"ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ"; ಉಪೇಂದ್ರ ಸಿನಿಮಾದ ಈ ಹಾಡು ಹುಟ್ಟಿದ್ದೇಗೆ?

ಸೋಶಿಯಲ್ ಮೀಡಿಯಾದಲ್ಲಿ 25 ವರ್ಷಗಳ ಹಿಂದೆ ರಿಲೀಸ್ ಆದ ಕನ್ನಡ ಸಿನಿಮಾದ ಹಾಡು ಟ್ರೆಂಡ್ ಆಗುತ್ತಿದೆ. 'ಉಪೇಂದ್ರ' ಸಿನಿಮಾದ "ಏನಿಲ್ಲ ಏನಿಲ್ಲ.." ಹಾಡಿಗೆ ರೀಲ್ಸ್ ಮಾಡಿ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಉಪೇಂದ್ರ ನಾಯಕನಾಗಿ ನಟಿಸಿದ್ದ ಈ ಸಿನಿಮಾದ ಹಾಡುಗಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು.

ಒಬ್ಬೊಬ್ಬ ನಾಯಕಿಗೆ ಒಂದೊಂದು ಹಾಡನ್ನು ಇಡಲಾಗಿತ್ತು. ಅದರಲ್ಲಿ ಉಪ್ಪಿ ಹಾಗೂ ಪ್ರೇಮಗೆ ಅಂತ ಕಂಪೋಸ್ ಮಾಡಿದ್ದ ಹಾಡೇ "ಏನಿಲ್ಲ.. ಏನಿಲ್ಲ..". ಈ ಸಾಂಗ್‌ಗೆ ಟ್ಯೂನ್ ಹಾಕಿದ ಗುರುಕಿರಣ್‌ಗೂ ಇದು ಎರಡನೇ ಸಿನಿಮಾ ಆಗಿತ್ತು. ಆಗತಾನೇ 'ಎ' ಸಿನಿಮಾಗೆ ಭರ್ಜರಿ ಮ್ಯೂಸಿಕ್ ಕೊಟ್ಟು ಗೆದ್ದಿದ್ದ ಗುರುಕಿರಣ್ 'ಉಪೇಂದ್ರ'ಗೂ ಮಸ್ತ್ ಟ್ಯೂನ್ ಹಾಕಿದ್ದರು.

Do you know how did the trending song Enilla Enilla from Upendra movie came about?

'ಉಪೇಂದ್ರ' ಸಿನಿಮಾ ಬಿಡುಗಡೆಯಾಗಿ 25 ವರ್ಷ ಆಗಿದೆ. ಈಗ ಈ ಹಾಡು ದಿಢೀರನೇ ಟ್ರೆಂಡಿಂಗ್‌ನಲ್ಲಿದೆ. ಅದಕ್ಕೆ ಕಾರಣ ಉತ್ತರ ಕರ್ನಾಟಕದ ಒಬ್ಬ ಯುವಕ. ಆದರೆ ಇಂದು ಟ್ರೆಂಡ್ ಆಗುತ್ತಿರುವ "ಏನಿಲ್ಲ ಏನಿಲ್ಲ.." ಹಾಡು ಹುಟ್ಟಿದ್ದು ಹೇಗೆ? ಇದೊಂದು ಇಂಟ್ರೆಸ್ಟಿಂಗ್ ಸ್ಟೋರಿ.. ಇದರೊಂದಿಹೆ ಉಪೇಂದ್ರ ಬಿಡುಗಡೆಯಾದಾಗ ಈ ಹಾಡು ಟ್ರೆಂಡಿಂಗ್‌ನಲ್ಲಿ ಇತ್ತಾ? ಆಡಿಯೋ ರೈಟ್ಸ್ ಎಷ್ಟಕ್ಕೆ ಸೇಲ್ ಆಗಿತ್ತು? ಇದೆಲ್ಲ ತಿಳಿಯಲು ಮುಂದೆ ಓದಿ.

