ಧ್ವನಿಯಷ್ಟೇ ಪವಿತ್ರ ಅಗಲಿದ ಗಾಯಕ KKಯ ಲವ್ ಸ್ಟೋರಿ: ಗೆಳತಿಗಾಗಿ ಸೇಲ್ಸ್ ಮ್ಯಾನ್ ಆಗಿದ್ದ ಸಿಂಗರ್!
ಬಾಲಿವುಡ್ ಗಾಯಕ ಕೆಕೆ ನಿನ್ನೆ ( ಮೇ 31)ರಂದು ಇಹಲೋಕ ತ್ಯಜಿಸಿದ್ದಾರೆ. ಗಾಯಕ ಕೆಕೆ ದಿಢೀರನೇ ಸಾವನ್ನಪ್ಪಿದ್ದು, ವಿಶ್ವದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳಿಗೆ ಸಡನ್ ಶಾಕ್ ಆಗಿದೆ. ಗಾಯಕ ಪತ್ನಿ ಜ್ಯೋತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕೆಕೆ ಹಾಗೂ ಜ್ಯೋತಿಗೆ ಒಬ್ಬ ಪುತ್ರ ನಕುಲ್ ಕೃಷ್ಣ ಕುನ್ನತ್ ಹಾಗೂ ಪುತ್ರಿ ತಾಮರ ಕುನ್ನತ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಕೊಲ್ಕತ್ತಾದಲ್ಲಿ ನಡೆದ ಲೈವ್ ಈವೆಂಡ್ ಮುಗಿದ ಬಳಿಕ ಕೆಕೆ ತಾವು ತಂಗಿದ್ದ ಹೊಟೇಲ್‌ಗೆ ತೆರಳಿದ್ದರು. ಅದೇ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ದಾರಿ ಮಧ್ಯೆಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕೆಕೆ ಸಾವು ಸಹಜವಲ್ಲ ಎಂದು ಪೊಲೀಸರೇ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಕೆ ಪತ್ನಿ ಹಾಗೂ ಮಕ್ಕಳು ಕೊಲ್ಕತ್ತಾ ತಲುಪಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮುಂಬೈಗೆ ಪಾರ್ಥೀವ ಶರೀರವನ್ನು ತರಲಾಗುತ್ತೆ.
ಕೆಕೆ ಕೇವಲ ಗಾಯಕ ಅಷ್ಟೇ ಆಗಿರಲಿಲ್ಲ. ಅವರೊಬ್ಬರ ಅಪ್ಪಟ ಪ್ರೇಮಿ. ಅವರು ಹಾಡಿದ ರೊಮ್ಯಾಂಟಿಕ್ ಹಾಡಿನಂತೆ ಅವರ ಪ್ರೇಮ್ ಕಹಾನಿ ಕೂಡ ಇದೆ. ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಹಾಡಿನ ಮೂಲಕ ಮತ್ತಷ್ಟು ಪ್ರೀತಿಯನ್ನು ಹಂಚಬಲ್ಲ ಅನ್ನುವುದು ಕೆಕೆ ತಮ್ಮ ಹಾಡುಗಳ ಮೂಲಕವೇ ಸಾಬೀತು ಪಡಿಸಿದ್ದಾರೆ. ಕೆಕೆ ಹಾಗೂ ಪತ್ನಿ ಜ್ಯೋತಿಯ ಲವ್ ಸ್ಟೋರಿ ಯುವ ಪ್ರೇಮಿಗಳಿಗೆ ಪ್ರೇರಣೆ.

