'ಫ್ಯಾಮಿಲಿ ಪ್ಯಾಕ್' ಸಿನಿಮಾ ಎರಡನೇ ಹಾಡು ರಿಲೀಸ್
ಪುನೀತ್ ರಾಜ್‌ಕುಮಾರ್ ಅವರ ಪಿಆರ್ಕೆ ಸಂಸ್ಥೆ 'ಫ್ಯಾಮಿಲಿ ಪ್ಯಾಕ್' ಚಿತ್ರದ ಮೂಲಕ ಒಟಿಟಿಯಲ್ಲೂ ಯಶಸ್ಸು ಕಂಡಿದೆ. ಫ್ಯಾಮಿಲಿ ಪ್ಯಾಕ್ ಸಿನಿಮಾ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಗೆಲ್ಲುವುದಿಲ್ಲ ಎನ್ನುವ ಆರೋಪಕ್ಕೆ ವಿರುದ್ಧವಾಗಿ ನಿಂತಿದೆ. ಅಮೆಜಾನ್ ಒಟಿಟಿಯಲ್ಲಿ ಈ ಸಿನಿಮಾ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಇತ್ತೀಚೆಗೆ ಫ್ಯಾಮಿಲಿ ಪ್ಯಾಕ್ ಸಿನಿಮಾ ನೋಡಿ ನಿರ್ದೇಶಕರಿಗೆ ಟಾಲಿವುಡ್‌ನಿಂದ ಆಫರ್‌ಗಳು ಬಂದಿದ್ದವು. ಇದೇ ಖುಷಿಯಲ್ಲೀಗ ಎರಡನೇ ಸಾಂಗ್ ಅನ್ನು ಬಿಡುಗಡೆ ಮಾಡಲಾಗಿದೆ.
'ಫ್ಯಾಮಿಲಿ ಪ್ಯಾಕ್' ಕೆಲವು ದಿನಗಳ ಹಿಂದಷ್ಟೇ ಪ್ರೈಮ್ ವಿಡಿಯೋದಲ್ಲಿ ವಿಶೇಷವಾಗಿ ಬಿಡುಗಡೆಗೊಂಡಿದೆ. ಈ ಸಿನಿಮಾ ಒಟಿಟಿ ವೀಕ್ಷಕರಿಂದ ಅಷ್ಟೇ ಅಲ್ಲ, ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಕಥೆ, ಚಿತ್ರಕಥೆ ಎಲ್ಲವೂ ಪ್ರೇಕ್ಷಕರಿಗೆ ತುಂಬಾನೇ ಇಷ್ಟ ಆಗಿತ್ತು. ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದ್ದರು. ಇದೇ ಖುಷಿಯಲ್ಲಿ ಸಿನಿಮಾ ಹಾಡನ್ನುಬಿಡುಗಡೆ ಮಾಡಲಾಗಿದೆ.
'ಬೇಕಾಗಿದೆ' ಸಾಂಗ್ ರಿಲೀಸ್ ಮಾಡಿದೆ ಟೀಮ್
'ಫ್ಯಾಮಿಲಿ ಫ್ಯಾಕ್' ಸಿನಿಮಾದ ಭಾವಪೂರ್ಣ ಸಾಂಗ್ ಅನ್ನು ಟೀಮ್ ರಿಲೀಸ್ ಮಾಡಿದೆ. ಈ ಹಾಡನ್ನು ಸಂಗೀತ ನಿರ್ದೇಶಕ ವಿರಾಜ್ ಕನ್ನಡಿಗ ಟ್ಯೂನ್ ಹಾಕಿದ್ದಾರೆ. ಇವರೇ ರಚಿಸಿ, ಹಾಡಿರುವ ಈ ಹಾಡು ವ್ಯಕ್ತಿಯ ಅಂತರಂಗದ ಅನುಭವವನ್ನು ಅನಾವರಣಗೊಳಿಸುತ್ತದೆ. ಅದುವೇ 'ಬೇಕಾಗಿದೆ' ಎನ್ನುವ ಹಾಡು.

