ಟಕೀಲ, ಬ್ಯಾಡ್ ಬಾಯ್, ತ್ರಿಪೇಗ್ ಈ ವರ್ಷ 'ಲಕ ಲಕ ಲ್ಯಾಂಬೋರ್ಗಿನಿ': ಹೊಸ ವರ್ಷಕ್ಕೆ ರಂಗಾದ ರಚಿತಾ!

ಹೊಸ ವರ್ಷದ ಸಂಭ್ರಮ ಶುರುವಾಯಿತು ಅಂದರೆ, ಚಂದನ್ ಶೆಟ್ಟಿಯ ಒಂದು ಹಾಡನ್ನು ನಿರೀಕ್ಷೆ ಮಾಡಬಹುದು. ವರ್ಷದಲ್ಲಿ ಕೊನೆಯಲ್ಲಿ ಹೊಸ ವರ್ಷ ಸ್ವಾಗತ ಮಾಡುವವರಿಗೆ ಚಂದನ್ ಶೆಟ್ಟಿ ಸಾಂಗ್ ಕಿಕ್ ಮೇಲೆ ಕಿಕ್ ಕೊಡುತ್ತೆ. ಈ ವರ್ಷ ಕೂಡ ಮಸ್ತ್ ಆಗಿ ಹೆಚ್ಚು ಹಾಕಿರುವ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. ಈ ಹಾಡು ಯೂಟ್ಯೂನ್‌ನಲ್ಲೀಗ ಟ್ರೆಂಡಿಂಗ್‌ನಲ್ಲಿದೆ.

ಈ ಬಾರಿ ಚಂದನ್ ಶೆಟ್ಟಿ ಕಂಪೋಸ್ ಮಾಡಿ, ಹಾಡಿರುವ ಹಾಡಿನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ ಅಲ್ಬಮ್ ಸಾಂಗಿಗೆ ಗ್ಲಾಮರಸ್ ಸ್ಟೆಪ್ಸ್ ಹಾಕಿದ್ದಾರೆ. ಚಂದನ್ ಶೆಟ್ಟಿ ಲಕ ಲಕ ಲ್ಯಾಂಬೋರ್ಗಿನಿ ಅಂತ ಹಾಡುತ್ತಿದ್ದರೆ. ಇತ್ತ ರಚಿತಾರಾಮ್ ಮಸ್ತ್ ಸ್ಟೆಪ್ಸ್ ಹಾಕಿ ಸಂಗೀತ ಪ್ರಿಯರನ್ನು ರಂಜಿಸಿದ್ದಾರೆ. ಈ ಹಾಡಿನ ಬಗ್ಗೆ ಚಂದನ್ ಶೆಟ್ಟಿ ಹಾಗೂ ತಂಡ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಶೇರ್ ಮಾಡಿಕೊಂಡಿದೆ.

ಚಂದನ್ ಶೆಟ್ಟಿ ಜೊತೆ ರಂಗಾದ ರಚಿತಾ

ಚಂದನ್ ಶೆಟ್ಟಿ ಜೊತೆ ರಂಗಾದ ರಚಿತಾ

2021ರ ಕೊನೆಯ ತಿಂಗಳಲ್ಲಿ ರಚಿತಾರಾಮ್ ಬೇಜಾನ್ ಸದ್ದು ಮಾಡುತ್ತಿದ್ದಾರೆ. 'ಲವ್ ಯು ರಚ್ಚು' ಸಿನಿಮಾ ಡಿಸೆಂಬರ್ 31ಕ್ಕೆ ರಿಲೀಸ್ ಆಗುತ್ತಿದೆ. ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದ ಹಾಡುಗಳು ದಾಖಲೆ ಬರೆಯಲು ಸಜ್ಜಾಗಿ ನಿಂತಿವೆ. ಈ ಮಧ್ಯೆ ಚಂದನ್ ಶೆಟ್ಟಿ ಜೊತೆ ಹೊಸ ವರ್ಷಕ್ಕೆ ಕಿಕ್ ಕೊಡುವುದಕ್ಕಾಗಿಯೇ ನಿರ್ಮಾಣ ಕೊಂಡಿರುವ 'ಲಕ ಲಕ ಲ್ಯಾಂಬೋರ್ಗಿನಿ' ರಿಲೀಸ್ ಆಗಿದೆ. ಈ ಹಾಡಿನ ಹೈ ಲೈಟ್ ಮತ್ಯಾರೂ ಅಲ್ಲ ಅದು ರಚಿತಾ ರಾಮ್. ಹೊಸ ವರ್ಷದಲ್ಲಿ ಹುಚ್ಚೆದ್ದು ಕುಣಿಯಬೇಕು ಅನ್ನುವ ಯುವಕ-ಯುವತಿಯರಿಗೆ ಈ ಹಾಡು ಕಿಕ್ ಕೊಡುತ್ತಿದೆ.