ಆಗತಾನೇ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರಕಾರದ ಸಂಗೀತ ಅಲೆ ಎದ್ದಿತ್ತು. ಅಂದಿನ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆದಂತಹ ಟ್ಯೂನ್‌ಗಳನ್ನು ಗುರುಕಿರಣ್ ಕೊಡುತ್ತಿದ್ದಾರೆ ಅಂತ ಸಂಗೀತ ಪ್ರಿಯರಿಗೂ ಅನಿಸಿತ್ತು. ಹೀಗಾಗಿ ಉಪ್ಪಿ ಹೀರೊ ಆಗಿ ನಟಿಸುತ್ತಿದ್ದ ಎರಡನೇ ಸಿನಿಮಾ 'ಉಪೇಂದ್ರ'ಗೂ ಗುರುಕಿರಣ್ ಸಂಗೀತ ನಿರ್ದೇಶಕರಾಗಿ ಆಯ್ಕೆ ಆಗಿದ್ದರು. ಉಪ್ಪಿ ಹಾಗೂ ಗುರುಕಿರಣ್ ಸ್ನೇಹಿತರಾಗಿದ್ದರಿಂದ ಟ್ಯೂನ್ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿದ್ದರು.

ಏನಿಲ್ಲ ಏನಿಲ್ಲ ಹಾಡು ಹುಟ್ಟುವುದಕ್ಕೊಂದು ಕಾರಣವಿದೆ. ಉಪೇಂದ್ರ ನಿರ್ದೇಶಕರಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಹೀರೊ ಆಗಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಉಪೇಂದ್ರ ಹಾಗೂ ನಟಿ ಪ್ರೇಮ ನಡುವೆ ಏನೋ ನಡೀತಿದೆ ಅಂತ ಗಾಳಿಸುದ್ದಿಗಳು ಹಬ್ಬಿದ್ದವು. ಇದಕ್ಕೆ ಹಾಡಿನ ರೂಪದಲ್ಲಿ ಉತ್ತರ ಕೊಡೋಣ ಅಂತ ಉಪ್ಪಿ ನಿರ್ಧರಿಸಿದ್ದರು. ಅದಕ್ಕಾಗಿ ಕಂಪೋಸ್ ಮಾಡಿದ ಹಾಡಿದು. ಈ ಮಾತನ್ನು ಸ್ವತ: ಗುರುಕಿರಣ್ ಫಿಲ್ಮಿ ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Do you know how did the trending song Enilla Enilla from Upendra movie came about?

"ಏನಿಲ್ಲ ಏನಿಲ್ಲ ಹಾಡಿಗೆ ರೀಸನ್ ಏನು ಅಂದರೆ? ಆಗ ಒಂದು ರೂಮರ್ ಇತ್ತು. ಉಪೇಂದ್ರ ಮತ್ತು ಪ್ರೇಮ ಅವರ ಬಗ್ಗೆ ರೂಮರ್ ಇತ್ತು. ಅದನ್ನು ನಾವು ಸಾಂಗ್‌ನಲ್ಲಿ ಏನಿಲ್ಲ ಅಂತ ಹೇಳಿ ಬಿಡೋಣ. ಆಮೇಲೆ ಏನಿಲ್ಲ ಅಂದರೆ, ಎರಡು ಅರ್ಥ ಬರುತ್ತೆ. ಏನೇನಿಲ್ಲ? ಏನೇನೂ ಇಲ್ಲ? ಎಂಬ ಎರಡು ಅರ್ಥ ಬರುತ್ತೆ. ಹಾಗೇ ಫಸ್ಟ್ ಟ್ಯೂನ್ ಆಗಿದ್ದು ಈ ಪದದಿಂದ ಅಷ್ಟೇ." ಎಂದು ಗುರುಕಿರಣ್ ಹೇಳಿದ್ದಾರೆ.

