ಲಂಕೇಶ್ ಪತ್ರಿಕೆ ಲೇಖನ ನೋಡಿ "ಕಮಾನ್ ಡಾರ್ಲಿಂಗ್.." ಸಾಂಗ್ ಬರೆದಿದ್ದ ಹಂಸಲೇಖ; ಕ್ರೇಜಿಸ್ಟಾರ್ ಬಿದ್ದು ಬಿದ್ದು ನಕ್ಕಿದ್ದಿದ್ದೇಕೆ

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಇಬ್ಬರೂ ಸೇರಿದಂತೆ ಸೂಪರ್ ಹಿಟ್ ಹಾಡುಗಳು ಸೃಷ್ಟಿಯಾದಂತೆ. ಇದರಲ್ಲಿ ಎರಡು ಮಾತೇ ಇಲ್ಲ. ಈಗಾಗಲೇ ಇಬ್ಬರ ಕಾಂಬಿನೇಷನ್‌ನಲ್ಲಿ ಅದೆಷ್ಟೋ ಸೂಪರ್ ಹಿಟ್ ಹಾಡುಗಳು ಸೃಷ್ಟಿಯಾಗಿವೆ. ಈ ಎಲ್ಲಾ ಹಾಡುಗಳ ಹಿಂದೆ ಒಂದೊಂದು ಕಥೆಯಿದೆ. ಆ ಕಥೆಗಳನ್ನು ಕೇಳುವುದೇ ಒಂದು ಮಜಾ.

ಹಂಸಲೇಖ ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದ ರೀತಿಯೇ ವಿಭಿನ್ನ. ಇವರು ರಚಿಸುತ್ತಿದ್ದ ಸಾಹಿತ್ಯ ಕೂಡ ಅಷ್ಟೇ ಡಿಫ್ರೆಂಟ್ ಆಗಿರುತ್ತಿತ್ತು. ನಾದ ಬ್ರಹ್ಮ ಕಂಪೋಸ್ ಮಾಡುತ್ತಿದ್ದ ಹಾಡುಗಳಲ್ಲಿ ನಿರಂತರವಾಗಿ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಕೆಲವೊಮ್ಮೆ ಇವರಿಗೆ ಮಾಡಿದ ಟೀಕೆಗಳನ್ನು ಇಟ್ಟುಕೊಂಡೇ ಹಾಡನ್ನು ಕಂಪೋಸ್ ಮಾಡಿದ್ದು, ಅದಕ್ಕೆ ಸಾಹಿತ್ಯ ಬರೆದ ಉದಾಹರಣೆಗಳು ಇವೆ.

Come On Darling song from Annayya was created by Hamsalekha to respond Lankesh Pathrike article

ಅದರಲ್ಲಿ ರವಿಚಂದ್ರನ್ ನಟಿಸಿದ 'ಅಣ್ಣಯ್ಯ' ಸಿನಿಮಾದ "ಕಮಾನು ಡಾರ್ಲಿಂಗ್.." ಹಾಡು ಕೂಡ ಒಂದು. ಲಂಕೇಶ್ ಪತ್ರಿಕೆಯಲ್ಲಿ ಹಂಸಲೇಖ ಅವರ ಹಾಡುಗಳ ಕುರಿತು ಟೀಕಿಸಿ ಲೇಖನವನ್ನು ಬರೆಯಲಾಗಿತ್ತು. ಅದನ್ನು ಆಪ್ತರೊಬ್ಬರು 'ಅಣ್ಣಯ್ಯ' ಸಿನಿಮಾಗೆ ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದ ಹಂಸಲೇಖ ಅವರಿಗೆ ತೋರಿಸಿದ್ದರು. ಆಗ ಅದೇ ಸಾಲುಗಳನ್ನೇ ಇಟ್ಟುಕೊಂಡು ಹಾಡು ಬರೆದಿದ್ದರು. ಈ ಸ್ವಾರಸ್ಯಕರ ವಿಷಯವನ್ನು ಹಿರಿಯ ಪತ್ರಕರ್ತ ಎನ್. ಎಸ್. ಶ್ರೀಧರಮೂರ್ತಿಯವರು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.