'ಫ್ಯಾಮಿಲಿ ಪ್ಯಾಕ್' ಸಿನಿಮಾ ಯಶಸ್ವಿಯಾಗಿ ಬಿಡುಗಡೆಯಾದ ನಂತರ, ನಿರ್ಮಾಪಕರು ಚಿತ್ರದ ಎರಡನೇ ಹಾಡು 'ಬೇಕಾಗಿದೆ' ರಿಲೀಸ್ ಮಾಡಿದ್ದಾರೆ. 'ಬೇಕಾಗಿದೆ' ಹಾಡನ್ನು ಜನಪ್ರಿಯ ಸಂಗೀತ ನಿರ್ದೇಶಕ-ಗಾಯಕ ವಿರಾಜ್ ಕನ್ನಡಿಗ ಅವರು ಸಂಯೋಜಿಸಿದ್ದು, ಅರ್ಜುನ್ ಕುಮಾರ್.ಎಸ್ ನಿರ್ದೇಶನ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣದ 'ಫ್ಯಾಮಿಲಿ ಪ್ಯಾಕ್' ವಿಶೇಷವಾಗಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ.

ಬೇಕಾಗಿದೆ ಹಾಡಿನ ಸಂದರ್ಭವೇನು?
'ಬೇಕಾಗಿದೆ..' ಸಾಂಗ್ ಚಿತ್ರದ ನಾಯಕ ಅಭಿ (ಲಿಕಿತ್ ಶೆಟ್ಟಿ)ಯ ಮೇಲೆ ಸಾಗುತ್ತೆ. ಪ್ರೀತಿಯಿಂದ ತೊಂದರೆಗೊಳಗಾದಾಗ ಅನುಭವಿಸುವ ವಿಶೇಷ ಭಾವನೆಗಳನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಲಾಗಿದೆ. ಪ್ರೀತಿ ಮತ್ತು ಭಾವನೆಗಳ ಜೊತೆಗಿನ ಸುದೀರ್ಘ ಪ್ರಯಾಣದಲ್ಲಿ ನಾಯಕ ಸಂಗಾತಿಗಾಗಿ ಪಡುವ ಶ್ರಮವನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಈ ಹಾಡು ಕೆಲವು ಪ್ರಮುಖ ಪಾತ್ರಗಳ ನಡುವಿನ ಭಾವನಾತ್ಮಕ ಸಂಬಂಧಗಳಲ್ಲಿ ಬಿಂಬಿಸಲಿದೆ. ಬಿಡುಗಡೆಯಾದಾಗಿನಿಂದ ಚಿತ್ರವನ್ನು ಮೆಚ್ಚುತ್ತಿರುವ ಅಭಿಮಾನಿಗಳಿಗೆ ಈ ಹಾಡು ಇಷ್ಟ ಆಗುತ್ತೆ ಎನ್ನುತ್ತೆ ಚಿತ್ರತಂಡ.
'ಫ್ಯಾಮಿಲಿ ಪ್ಯಾಕ್' ಸಿನಿಮಾವನ್ನು PRK ಪ್ರೊಡಕ್ಷನ್ ನಿರ್ಮಾಣ ಮಾಡಿತ್ತು. ಪುನೀತ್ ರಾಜ್‌ಕುಮಾರ್ ಈ ಸಿನಿಮಾವನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿ ಇದ್ದರು. ಅಷ್ಟರಲ್ಲೇ ದುರಂತ ನಡೆದು ಹೋಯ್ತು. ಅಪ್ಪು ಅಗಲಿದ ಬಳಿಕ ಪುನೀತ್ ರಾಜ್‌ಕುಮಾರ್ ನಿರ್ಮಸಿದ ಈ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಲಾಯಿತು. ಅರ್ಜುನ್ ಕುಮಾರ್ ನಿರ್ದೇಶಿಸಿರುವ ಈ ಚಿತ್ರ ವ್ಯಕ್ತಿಯ ಭಾವನೆಗಳೊಂದಿಗೆ ಸಾಗುವ ಒಂದು ಪ್ರೀತಿಯ ಕಥೆ. ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಜೊತೆ ರಂಗಾಯಣ ರಘು, ಅಚ್ಯುತ್ ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ.


Click it and Unblock the Notifications