ಈ ಹಾಡನ್ನು ಕಂಪೋಸ್ ಮಾಡುವುದಕ್ಕೆ ಉಪ್ಪಿಯನ್ನೂ ಸೇರಿ 8 ರಿಂದ 10 ಮಂದಿ ಮಂಗಳೂರಿಗೆ ಹೋಗಿದ್ದರು. ಅಲ್ಲೊಂದು ರೆಸಾರ್ಟ್‌ನಲ್ಲಿ ಕೂತು ಟ್ಯೂನ್ ಹಾಕುವುದಕ್ಕೆ ಶುರುವಿಟ್ಟುಕೊಂಡಿದ್ದರು. "ಆ ಸಮಯದಲ್ಲಿ ಮ್ಯೂಸಿಕ್ ಅನ್ನು ಪ್ರೊಫೆಷನ್ ಆಗಿ ತೆಗೆದುಕೊಂಡಿರಲಿಲ್ಲ. ಉಪೇಂದ್ರ ಅವರು ಫ್ರೆಂಡ್ ಆಗಿದ್ದರು ಅಂತ ಒಂದು ಸಿನಿಮಾ ಮಾಡಿದೆ. ಎ ಆದ್ಮೇಲೆ ಇನ್ನೊಂದು ಸಿನಿಮಾ ಉಪೇಂದ್ರ ಆಫರ್ ಬಂತು. ಇಡೀ ತಂಡ ಮಂಗಳೂರಿಗೆ ಹೋಗಿದ್ದೆವು. ಅಲ್ಲಿ 8 ರಿಂದ 10 ದಿನ ಇದ್ದೆವು. ಒಂದಿಷ್ಟು ಕಂಪೋಸಿಂಗ್ ಎಲ್ಲವೂ ಅಲ್ಲೇ ನಡೀತಿತ್ತು. ಮಸ್ತ್ ಮಸ್ತ್ ಹುಡುಗಿ, ಏನಿಲ್ಲ ಏನಿಲ್ಲ ಎಲ್ಲ ಅಲ್ಲೇ ಹುಟ್ಟಿಕೊಂಡಿದ್ದು." ಎಂದು ಗುರುಕಿರಣ್ ನೆನಪಿಸಿಕೊಳ್ಳುತ್ತಾರೆ.

ವಿಶೇಷ ಅಂದರೆ, ಏನಿಲ್ಲ ಏನಿಲ್ಲ ಹಾಡು ಕೇವಲ 5 ರಿಂದ 10ಸ ನಿಮಿಷದಲ್ಲಿ ರೆಡಿಯಾಗಿತ್ತು. ತಮ್ಮ ಬಗ್ಗೆ ಹುಟ್ಟಿಕೊಂಡಿದ್ದ ಗಾಳಿ ಸುದ್ದಿಗೆ ಉತ್ತರ ಕೊಡಲು ಉಪೇಂದ್ರ 'ಏನಿಲ್ಲ' ಅನ್ನೋ ಒಂದು ಪದದಿಂದ ಸಾಹಿತ್ಯ ಬರೋಕೆ ಶುರು ಮಾಡಿದ್ದರು. ಅದೇ ವೇಳೆ ಗುರುಕಿರಣ್ ಪಲ್ಲವಿ ರೆಡಿ ಮಾಡಿದ್ದರು.

ಅಂದಿನ ಕಾಲಕ್ಕೆ ಈ ಸಿನಿಮಾ ಆಡಿಯೋ ಹಕ್ಕು ಬರೋಬ್ಬರಿ 54 ಲಕ್ಷ ರೂಪಾಯಿಗೆ ಸೇಲ್ ಆಗಿತ್ತು. ಆಕಾಶ್ ಆಡಿಯೋದ ಮಧು ಬಂಗಾರಪ್ಪ ಈ ಸಿನಿಮಾದ ಹಕ್ಕುಗಳನ್ನು ತೆಗೆದುಕೊಂಡಿದ್ದರು. ಉಪೇಂದ್ರ ಅನ್ನೋ ಸಿನಿಮಾ ಬರುವವರೆಗೂ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿ ಆಡಿಯೋ ಇದಾಗಿತ್ತು.

More from Filmibeat

English summary
How did Enilla Enilla song from Upendra movie came about?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X