ಮುಂದೆ ಓದಿ
'ಅಣ್ಣಯ್ಯ' ಸಿನಿಮಾದ ಕಮಾನು ಡಾರ್ಲಿಂಗ್ ಹಾಡಿನ ಸೃಷ್ಟಿ
ಲಂಕೇಶ್ ಪತ್ರಿಕೆಯಲ್ಲಿ ಹಂಸಲೇಖ ಹಾಡುಗಳ ಬಗ್ಗೆ ಟೀಕೆ
ಹಂಸಲೇಖ ಸಾಹಿತ್ಯಕ್ಕೆ ಬಿದ್ದು ಬಿದ್ದು ನಕ್ಕಿದ್ದ ರವಿಚಂದ್ರನ್

ಹಂಸಲೇಖ ಮೊದಲು 'ಅಣ್ಣಯ್ಯ' ಸಿನಿಮಾದ ಟೈಟಲ್ ಸಾಂಗ್‌ ಅನ್ನು ಸೃಷ್ಟಿ ಮಾಡಿದ್ದರು. ಇದು 'ರಾಮಾಚಾರಿ' ಸಿನಿಮಾ ಸಮಯದಲ್ಲಿ ಉಳಿದಿದ್ದಂತಹ ಹಾಡು. ನಂತರ ಸೃಷ್ಟಿಯಾಗಿದ್ದೇ "ಹಾಡು ರಾಗಿ ಹೊಲದಾಗ ಖಾಲಿ ಗುಡಿಸಲು". ಈ ಹಾಡಿನ ಚಿತ್ರೀಕರಣ ಹೇಗೆ ಮಾಡುತ್ತೇವೆ ಎನ್ನುವುದನ್ನು ಮೊದಲೇ ರವಿಚಂದ್ರನ್ ವಿವರಿಸಿದ್ದರು. ಅದಕ್ಕೆ ತಕ್ಕಂತೆ ಹಂಸಲೇಖ ಅವರು ಹಾಡಿಗೆ ಟ್ಯೂನ್ ಅನ್ನು ಹಾಕಿದ್ದರು. ಅದರ ಮೂಲ ಹಿಂದಿ ಸಿನಿಮಾದಲ್ಲೂ ಇದೆ. ಈ ಕಥೆಯನ್ನು ಇಟ್ಕೊಂಡು ಕಥೆನಾ ಕಾವ್ಯದ ರೂಪದಲ್ಲಿ ರೂಪಿಸಿದರು. ಇದೇ ವೇಳೆ ಲಂಕೇಶ್ ಪತ್ರಿಕೆಯಲ್ಲಿ ಒಂದು ಲೇಖನ ಬಂದಿತ್ತು. ಅದನ್ನೇ ಇಟ್ಟುಕೊಂಡು "ಕಮಾನು ಡಾರ್ಲಿಂಗ್.." ಸೃಷ್ಟಿಯಾಗಿತ್ತು.

Come On Darling song from Annayya was created by Hamsalekha to respond Lankesh Pathrike article

"ಆಗ ಲಂಕೇಶ್ ಪತ್ರಿಕೆ ಬರುತ್ತಿತ್ತು. ಅದರಲ್ಲಿ ಪುಂಡಲಿಕ್ ಶೇಠ್ ಅಂತ ಒಬ್ಬರು ಹುಬ್ಬಳ್ಳಿಯವ ಕಾಲಂ ಬರೆಯುತ್ತಿದ್ದರು. ಅದರಲ್ಲಿ ಹಂಸಲೇಖ ಅವರ ಬಗ್ಗೆ ಒಂದು ಕಾಮೆಂಟ್ ಮಾಡಿದ್ದರು. ಅವನ ಏನ್ ಹಾಡು ಬರೀತಾನ್ರಿ. ಕಮಾನು ಡಾರ್ಲಿಂಗ್.. ಸಿಟ್ಟಿಂಗು ಡಾರ್ಲಿಂಗ್.. ಇದೇ ಹಾಡು ಹಂಸಲೇಖ ಬರೆಯೋದು ಅಂತ ಬರೆದಿದ್ದರು. ಅವತ್ತು ರೆಕಾರ್ಡಿಂಗ್ ಆಗುವಾಗ ಯಾರೋ ತಂದು ತೋರಿಸಿದ್ದರು. ಸರ್.. ಲಂಕೇಶ್ ಪತ್ರಿಕೆಯಲ್ಲಿ ಹೀಗೆ ಬರೆದಿದ್ದಾರೆ ಅಂತ ತೋರಿಸಿದರು. ಕಮಾನು ಡಾರ್ಲಿಂಗ್, ಸಿಟ್ಟಿಂಗು ಡಾರ್ಲಿಂಗ್ ಅಂತ ಹಾಡು ಬರೀತಿರಂತೆ ನೀವು ಅಂತ ಹೇಳಿದರು. ಎಲ್ಲಾದರೂ ಹಾಗೆ ಹಾಡು ಬರೆದಿದ್ದೇನಯ್ಯ. ಇಲ್ಲ ತಾನೇ. ಮತ್ತೆ ಬರೆಯೋಣ ಅಂತ ಬರೆದರು" ಎಂದು ಹಿರಿಯ ಪತ್ರಕರ್ತ ಎನ್. ಎಸ್. ಶ್ರೀಧರಮೂರ್ತಿ ಆ ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ.

