ಮಾಡರ್ನ್ ರೈತ ಶಶಿ ಹೊಸ ಸಿನಿಮಾ ಮೆಹಬೂಬ ಸಾಂಗ್‌ಗೆ ಬಹುಪರಾಕ್!

ಇತ್ತೀಚೆಗಷ್ಟೇ ಬಿಗ್ ಬಾಸ್ ಖ್ಯಾತಿ ಶಶಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವೇಳೆ ಸುದ್ದಿಯಾಗಿದ್ದ ಶಶಿ ಮತ್ತೆ ಸೈಲೆಂಟ್ ಆಗಿದ್ದರು. ಆದ್ರೀಗ ಅವರ ಸಿನಿಮಾದ ಹಾಡೊಂದು ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ.

ಬಿಗ್ ಬಾಸ್ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ ಸಿನಿಮಾ 'ಮೆಹಬೂಬ'. ಬಹಳ ದಿನಗಳ ಹಿಂದೆ ಈ ಸಿನಿಮಾ ಸೆಟ್ಟೇರಿತ್ತು. ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾವಿದು. ಬೆಂಗಳೂರಿನಲ್ಲೇ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ಬಾಕಿ ಉಳಿದಿದೆ.

 Bigg Boss Winner Shashi movie Mehabooba song released

ಈ ಮಧ್ಯೆ 'ಮೆಹಬೂಬ' ಸಿನಿಮಾದ ಸುಮಧುರ ಹಾಡೊಂದು ರಿಲೀಸ್ ಆಗಿದೆ. ರಘುಶಾಸ್ತ್ರಿ ಅವರು ಬರೆದಿರುವ "ದೇವರು ದೇವರು..." ಎಂಬ ಭಾವೈಕ್ಯತೆ ಸಾರುವ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. 'ಸರಿಗಮಪ' ಖ್ಯಾತಿಯ ಮನೋಜವಂ ಆತ್ರೇಯ ಈ ಹಾಡನ್ನು ಸುಮಧುರವಾಗಿ ಹಾಡಿದ್ದಾರೆ. ಮ್ಯಾಥ್ಯೂಸ್‌ ಮನು ಟ್ಯೂನ್ ಹಾಕಿದ್ದಾರೆ.

ಸ್ಕಂದ ಎಂಟರ್ ಟೈನ್ ಮೆಂಟ್ ಸಂಸ್ಥೆಯ ಪ್ರಸನ್ನ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಆಂಟೊನಿ ಈ ನೈಜ ಘಟನೆಯನ್ನು ನಿರ್ದೇಶನ ಮಾಡಿದ್ದಾರೆ.ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘುಶಾಸ್ತ್ರಿ ರಚಿಸಿದ್ದಾರೆ. ಅಲ್ಲದೆ ಸಂಭಾಷಣೆಯನ್ನು ರಘುಶಾಸ್ತ್ರಿ ಬರೆದಿದ್ದಾರೆ.

'ಮೆಹಬೂಬ' ಸಿನಿಮಾದಲ್ಲಿ ಬಿಗ್ ಬಾಸ್ ಶಶಿಗೆ ನಾಯಕಿಯಾಗಿ ಪಾವನ ಗೌಡ ನಟಿಸಿದ್ದಾರೆ. ಇವರೊಂದಿಗೆ ದುಹಾನ್ ಸಿಂಗ್, ಕಿರಿಕ್ ಪಾರ್ಟಿಯ ಸಲ್ಮಾನ್, ಬುಲೆಟ್ ಪ್ರಕಾಶ್, ಜೈ ಜಗದೀಶ್ , ವಿಜಯ ಲಕ್ಷ್ಮಿಸಿಂಗ್ ಸೇರಿದಂತೆ ಹಲವರು ನಟಿಸಿದ್ದಾರೆ.

 Bigg Boss Winner Shashi movie Mehabooba song released

ಮಾಡರ್ನ್ ರಥ ಅಂತಲೇ ಖ್ಯಾತಿ ಗಳಿಸಿರೋ ಶಶಿ ಬಿಗ್ ಬಾಸ್‌ ಕನ್ನಡ ಕಿರೀಟವನ್ನು ಗೆದ್ದಿದ್ದರು. ಇಲ್ಲಿಂದ ಬಿಗ್ ಬಾಸ್ ಶಶಿ ಎಂದೇ ಖ್ಯಾತಿ ಗಳಿಸಿದ್ದಾರೆ. ಶಶಿ ಬಿಗ್ ಬಾಸ್ ಗೆದ್ದು ಹೊರಬರುತ್ತಿದ್ದಂತೆ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಅದೇ ಸಿನಿಮಾ 'ಮೆಹಬೂಬ'. ಈಗಾಗಲೇ ಒಂದು ಹಾಡು ರಿಲೀಸ್ ಆಗಿದ್ದು, ಪ್ರೇಕ್ಷಕರು ಈ ಹಾಡನ್ನು ಮೆಚ್ಚಿಕೊಂಡಿದ್ದಾರೆ.

More from Filmibeat

English summary
Bigg Boss Winner Shashi movie Mehabooba song released, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X