೂಡ ತನ್ನ ಪತಿ ಮಾರ್ಕ್ ಹಾರ್ಟ್ಸುಚ್ ಅವರಿಂದ ಬೇರೆಯಾಗುತ್ತಿರುವುದಾಗಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅನೌನ್ಸ್ ಮಾಡಿದ್ದಾರೆ. ಎ ಆರ್ ರೆಹಮಾನ್ ಜೊತೆ ಹಲವು ಶೋಗಳಲ್ಲಿ ಮೋಹಿನಿ ಡೇ ಪರ್ಫಾಮ್ ಮಾಡಿದ್ದಾರೆ. ಈ ವಿಷಯವೀಗ ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ.

ಮೋಹಿನಿ ಡೇ ಹಾಗೂ ಆಕೆಯ ಪತಿ ಸಂಗೀತ ನಿರ್ದೇಶಕ ಮಾರ್ಕ್ ಹಾರ್ಟ್ಸುಚ್ ಜಂಟಿಯಾಗಿ ವಿಚ್ಚೇದನವನ್ನು ಘೋಷಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಟ್ಟಿಗೆ ವಿಚ್ಛೇದನದ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಚೇದನವನ್ನು ನೀಡುತ್ತಿರುವುದಾಗಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದೇ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

" ಆತ್ಮೀಯ ಸ್ನೇಹಿತರೇ, ಕುಟುಂಬದವರೇ, ಅಭಿಮಾನಿಗಳೇ ಹಾಗೂ ಬೆಂಬಲಿಗರೇ ನಾನು ಮತ್ತು ಮಾರ್ಕ್ ಭಾರವಾದ ಹೃದಯದಿಂದ ಬೇರೆಯಾಗುತ್ತಿರುವುದಾಗಿ ಘೋಷಿಸುತ್ತಿದ್ದೇವೆ. ನಾವಿಬ್ಬರೂ ಪರಸ್ಪರ ಒಪ್ಪಂದ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಅತ್ಯುತ್ತಮ ಸ್ನೇಹಿತರಾಗಿದ್ದ ಹೊರತಾಗಿಯೂ ನಮ್ಮ ಬದುಕಿನಲ್ಲಿ ಬೇರೆಯದ್ದನ್ನು ಬಯಸಿದ್ದರಿಂದ ಪರಸ್ಪರ ಒಪ್ಪಿಗೆಯಿಂದ ಬೇರೆ ದಾರಿ ಹಿಡಿಯಲು ಮುಂದಾಗಿದ್ದೇವೆ." ಎಂದು ಫೋಸ್ಟ್‌ನಲ್ಲಿ ಹೇಳಲಾಗಿದೆ.

Bassist Mohini Dey announced separation from her husband just hours after AR Rahman

ಇದರೊಂದಿಗೆ ಇಬ್ಬರು ವಿಚ್ಚೇದನದ ನಂತರೂ ಒಟ್ಟಿಗೆ ಕೆಲಸ ಮಾಡುವುದಕ್ಕೆ ನಿರ್ಧರಿಸಿದ್ದಾರೆ. "ಮಾಮೋಗಿ ಮತ್ತು ಮೋಹಿನಿ ಡೇ ಗ್ರೂಪ್ಸ್ ಒಳಗೊಂಡಂತೆ ನಾವಿಬ್ಬರೂ ಇನ್ನೂ ಹಲವು ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವುದನ್ನು ಹೆಮ್ಮೆ ಅಂತಲೇ ಭಾವಿಸಿದ್ದೇವೆ. ಅದು ಎಂದಿಗೂ ಕೊನೆಯಾಗುವುದಿಲ್ಲ. ವಿಶ್ವದಲ್ಲಿರುವ ಎಲ್ಲರನ್ನೂ ಪ್ರೀತಿಸುವಂತೆ ನಾವು ಕೇಳಿಕೊಳ್ಳುತ್ತೇವೆ. ನೀವು ನಮಗೆ ಕೊಟ್ಟ ಪ್ರೀತಿಯನ್ನು ನಾವು ಯಾವಾಗಲೂ ಗೌರವಿಸುತ್ತೇವೆ. ನಮ್ಮ ಈ ಧನಾತ್ಮಕತೆಯ ಕಡೆಗಿನ ನಮ್ಮ ಈ ನಿರ್ಧಾರವನ್ನು ನೀವೂ ಗೌರವಿಸುತ್ತೀರೆಂದೂ, ನಮ್ಮ ಖಾಸಗಿ ಜೀವನಕ್ಕೆ ಬೆಲೆ ಕೊಡುತ್ತೀರೆಂದು ನಂಬಿದ್ದೇವೆ. ಟೀಕೆ ಮಾಡದೇ ಇರುವುದನ್ನು ನಾವು ಗೌರವಿಸುತ್ತೇವೆ." ಎಂದು ಹೇಳಲಾಗಿದೆ.

ಇನ್ನು 29 ವರ್ಷದ ಮೋಹಿನಿ ಡೇ ಕೊಲ್ಕತ್ತಾ ಮೂಲದವರು. ತನ್ನ ಪ್ರತಿಭೆಯಿಂದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಸಂಗೀತ ಪ್ರಿಯರನ್ನು ಸೆಳೆಯುತ್ತಿದ್ದಾರೆ. ಇವರು ಎ ಆರ್‌ ರೆಹಮಾನ್ ಅವರೊಂದಿಗೆ ವಿಶ್ವದಾದ್ಯಂತ ಸುಮಾರು 40 ಶೋಗಳಲ್ಲಿ ಭಾಗವಹಿಸಿದ್ದಾರೆ. 2013ರಲ್ಲಿ ತನ್ನ ಮೊದಲ ಅಲ್ಬಮ್‌ 'ಫ್ರೀ ಸ್ಪಿರೀಟ್ ಅನ್ನು ರಿಲೀಸ್ ಮಾಡಿದ್ದರು. ಈಗ ಎ ಆರ್‌ ರೆಹಮಾನ್ ಹಿಂದೆನೇ ಈಕೆ ಕೂಡ ವಿಚ್ಛೇದನ ನೀಡಿದ್ದು ಸಂಗೀತ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಸಿದೆ.

More from Filmibeat

English summary
Bassist Mohini Dey announced separation from her husband just hours after AR Rahman;
Read more about: ar rahman divorce filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X