ಹಂಸಲೇಖ ಸಾಹಿತ್ಯ ಬರೆದು ಹಾಡನ್ನು ಕಂಪೋಸ್ ಮಾಡಿದ್ದರು. ಅದನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮುಂದೆ ಇಟ್ಟಿದ್ದರು. ಆಗ ಕ್ರೇಜಿಸ್ಟಾರ್ ಬಿದ್ದು ಬಿದ್ದು ನಕ್ಕಿದ್ದರಂತೆ. "ಹೀಗೆ ಕಮಾನು ಡಾರ್ಲಿಂಗ್ ಹಾಡು ಸೃಷ್ಟಿ ಆಯ್ತು. ಎಷ್ಟು ಅದ್ಭುತವಾಗಿ ಸೃಷ್ಟಿ ಆಯ್ತು ಅಂದರೆ, ಈ ಹಾಡು ಬರೆದ ಮೇಲೆ ರವಿಚಂದ್ರನ್ ಬಿದ್ದು ಬಿದ್ದು ನಕ್ಕಿದರಂತೆ. ಈ ಹಾಡನ್ನು ಎಷ್ಟು ತಮಾಷೆಯಾಗಿ ಬರೆದಿದ್ದೀಯ ಹೇಗೆ ಶೂಟಿಂಗ್ ಮಾಡುತ್ತೇನೆ ನೋಡು ಎಂದಿದ್ದರು. ಆ ಹಾಡಿನಲ್ಲಿ ಸೌಂದರ್ಯ ಇರೋದು ಮಳೆ ಮತ್ತು ಕಾರು." ಎನ್ನುತ್ತಾರೆ.

ಇನ್ನು ಹಂಸಲೇಖ ಅವರಿಗೂ ಈ ಹಾಡು ತುಂಬಾನೇ ಇಷ್ಟವಂತೆ. ಅವರು ಕಂಪೋಸ್ ಮಾಡಿದ ಹಾಡುಗಳಲ್ಲೇ ಅತೀ ಸುಂದರವಾಗಿ ಚಿತ್ರೀಕರಿಸಿದ ಹಾಡು "ಕಮಾನು ಡಾರ್ಲಿಂಗ್.." ಎನ್ನುತ್ತಾರೆ ಎನ್‌ ಎಸ್ ಶ್ರೀಧರ ಮೂರ್ತಿ. "ಹಂಸಲೇಖ ಕೂಡ ಯಾವಾಗಲೂ ಹೇಳುತ್ತಾರೆ. ನನ್ನ ಹಾಡುಗಳಲ್ಲಿ ಅದ್ಭುತವಾಗಿ ಚಿತ್ರೀಕರಿಸಿದ್ದು ಕಮಾನು ಡಾರ್ಲಿಂಗ್. ಅದರಲ್ಲಿ ಫೋಟೊಗ್ರಫಿ ಕೂಡ ಅಷ್ಟೇ ಪ್ರಮುಖ ಪಾತ್ರವಹಿಸಿದೆ. ಆಮೇಲೆ ರವಿಚಂದ್ರನ್ ಹೇಳಿದರು. ನೋಡಯ್ಯ ನನಗೆ ಯಾರದ್ದೋ ಊಟ ಬಡಿಸಿದಂತೆ ಆಯ್ತು. ಇಷ್ಟು ದೊಡ್ಡ ಸೆಟ್ ಹಾಕಿ, ನನಗೆ ಇಂತಹದ್ದು ಇನ್ನೊಂದು ಹಾಡು ಬೇಕು ಅಂದರು. ಹಿಂದಿಯಾ 'ಬೇಟ' ಸಿನಿಮಾದಲ್ಲಿ ಎರಡು ಹಾಡುಗಳಿವೆ ಎಂದು ಬಂದಿದ್ದೇ ಬೊಂಬೆ ಬೊಂಬೆ ಸಾಂಗ್."

More from Filmibeat

English summary
Come On Darling song from Annayya movie was created by Hamsalekha to respond Lankesh Pathrike article;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X