'ಲಕ ಲಕ ಲ್ಯಾಂಬೋರ್ಗಿನಿ' ನಂ 1

'ಲಕ ಲಕ ಲ್ಯಾಂಬೋರ್ಗಿನಿ' ನಂ 1

ಚಂದನ್ ಶೆಟ್ಟಿ ಸಾಹಿತ್ಯ ರಚಿಸಿ, ಟ್ಯೂನ್ ಹಾಕಿ, ಹಾಡಿ, ಅಭಿನಯಿಸಿರುವ 'ಲಕಲಕ ಲ್ಯಾಂಬೋರ್ಗಿನಿ' ಹಾಡು ಟ್ರೆಂಡಿಂಗ್‌ನಲ್ಲಿದೆ. ಬಿಡುಗಡೆಯಾದ ಘಳಿಗೆಯಿಂದಲೂ ಈ ಹಾಡು ಯೂಟ್ಯೂಬ್‌ನಲ್ಲಿ ಮೋಡಿ ಮಾಡುತ್ತಿದೆ. ಇಲ್ಲಿವರೆಗೂ ಸುಮಾರು 17.63 ಲಕ್ಷ ವೀವ್ಸ್ ಪಡೆದು ಮ್ಯೂಸಿಕ್ ವಿಭಾಗದಲ್ಲಿ 'ಲಕಲಕ ಲ್ಯಾಂಬೋರ್ಗಿನಿ' ನಂಬರ್ ಒನ್ ಸ್ಥಾನದಲ್ಲಿದೆ. ಯುವ ಸಮುದಾಯಕ್ಕೆ ಈ ಹಾಡು ಮಸ್ತ್ ಕಿಕ್ ಕೊಟ್ಟಿದೆ.

ಹೊಸ ವರ್ಷಕ್ಕೆ ಚಂದನ್ ಶೆಟ್ಟಿ 4ನೇ ಸಾಂಗ್

ಹೊಸ ವರ್ಷಕ್ಕೆ ಚಂದನ್ ಶೆಟ್ಟಿ 4ನೇ ಸಾಂಗ್

ಹೊಸ ವರ್ಷದ ಖುಷಿಯಲ್ಲಿ ಹೊಸ ಗೀತೆ ರಿಲೀಸ್ ಮಾಡುವುದು ವಾಡಿಕೆ. ಕಳೆದ 4 ವರ್ಷಗಳಿಂದ ಹೊಸ ವರ್ಷದ ಸಂಭ್ರಮಕ್ಕೆ ಚಂದನ್ ಶೆಟ್ಟಿ ಒಂದೊಂದು ಹಾಡನ್ನು ಬಿಡುಗಡೆ ಮಾಡುತ್ತಲೇ ಇದ್ದಾರೆ. ಟಕೀಲ, ಬ್ಯಾಡ್ ಬಾಯ್, ತ್ರಿ ಪೇಗ್ ಬಳಿಕ ಈ ವರ್ಷ 'ಲಕಲಕ ಲ್ಯಾಂಬೋರ್ಗಿನಿ' ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. "ಮೂಲತಃ ರೈತರಾಗಿರುವ ಕೇಶವ್ ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗಾಗಿ ಈ ಹಾಡನ್ನು ನಿರ್ಮಿಸಲು ಮುಂದಾಗಿದ್ರು. ಜುಲೈ ತಿಂಗಳಲ್ಲಿಯೇ ಈ ಹಾಡು ಶುರುವಾಗಬೇಕಿತ್ತು. ದುಬೈನಲ್ಲೇ ಈ ಹಾಡನ್ನು ಶೂಟ್ ಬೇಡಬೇಕಿತ್ತು. ಆದರೆ ಕೊರೊನಾ ಇವೆಲ್ಲದಕ್ಕೂ ಅಡ್ಡಿ ಆಯಿತು. ಈಗ ಹೊಸ ವರ್ಷಕ್ಕೆ ಎಂಬಂತೆ ಈ ಹಾಡು ರಿಲೀಸ್ ಮಾಡಲಾಗಿದೆ." ಎಂದು ಹಾಡಿನ ಬಗ್ಗೆ ಚಂದನ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಗಳಿಗಾಗಿ ಅಲ್ಬಮ್ ಸಾಂಗ್

ಮಗಳಿಗಾಗಿ ಅಲ್ಬಮ್ ಸಾಂಗ್

ಮೂಲತ: ರೈತರಾಗಿರುವ ಕೇಶವ್ ಮಗಳ ಆಸೆಯನ್ನು ಈಡೇರಿಸಲು ಈ ಹಾಡನ್ನು ನಿರ್ಮಿಸಿದ್ದಾರೆ. "ನನ್ನ ಆಲೋಚನೆಯಲ್ಲಿ ಈ ಹಾಡುವ ಉದ್ದೇಶ ಇರಲಿಲ್ಲ. ನನ್ನ ಮಗಳು ಬಿಂದ್ಯಾಳನ್ನು ಹುಟ್ಟುಹಬ್ಬಕ್ಕೆ ಏನು ಬೇಕು ಕೇಳಿದೆ, ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು ಎಂದು ಆಸೆಪಟ್ಟಳು. ಬಳಿಕ ಕೆ.ಮಂಜು ಮೂಲಕ ಎಲ್ಲರನ್ನೂ ಸಂಪರ್ಕಿಸಿದೆ. ಈ ಹಾಡು ನಿರ್ಮಾಣವಾಗಲು ನನ್ನ ಮಗಳೇ ಕಾರಣ‌." ಎಂದು ನಿರ್ಮಾಪಕ ಕೇಶವ್ ಹೇಳಿದ್ದಾರೆ. " ಚಿಕ್ಕ ವಯಸ್ಸಿನಲ್ಲಿಯೇ ನೂರು ಜನಕ್ಕೆ ಈ ಪುಟ್ಟ ಹುಡುಗಿ ಅನ್ನ ನೀಡಿದ್ದಾರೆ." ಎಂದು ಬಾಲಕಿ ಬಿಂದ್ಯಾಗೆ ಮೆಚ್ಚುಗೆ ಸೂಚಿಸಿದ್ದಾರೆ ನಿರ್ದೇಶಕ ನಂದ ಕಿಶೋರ್.

More from Filmibeat

English summary
Chandan Shetty and Rachita Ram starrer laka laka Lambargini Album song released. Chandan Shetty released laka laka song for celebrating new year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X