ಅರೆ ರೇ.. ಡಾಲಿ– ಅಮೃತಾ ನಡುವೆ ಇದೆಂಥಾ ಭಾವನೆ? ಎಲ್ಲಾ 'ಹೊಯ್ಸಳ' ಮಹಿಮೆ
ಡಾಲಿ ಧನಂಜಯ್ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಹೊಯ್ಸಳ'. ಇದು ನಟ ರಾಕ್ಷಸ ಧನಂಜಯ್ ನಟನೆಯ 25ನೇ ಸಿನಿಮಾ ಅನ್ನೋದು ವಿಶೇಷ. ಹೀಗಾಗಿ ಸ್ವಲ್ಪ ಜಾಸ್ತಿನೇ ನಿರೀಕ್ಷೆಯಿದೆ. ಈಗಾಗಲೇ ಡಾಲಿ ಲುಕ್ ಕಂಡ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಇದೂವರೆಗೂ ಡಾಲಿ ಧನಂಜಯ್ ಖಡಕ್ ಲುಕ್ಕು, ಮಾಸ್ ಮ್ಯಾನರಿಸಂ ಅನ್ನೇ ತೋರಿಸಲಾಗಿತ್ತು. ಆದ್ರೀಗ ಸಿನಿಮಾ ಒಂದು ಹಾಡು ರಿಲೀಸ್ ಆಗಿದೆ. ಅದು 'ಹೊಯ್ಸಳ' ಎಷ್ಟು ರೊಮ್ಯಾಂಟಿಕ್ ಅನ್ನೋದನ್ನು ಹೇಳುತ್ತಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರೂ, ತನ್ನ ಮಡದಿಯ ಮುಂದೆ ಪ್ರೀತಿಯ ನಿವೇದನೆ ಮಾಡುವ ರೊಮಾಂಟಿಕ್ ಪತಿಯ ಲುಕ್ ಕೊಟ್ಟಿದ್ದಾರೆ.

"ಅರೆ ರೇ.. ಇದು ಎಂಥಾ ಭಾವನೆ.." ಅಂತ ಅನ್ನೋ ಹಾಡನ್ನು 'ಹೊಯ್ಸಳ' ತಂಡ ರಿಲೀಸ್ ಮಾಡಿದೆ. ಗುರುದೇವ್ - ಗಂಗಾಳ ಕ್ಯೂಟ್ ರೊಮಾನ್ಸ್ ಅನ್ನು ಈ ಹಾಡಿನಲ್ಲಿ ಸೆರೆ ಹಿಡಿಯಲಾಗಿದೆ. ಈ ಹಾಡಿನ ಮೂಲಕ ಡಾಲಿ ಮಾಸ್ ಅಷ್ಟೇ ಅಲ್ಲ.. ರೊಮ್ಯಾಂಟಿಕ್ ಅನ್ನೋದು ಪ್ರೂವ್ ಆಗಿದೆ.
'ಬಡವ ರಾಸ್ಕಲ್' ಸಿನಿಮಾದಿಂದ ಸ್ಯಾಂಡಲ್‌ವುಡ್‌ನ ಹೊಸ ರೊಮ್ಯಾಂಟಿಕ್ ಜೋಡಿ ಅನ್ನೋ ಪಟ್ಟ ಗಿಟ್ಟಿಸಿಕೊಂಡಿದೆ. ಇದೇ ಸಿನಿಮಾದ "ಉಡುಪಿ ಹೊಟೇಲು.." ಹಾಡಿನಿಂದ ಈ ಜೋಡಿ ಸಿನಿಮಾ ಪ್ರೇಮಿಗಳಲ್ಲಿ ಮೋಡಿ ಮಾಡಿತ್ತು. ಈಗ ಡಾಲಿ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ ಈಗ "ಅರೇ ಇದು ಎಂಥಾ ಭಾವನೆ.." ಅಂತ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ್ದಾರೆ.

ಅಂದ್ಹಾಗೆ ಈ ರೊಮ್ಯಾಂಟಿಕ್ ಹಾಡಿಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ರೆ, ಗಾಯಕ ಹರಿಚರಣ್ ಧ್ವನಿಗೂಡಿಸಿದ್ದಾರೆ. ಹಾಗೇ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಈ ಹಿಂದೆ ಟೈಟಲ್ ಸಾಂಗ್ ರಿಲೀಸ್ ಆಗಿದ್ದು ಭಾರಿ ಸದ್ದು ಮಾಡಿತ್ತು. ಪೊಲೀಸ್ ಡ್ರಾಮಾ ಸಿನಿಮಾ ಆಗಿರುವ ಹೊಯ್ಸಳ ಚಿತ್ರದ ಟೀಸರ್ ರಿಲೀಸ್ ಆಗಿ ಭರವಸೆ ಮೂಡಿಸಿತ್ತು.
ಡಾಲಿ ಧನಂಜಯ್ 25ನೇ ಸಿನಿಮಾ ಆಗಿರುವುದರಿಂದ 'ಹೊಯ್ಸಳ' ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ಮಾರ್ಚ್ 30 ರಂದು ತೆರೆಮೇಲೆ ಅಪ್ಪಳಿಸಲಿದೆ. ಧನಂಜಯ್, ಅಮೃತಾ ಐಯ್ಯಂಗಾರ್ ಜೊತೆಗೆ ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಇನ್ನೂ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ವಿಜಯ್ ಎನ್ ಆಕ್ಷನ್ ಕಟ್ ಹೇಳಿದ್ರೆ, ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