ಕೆಕೆ ಹಾಗೂ ಜ್ಯೋತಿ ಬಾಲ್ಯ ಸ್ನೇಹಿತರು
ಕೃಷ್ಣ ಕುಮಾರ್ ಕುನ್ನತ್ ಚಿಕ್ಕದಾಗಿ ಕರೆಯೋದಾದರೆ ಕೆಕೆ. 90ರ ದಶಕದಲ್ಲಿ ತನ್ನ ಸುಮಧುರ ಕಂಠದಿಂದಲೇ ಮೋಡಿ ಮಾಡಿದ ಗಾಯಕ. ಇವರ ಮ್ಯೂಸಿಕಲ್ ಜರ್ನಿಯಂತೆಯೇ ಲವ್ ಸ್ಟೋರಿ ಕೂಡ ಸುಂದರ ಪಯಣ. ಕೆಕೆ ಪತ್ನಿ ಜ್ಯೋತಿಯನ್ನು ಆರನೇ ತರಗತಿ ಓದುವಾಗ ಮೊದಲ ಬಾರಿ ಭೇಟಿಯಾಗಿದ್ದರು. ಅಲ್ಲಿಂದ ಇಬ್ಬರ ಸ್ನೇಹ ಬೆಳೆದು ಮುಂದೆ ಪ್ರೀತಿಯಾಗಿ ಬದಲಾಗಿತ್ತು. ಬಾಲ್ಯ ದಿಂದಲೇ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದರು ಎಂಬುವುದನ್ನು ಕಪಿಲ್ ಶರ್ಮಾ ಶೋನಲ್ಲಿ ಕೆಕೆ ರಿವೀಲ್ ಮಾಡಿದ್ದರು.
ಸೇಲ್ಸ್ ಮ್ಯಾನ್ ಆಗಿದ್ದ ಕೆಕೆ
ಕೆಕೆ ಬಾಲಿವುಡ್‌ಗೆ ಪ್ರವೇಶ ಮಾಡುವುದಕ್ಕಿಂತ ಮುನ್ನ ದೆಹಲಿಯಲ್ಲಿದ್ದರು. ಅಲ್ಲಿ ಶಿಕ್ಷಣ ಮುಗಿಸಿದ್ದರೂ, ಕೆಕೆಗೆ ಗಾಯಕನಾಗಬೇಕು ಎಂಬ ಆಸೆಯಿತ್ತು. ಇದೇ ವೇಳೆ ನಿರುದ್ಯೋಗಿಯಾಗಿದ್ದ ಕೆಕೆ ತನ್ನ ಬಾಲ್ಯದ ಗೆಳತಿಯನ್ನು ಮದುವೆಯಾಗಲು ಸೇಲ್ಸ್ ನ್ಯಾನ್ ಕೆಲಸ ಹಿಡಿದಿದ್ದರು. ಗೆಳತಿಯಾಗಿ ಗಾಯಕನಾಗುವ ಕನಸನ್ನು ಪಕ್ಕಿಟ್ಟಿದ್ದರು. ಆದರೆ, ಮೂರು ತಿಂಗಳು ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿದ ಬಳಿಕ ಗಾಯಕನಾಗಲು ಮುಂಬೈಗೆ ತೆರಳಿದ್ದರು.

ಕೆಕೆ ಡೇಟ್ ಮಾಡಿದ ಏಕೈಕ ಮಹಿಳೆ ಜ್ಯೋತಿ
ಇದೇ ಕಪಿಲ್ ಶರ್ಮಾ ಶೋನಲ್ಲಿ ಮತ್ತೊಂದು ವಿಷಯವನ್ನು ರಿವೀಲ್ ಮಾಡಿದ್ದರು. ತನ್ನ ಜೀವನದುದ್ದಕ್ಕೂ ಕೆಕೆ ಒಬ್ಬರನ್ನು ಪ್ರೀತಿ ಮಾಡಿದ್ದರು. ಅವರನ್ನೇ ಮದುವೆ ಕೂಡ ಆದರು. ಕೆಕೆ 1991ರಲ್ಲಿ ವಿವಾಹವಾಗಿದ್ದರು. ಲೈಫ್‌ನಲ್ಲಿ ಸೆಟೆಲ್ ಆಗುವುದಕ್ಕೆ ಮುನ್ನವೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೂರು ವರ್ಷಗಳ ಬಳಿಕ, ಅಂದರೆ, 1994ರಲ್ಲಿ ಗಾಯಕನಾಗಿ ಮೊದಲ ಬಿಗ್ ಬ್ರೇಕ್ ಸಿಕ್ಕಿತ್ತು.

ಹಾಡಲು ಪ್ರೇರಣೆ ಜ್ಯೋತಿ
ಕೆಕೆ, ದೆಹಲಿಯಲ್ಲಿ ಕೇವಲ ಜಿಂಗಲ್ಸ್ ಹಾಗೂ ಸಣ್ಣ ಪುಟ್ಟ ಕೆಲಸಗಳನ್ನು ಮಾತ್ರ ಮಾಡುತ್ತಿದ್ದರು. ಆಗಲೇ ಪತ್ನಿ ಮುಂಬೈಗೆ ಹೋಗುವಂತೆ ಪ್ರೇರಣೆ ನೀಡಿದ್ದರು. ಪ್ರತಿಯೊಂದು ಹಂತದಲ್ಲಿಯೂ ಪತ್ನಿ ಜ್ಯೋತಿ ಕೆಕೆಯ ಜೊತೆಯಲ್ಲಿಯೇ ಇದ್ದರು. ಅವರ ನಿರ್ಧಾರದ ಹಿಂದೆ ಪತ್ನಿ ಜ್ಯೋತಿ ಇದ್ದಾರೆ ಎಂದು ಹಲವು ಸಂದರ್ಭಗಳಲ್ಲಿ ಕೆಕೆ ಹೇಳಿದ್ದಾರೆ.


Click it and Unblock the Notifications











