ಡಾಲಿ- ಪರಮ್ 'ಕೋಟಿ' ಸಾಂಗ್; ಸೋಶಿಯಲ್ ಮೀಡಿಯಾದ ಸಿಕ್ಕಾಪಟ್ಟೆ ಟ್ರೆಂಡಿಂಗ್

ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಆಗಿದ್ದ ಪರಮೇಶ್ವರ್ ಗುಂಡ್ಕಲ್ ನಿರ್ದೇಶನಕ್ಕೆ ಇಳಿದಿದ್ದು ಗೊತ್ತೇ ಇದೆ. ಅದ್ಯಾವಾಗ ಶೂಟಿಂಗ್ ಮಾಡಿದ್ರು? ಸಿನಿಮಾ ಕಥೆ ಏನು? ಡಾಲಿ ಧನಂಜಯ್ ಯಾವಾಗ ಸಿನಿಮಾ ಮಾಡಿದ್ರು? ಅಂತ ಲೆಕ್ಕಾ ಹಾಕೋಕೆ ಶುರು ಮಾಡುತ್ತಿರುವಾಗಲೇ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ.

ಅಂದ್ಹಾಗೆ ಡಾಲಿ ಧನಂಜಯ್ ಹಾಗೂ ಪರಮ್ ಕಾಂಬಿನೇಷನ್‌ನಲ್ಲಿ ನಿರ್ಮಾಣ ಆಗಿರುವ ಸಿನಿಮಾದ ಹೆಸರು 'ಕೋಟಿ'. ಈ ಸಿನಿಮಾ ಹಾಡುಗಳು ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ. ಸದ್ಯ ಹಾಡುಗಳನ್ನು ಬಿಟ್ಟಿದ್ದು, ಆ ಹಾಡುಗಳು ನಿಧಾನವಾಗಿ ಸಂಗೀತ ಪ್ರಿಯರನ್ನು ಆವರಿಸಿಕೊಳ್ಳುವುದಕ್ಕೆ ಶುರುವಾಗಿದೆ.

Dhananjay starrer Koti movie Mathu Soothu Song is trending on instagram and youtube

ಈ ಸಿನಿಮಾದ "ಮಾತು ಸೋತು..." ಹಾಡು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಈ ಹಾಡನ್ನು ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಈಗಾಗಲೇ ಈ ಹಾಡನ್ನು ಇಟ್ಟುಕೊಂಡು ಸಾಕಷ್ಟು ರೀಲ್ಸ್ ಆಗಿದ್ದು, ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಆಗಿದೆಯಂತೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿರುವ 'ಕೋಟಿ' ಸಿನಿಮಾದ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುವುದಕ್ಕೆ ಶುರು ಮಾಡಿದೆ.

ವಾಸುಕಿ ವೈಭವ್ ಟ್ಯೂನ್ ಹಾಕಿದ್ದರೆ, ಯೋಗರಾಜ್ ಭಟ್ ಸಾಹಿತ್ಯವಿದೆ. ಅರ್ಮಾನ್ ಮಲಿಕ್ "ಮಾತು ಸೋತು..." ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ಇನ್‌ಸ್ಟಾಗ್ರಾಂನಲ್ಲಿ ಕಳೆದ ಒಂದು ವಾರದಿಂದ ಟ್ರೆಂಡಿಂಗ್‌ನಲ್ಲಿದೆ. ಲಿರಿಕಲ್ ವಿಡಿಯೋ ಯೂಟ್ಯೂಬ್‌ನಲ್ಲೂ ಹದಿನಾಲ್ಕು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿದೆ. ಯೂಟ್ಯೂಬ್ ಶಾರ್ಟ್ಸ್‌ನಲ್ಲೂ ಟ್ರೆಂಡಿಂಗ್‌ನಲ್ಲಿದೆ.

ಈ ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗುತ್ತಿರುವ ಬಗ್ಗೆ ವಾಸುಕಿ ವೈಭವ್ ಖುಷಿ ವ್ಯಕ್ತಪಡಿಸಿದ್ದಾರೆ. "ಮಾತು ಸೋತು ಟ್ರೆಂಡ್ ಆಗ್ತಿರೋದು ಖುಷಿ ನೀಡಿದೆ.‌ ಇದು ಇನ್ನೂ ಪಿಕ್ ಆಗೋ ಭರವಸೆ ಇದೆ. ಇಷ್ಟಪಟ್ಟು ಮಾಡಿದ ಹಾಡುಗಳು ಹೀಗೆ ಜನರನ್ನು ತಲುಪಿದಾಗ ಆಗೋ ಖುಷಿ ವಿಶೇಷವಾದದ್ದು" ಎಂದು ಹೇಳಿದ್ದಾರೆ. ಹಾಗೇ ನಿರ್ದೇಶಕ ಪರಮ್ "ನನ್ನ ಮೊದಲ ಸಿನಿಮಾದ ಮೊದಲ ಹಾಡು ಈ ಮಟ್ಟಿಗಿನ ಸದ್ದು ಮಾಡುತ್ತಿರುವುದ ನೋಡಿ ಖುಷಿ ಆಗಿದೆ. ದಿನಾಲೂ ಸಾವಿರಾರು ರೀಲ್ಸ್‌ಗಳು ಅಪ್ಲೋಡ್ ಆಗುತ್ತಿದ್ದು, ಟ್ರೆಂಡಿಂಗ್ ಹೀಗೆ ಮುಂದುವರಿಯುವ ಭರವಸೆ ಇದೆ" ಎಂದು ಹೇಳಿಕೊಂಡಿದ್ದಾರೆ.

ಇನ್ನು ಯೋಗರಾಜ್‌ ಭಟ್ ಈ ಹಾಡಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 'ಕೋಟಿ' ಸಿನಿಮಾದಲ್ಲಿ ಡಾಲಿ ಧನಂಜಯ್, ನಾಯಕಿಯಾಗಿ ಮೋಕ್ಷಾ ಕುಶಾಲ್‌, ಖಳನಾಯಕನಾಗಿ ರಮೇಶ್ ಇಂದಿರಾ ನಟಿಸಿದ್ದಾರೆ. ಹಾಗೇ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಮುಂತಾದವರು ಇದ್ದಾರೆ.

ಇನ್ನು ಸಿನಿಮಾದಲ್ಲಿ ಐದು ಹಾಡುಗಳಿವೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯವಿದೆ. ಹಿನ್ನೆಲೆ ಸಂಗೀತ '777 ಚಾರ್ಲಿ' ಖ್ಯಾತಿಯ ನೊಬಿನ್‌ ಪೌಲ್‌ ನೀಡಿದ್ದರೆ, 'ಕಾಂತಾರ' ಸಿನಿಮಾದ ಸಂಕಲನಗಾರ ಪ್ರತೀಕ್‌ ಶೆಟ್ಟಿ ಎಡಿಟಿಂಗ್, ಅರುಣ್ ಅವರ ಛಾಯಾಗ್ರಹಣವಿದೆ. ಇನ್ನು ಜಿಯೋ ಸ್ಟುಡಿಯೋಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡದಲ್ಲಿ ದಶಕಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ನೀಡಿದ್ದ ಪರಮೇಶ್ವರ್ ಗುಂಡ್ಕಲ್ ಆಕ್ಷನ್ ಕಟ್ ಹೇಳಿದ್ದಾರೆ. 'ಕೋಟಿ' ಇದೇ ವರ್ಷ ಜೂನ್‌ 14ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

More from Filmibeat

English summary
'Mathu Soothu' song from Dhananjay's Koti movie gains popularity on Instagram and YouTube, trending across platforms
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X