ಡಾಲಿ 25ನೇ ಸಿನಿಮಾ 'ಹೊಯ್ಸಳ' ಆಡಿಯೋಗೆ ಭಾರೀ ಬೇಡಿಕೆ: ದೊಡ್ಡ ಮೊತ್ತಕ್ಕೆ ಸೇಲ್!
2023 ಡಾಲಿ ಧನಂಜಯ್ ಕರಿಯರ್‌ನಲ್ಲಿ ಎಂದೂ ಮರೆಯಲಾಗದ ವರ್ಷ. ಯಾಕಂದ್ರೆ, ಇದೇ ವರ್ಷ ಡಾಲಿಯ 25ನೇ ಸಿನಿಮಾ ಬಿಡುಗಡೆಯಾಗುತ್ತಿದೆ. ಅದುವೇ 'ಹೊಯ್ಸಳ'.
'ಹೊಯ್ಸಳ' ಇದೇ ವರ್ಷ ಮಾರ್ಚ್ 30ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು, 25ನೇ ಸಿನಿಮಾ ಬಿಡುಗಡೆಗೆ ಬೇಕಾಗಿರೋ ಸಕಲ ಸಿದ್ಧತೆಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಈ ಮಧ್ಯೆ ಸಿನಿಮಾ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಅಂತ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಆಗುತ್ತಿದೆ.
'ಹೊಯ್ಸಳ' ಸಿನಿಮಾ ಆಡಿಯೋವನ್ನು ಆನಂದ್ ಆಡಿಯೋ ಅತೀ ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡಿದ್ದಾರಂತೆ. ಇದು ಧನಂಜಯ್ ವೃತ್ತಿ ಬದುಕಿನಲ್ಲೇ ಹೊಸ ದಾಖಲೆ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಧನಂಜಯ ಟಾಪ್ ಸ್ಟಾರ್‌ಗಳ ಪಟ್ಟಿ ಸೇರಿಕೊಂಡಿದ್ದಾರೆ ಅನ್ನೋದು ಗುಸಗುಸು.

ಡಾಲಿ ಕರಿಯರ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ 'ಹೊಯ್ಸಳ' ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋ ನಿರ್ಮಾಣ ಮಾಡಿದೆ. ಇದೊಂದು ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಈಗಾಗಲೇ ಕುತೂಹಲ ಮೂಡಿಸಿದೆ.
ಡಾಲಿ ಧನಂಜಯ 25ನೇ ಸಿನಿಮಾ ಆಗಿರೋದ್ರಿಂದ ಈ ಸಿನಿಮಾ ಸಾಕಷ್ಟು ವಿಶೇಷತೆಗಳನ್ನು ಹೊತ್ತು ಬರುತ್ತಿದೆ. ಸಿನಿಪ್ರಿಯರು ಅಂದುಕೊಂಡಂತಹ ನಿರೀಕ್ಷೆಗಳನ್ನೂ ಮೀರಿಸುವಂತೆ ಮೂಡಿ ಬಂದಿದೆ ಅನ್ನೋ ಮಾತಿದೆ.
'ಕಾಂತಾರ' ಸಿನಿಮಾ ಮೂಲಕ ಇಡೀ ದೇಶವೇ ತಿರುಗಿನೋಡುವಂತೆ ಮಾಡಿರೋ ಅಜನೀಶ್ ಲೋಕನಾಥ್ 'ಹೊಯ್ಸಳ'ನಿಗೆ ಟ್ಯೂನ್ ಹಾಕಿದ್ದಾರೆ. ಹೀಗಾಗಿ 'ಹೊಯ್ಸಳ' ಸಿನಿಮಾದ ಹಾಡುಗಳಿಗಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

'ಹೊಯ್ಸಳ' ಸಿನಿಮಾದಲ್ಲಿ ಧನಂಜಯ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಳಗಾವಿ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಆಧರಿಸಿ 'ಹೊಯ್ಸಳ' ಕಥೆಯನ್ನು ಹೆಣೆಯಲಾಗಿದೆ. ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಮಾರ್ಚ್ 30ಕ್ಕೆ ರಿಲೀಸ್ ಆಗಲಿದೆ. ಸದ್ಯಕ್ಕೆ ಸಿನಿಮಾದ ಡಬ್ಬಿಂಗ್ ನಡೆಯುತ್ತಿದೆ.
'ಬಡವ ರಾಸ್ಕಲ್' ಬಳಿಕ ಡಾಲಿ ಧನಂಜಯ್ ಜೊತೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನವೀನ್ ಶಂಕರ್, ಅವಿನಾಶ್ ಬಿಎಸ್, ಮಯೂರಿ ನಟರಾಜ ಮತ್ತು ಪ್ರತಾಪ್ ನಾರಾಯಣ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಎನ್ ಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. 'ರತ್ನನ್ ಪ್ರಪಂಚ' ಯಶಸ್ಸಿನ ಬಳಿಕ ಮತ್ತೊಮ್ಮೆ ಈ ತಂಡ ಒಂದಾಗಿ ಸಿನಿಮಾ ಮಾಡುತ್ತಿದೆ.


Click it and Unblock the Notifications











