ಸೋಮು ಜೊತೆ ಬಂದ ಸುಕ್ಕಾ ಸೂರಿ ಶಿಷ್ಯ.. 'ಸೋಮು ಸೌಂಡ್ ಇಂಜಿನಿಯರ್' ಟೈಟಲ್ ಟ್ರ್ಯಾಕ್ ಮಸ್ತ್!
ಸ್ಯಾಂಡಲ್‌ವುಡ್‌ನಲ್ಲಿ ರಗಡ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುವ ನಿರ್ದೇಶಕ ದುನಿಯಾ ಸೂರಿ. ಅದಕ್ಕೆ ಸಿನಿಮಾ ಮಂದಿ ದುನಿಯಾ ಸೂರಿಯನ್ನು ಪ್ರೀತಿಯಿಂದ ಸುಕ್ಕಾ ಸೂರಿ ಅಂತಲೇ ಕರೆಯುತ್ತಾರೆ. ಇವರ ಗರಡಿಯಲ್ಲಿ ಪಳಗಿರೋ ಸೂರಿಯ ಶಿಷ್ಯ ಅಭಿ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದರು. ಅದುವೇ 'ಸೋಮು ಸೌಂಡ್ ಇಂಜಿನಿಯರ್'.
'ಸೋಮು ಸೌಂಡ್ ಇಂಜಿನಿಯರ್' ಇದೊಂದು ಪಕ್ಕಾ ಉತ್ತರ ಕರ್ನಾಟಕ ಭಾಗದ ಕಥೆಯನ್ನು ಹೇಳುವ ಸಿನಿಮಾ. ಅಭಿ ಚೊಚ್ಚಲ ಪ್ರಯತ್ನದಲ್ಲೇ ಗುರುವಿನಂತೆ ರಗಡ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟೈಟಲ್ ಡಿಫ್ರೆಂಟ್ ಅಂದ್ಮೇಲೆ, ಸಿನಿಮಾ ಎಷ್ಟು ಡಿಫ್ರೆಂಟ್ ಆಗಿರುತ್ತೆ ಅನ್ನೋ ಕುತೂಹಲ ಅಂತೂ ಇದ್ದೇ ಇದೆ. ಆದರೆ ಅದಕ್ಕೂ ಮುನ್ನ ಸಿನಿಮಾದ ಮೊದಲ ಹಾಡು ಕಿಕ್ ಕೊಡುತ್ತಿದೆ.

ಅಭಿ ನಿರ್ದೇಶನದ ಚೊಚ್ಚಲ ಸಿನಿಮಾದ ಹಾಡು ಹೊರಬಿದ್ದಿದ್ದು, ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ. 'ಸೋಮು ಸೌಂಡ್ ಇಂಜಿನಿಯರ್' ಸಿನಿಮಾ ಟೈಟಲ್ ಟ್ರ್ಯಾಕ್ ಕೂಡ ಅಷ್ಟೇ ರಗಡ್ ಆಗಿದೆ. ರಗಡ್ ಸಿನಿಮಾಗಳಿಗೆ ಟ್ಯೂನ್ ಹಾಕೋದ್ರಲ್ಲಿ ಎಕ್ಸ್‌ಪರ್ಟ್ ಎನಿಸಿಕೊಂಡಿರೋ ಚರಣ್ ರಾಜ್ ಈ ಚಿತ್ರಕ್ಕೂ ಕಂಪೋಸ್ ಮಾಡಿದ್ದಾರೆ.
'ಸೋಮು ಸೌಂಡ್ ಇಂಜಿನಿಯರ್' ಟ್ರೈಟಲ್ ಟ್ರ್ಯಾಕ್‌ಗೆ ಧನಂಜಯ್ ರಂಜನ್ ರಗಡ್ ಸಾಹಿತ್ಯವಿದ್ದರೆ, ರಗಡ್ ಧ್ವನಿಯಲ್ಲಿ ಸ್ವರೂಪ್ ಖಾನ್ ಹಾಡಿದ್ದಾರೆ. ನಾಯಕ ಸೋಮು ಹಾವ-ಭಾವ, ವರ್ತನೆಯನ್ನು ವರ್ಣಿಸುವ ಈ ಹಾಡು ಮಾಸ್ ಪ್ರಿಯರಿಗೆ ಕಿಕ್ ಕೊಡುತ್ತಿದೆ. ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.
'ಸೋಮು ಸೌಂಡ್ ಇಂಜಿನಿಯರ್' ಸಿನಿಮಾದಲ್ಲಿ ಸಲಗ ಸಿನಿಮಾದಲ್ಲಿ ನಟಿಸಿದ ಕೆಂಡ ಖ್ಯಾತಿಯ ಶ್ರೇಷ್ಠ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಶ್ರೇಷ್ಠಗೆ ನಾಯಕಿಯಾಗಿ ಶೃತಿ ಪಾಟೀಲ್ ನಟಿಸಿದ್ದಾರೆ. ಹಾಗೇ ಜಹಾಂಗೀರ್, ಅಪೂರ್ವ,ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಅಭಿಗೆ ಬೆನ್ನಲುಬಾಗಿ ಮಾಸ್ತಿ ಇದ್ದು ಡೈಲಾಗ್ ಬರೆದಿದ್ದಾರೆ. ವೈದ್ಯರಾಗಿರುವ ಕ್ರಿಸ್ಟೋಪರ್ ಕಿಣಿ ಸೋಮ ಸೌಂಡ್ ಇಂಜಿನಿಯರ್ ಸಿನಿಮಾಗೆ ಹಣ ಹೂಡಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.
'ಸೋಮು ಸೌಂಡ್ ಇಂಜಿನಿಯರ್' ಸಿನಿಮಾದ ನಿರ್ದೇಶಕ ಅಭಿ, ದುನಿಯಾ ಸೂರಿ ನಿರ್ದೇಶಿಸಿದ 'ಕಡ್ಡಿಪುಡಿ', 'ಕೆಂಡಸಂಪಿಗೆ', 'ದೊಡ್ಡಮನೆ ಹುಡುಗ', 'ಟಗರು' ಅಂತಹ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ.


Click it and Unblock the Notifications











