ಕನ್ನಡದ ಹಾಡನ್ನು 'ಚೇಸ್' ಮಾಡಿದ ಬಾಲಿವುಡ್ ನಟ ವರುಣ್ ಧವನ್: ಈ ಸಾಂಗ್
ಕನ್ನಡ ಸಿನಿಮಾದ ಹಾಡೊಂದನ್ನು ಬಾಲಿವುಡ್ ಮಂದಿಗೆ ಹುಚ್ಚು ಹಿಡಿಸಿತ್ತು. ಈಗ ಮತ್ತೊಂದು ಹಾಡು ಸಂಗೀತ ಪ್ರಿಯರನ್ನು ಕಾಡುತ್ತಿದೆ. ಆ ಕನ್ನಡ ಸಿನಿಮಾ ಮತ್ಯಾವೂದೂ ಅಲ್ಲ 'ಚೇಸ್'. ಹಾಡುಗಳಿಂದಲೇ ಗಮನ ಸೆಳೆಯುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಮೂಸಿ 'ಚೇಸ್'. ಈಗಾಗಲೇ ಬಿಡುಗಡೆಯಾಗಿರುವ ಎರಡು ಹಾಡುಗಳು ಬಾಲಿವುಡ್ ದಿಗ್ಗಜರಿಗೆ ಬಲು ಇಷ್ಟ ಆಗಿದೆ.
ಸ್ಯಾಂಡಲ್‌ವುಡ್‌ನ ಸಸ್ಪೆನ್ಸ್ ಥ್ರಿಲ್ಲರ್ 'ಚೇಸ್' ಸಿನಿಮಾ ಆಗಾಗ ಸುದ್ದಿಯಲ್ಲಿರುತ್ತೆ. ಕಾರ್ತಿಕ್ ಆಚಾರ್ಯ ಕಂಪೋಸ್ ಮಾಡುವ ಎರಡು ಹಾಡುಗಳು ನಿಧಾನವಾಗಿ ಸಂಗೀತ ಪ್ರಿಯರನ್ನು ಕಾಡಲು ಶುರು ಮಾಡಿದೆ. ವಿಜಯ್ ಪ್ರಕಾಶ್ ಹಾಡಿರುವ ಒಂದು ಮೆಲೋಡಿ ಸಾಂಗ್ ಆದರೆ, ಇನ್ನೊಂದು ಬಿನ್ನಿ ದಯಾಳ್ ಹಾಡಿರುವ ಮಸ್ತ್ ಡ್ಯಾನ್ಸಿಂಗ್ ನಂಬರ್. ಈ ಎರಡೂ ಹಾಡುಗಳು ಸ್ಲೋ ಆಗಿ ಕಿಕ್ ಕೊಡಲು ಆರಂಭಿಸಿದೆ.
ವರಣ್ ಧವನ್, ರೆಮೊ ಡಿಸೋಜಾ ಮೆಚ್ಚಿದ ಹಾಡು
'ಚೇಸ್' ಚಿತ್ರದ 'ಮನದ ಹೊಸಿಲಾ' ಎಂಬ ಹಾಡು ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ಹಾಡು ರಿಲೀಸ್ ಆಗುತ್ತಿದ್ದಂತೆ ಕೇವಲ ಸಂಗೀತ ಪ್ರಿಯರನ್ನಷ್ಟೇ ಮೋಡಿ ಮಾಡಿರಲಿಲ್ಲ. ಬದಲಾಗಿ ಬಾಲಿವುಡ್ ಮಂದಿಯನ್ನೂ ಕಾಡಿತ್ತು. ಬಾಲಿವುಡ್‌ನ ಖ್ಯಾತ ನಟ ವರುಣ್ ಧವನ್, ನಿರ್ದೇಶಕ ರೆಮೋ ಡಿಸೋಜಾ, ನೃತ್ಯ ನಿರ್ದೇಶಕರಾಗಿರುವ ಧರ್ಮೇಶ್, ಕೃತಿ ಮಹೇಶ್, ರಾಘವ್ ಮುಂತಾದವರೆಲ್ಲರೂ ಈಗಾಗಲೇ ಹಾಡನ್ನು ಮೆಚ್ಚಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

ಬಿನ್ನಿ ದಯಾಳ ಕಂಠದಲ್ಲಿ 'ಷಾ ಲಾ ಲಾ ಲವ್'
'ಚೇಸ್' ಚಿತ್ರದ ಎರಡನೇ ಹಾಡು 'ಷಾ ಲಾ ಲಾ ಲಾ ಲವ್'. ಈ ಡ್ಯಾನ್ಸ್ ನಂಬರ್ ಸಾಂಗ್ ಅನ್ನು 'ಚೇಸ್' ತಂಡ ಬಿಡುಗಡೆ ಮಾಡಿದೆ. ಬಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಬಿನ್ನಿ ದಯಾಳ್ ಈ ಕನ್ನಡ ಹಾಡಿಗೆ ಕಂಠ ನೀಡಿದ್ದಾರೆ. ರಣ್‌ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಯೇ ಜವಾನಿ ಹೇ ದಿವಾನಿ' ಚಿತ್ರದ 'ಬತ್ತಮೀಸ್ ದಿಲ್' ಹಾಡಿನ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದರು. ಈಗ ಕನ್ನಡ ಹಾಡದಲ್ಲಿಯೂ ಇಂತಹದ್ದೇ ಒಂದು ಹಾಡನ್ನು ಹಾಡಿದ್ದಾರೆ.
'ಹುಡುಗಿ ಇವಳು ತರಲೆ' ಎಂದು ಆರಂಭವಾಗುವ ಈ ಲವ್ ಸಾಂಗ್ ಗೆ ಬಾಲಿವುಡ್ ನಟ ಹಾಗೂ ನೃತ್ಯಪಟು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹುಟ್ಟೂರು ಉಡುಪಿಯಾಗಿದ್ದು ಕನ್ನಡದವರೇ ಆದ ಸುಶಾಂತ್ ಪೂಜಾರಿಗೆ 'ಚೇಸ್' ಕನ್ನಡದಲ್ಲಿ ಮೊದಲ ಚಿತ್ರ. ನೃತ್ಯ ನಿರ್ದೇಶಕನಾಗಿಯೂ ಇದು ಚೊಚ್ಚಲ ಪ್ರಯತ್ನವಾಗಿದೆ.
ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅವಿನಾಶ್ ನರಸಿಂಹರಾಜು, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಶ್ವೇತಾ ಸಂಜೀವುಲು, ರಾಜೇಶ್ ನಟರಂಗ, ಅರವಿಂದ್ ರಾವ್, ಅರವಿಂದ್ ಬೋಳಾರ್ ಹಾಗೂ ಇನ್ನೂ ಅನೇಕ ಹೆಸರಾಂತ ಕಲಾವಿದರು 'ಚೇಸ್' ಚಿತ್ರದಲ್ಲಿ ನಟಿಸಿದ್ದಾರೆ. ವಿಲೋಕ್ ಶೆಟ್ಟಿ ನಿರ್ದೇಶನದ, ಮನೋಹರ್ ಸುವರ್ಣ, ಪ್ರಶಾಂತ್ ಶೆಟ್ಟಿ ಹಾಗೂ ಪ್ರದೀಪ್ ಶೆಟ್ಟಿ ನಿರ್ಮಿಸಿ, ಸಿಂಪ್ಲಿಫನ್ ಮೀಡಿಯಾ ನೆಟ್ ವರ್ಕ್ ಪ್ರೈ.ಲಿ. ಸಿನಿಮಾ ನಿರ್ಮಿಸಿದೆ.


Click it and Unblock the Notifications











