ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ಗೋಲ್ಡನ್ ಸಾಂಗ್; "ದ್ವಾಪರ" ಸಾಂಗ್ ಟ್ರೆಂಡೋ ಟ್ರೆಂಡು

ಮತ್ತೆ ಗೋಲ್ಡನ್ ಸ್ಟಾರ್ ಮೇನಿಯಾ ಶುರುವಾಗುತ್ತಿರುವ ಹಾಗಿದೆ. 'ಮುಂಗಾರು ಮಳೆ' ಸಿನಿಮಾದ ಟ್ರೆಂಡ್ ಮತ್ತೆ ಮರುಕಳಿಸುವಂತೆ ಭಾಸವಾಗುತ್ತಿದೆ. ಬಹಳ ದಿನಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಿನಿಮಾದ ಹಾಡುಗಳು ಟ್ರೆಂಡಿಂಗ್‌ನಲ್ಲಿವೆ. ಹೌದು, 'ಕಷ್ಣಂ ಪ್ರಣಯ ಸಖಿ' ಸಿನಿಮಾದ ದ್ವಾಪರ ಸಾಂಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಎಲ್ಲರ ಮೊಬೈಲ್‌ನಲ್ಲೂ ಇದೇ ಸಿನಿಮಾಗಳು ಸದ್ದು ಮಾಡುವುದಕ್ಕೆ ಶುರು ಮಾಡಿದೆ.

'ದಂಡುಪಾಳ್ಯ' ಖ್ಯಾತಿಯ ಶ್ರೀನಿವಾಸ್ ರಾಜು 'ಕಷ್ಣಂ ಪ್ರಣಯ ಸಖಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹಾಡುಗಳಿಂದಲೇ ಪ್ರಚಾರ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಈಗಾಗಲೇ 'ಕಷ್ಣಂ ಪ್ರಣಯ ಸಖಿ' ಸಿನಿಮಾದ ಮೂರು ಹಾಡುಗಳು ಸೂಪರ್ ಹಿಟ್ ಆಗಿದೆ. "ಮೈ ಮ್ಯಾರೇಜ್ ಇಸ್ ಫಿಕ್ಸ್ಡ್", "ಚಿನ್ನಮ್ಮ" ಹಾಗೂ "ದ್ವಾಪರ ದಾಟುತ" ಮೂರು ಹಾಡುಗಳು ರಿಲೀಸ್ ಆಗಿವೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನಿಮಾದ ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Ganesh movie Krishnam Pranaya Sakhi Dwapara song sets new records in social media

ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದು, "ಸರಿಗಮಪ" ಖ್ಯಾತಿಯ ಜಸಕರಣ್ ಸಿಂಗ್ ಹಾಡಿರುವ "ದ್ವಾಪರ ದಾಟುತ" ಹಾಡು ಟ್ವಿಟರ್, ಯೂಟ್ಯೂಬ್ ಹಾಗೂ ಇನ್ಸ್ಟಾ ರೀಲ್ಸ್ ಗಳಲ್ಲಿ ಭಾರಿ ಟ್ರೆಂಡ್ ಹುಟ್ಟುಹಾಕಿದೆ. ಯೂಟ್ಯೂಬ್ ನಲ್ಲಿ ಎಂಟು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿರುವ ಈ ಹಾಡು ಇನ್ಸ್ಟಾ ರೀಲ್ಸ್ ನಲ್ಲಿ 2 ನೇ ಸ್ಥಾನದಲ್ಲಿದೆ. ಟ್ವಿಟರ್ ನಲ್ಲೂ ಹೊಸ ದಾಖಲೆ ಬರೆದಿದೆ. ಟ್ವಿಟರ್ ಹಾಗೂ ಇನ್ಸ್ಟಾ ರೀಲ್ಸ್ ನಲ್ಲಿ ಈ ರೀತಿಯ ಜನಪ್ರಿಯತೆ ಸಿಗುತ್ತಿರುವ ಕನ್ನಡದ ಮೊದಲ ಹಾಡು ಇದಾಗಿದೆ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.

ಹಾಡು ಬರೆದಿರುವ ನಾಗೇಂದ್ರ ಪ್ರಸಾದ್ ಸಹ ಈವರೆಗೂ ನಾನು ಬರೆದಿರುವ ಹಾಡುಗಳಲ್ಲಿ ಇದು ನನ್ನ ಮೆಚ್ಚುಗೆಯ ಹಾಡು ಎನ್ನುತ್ತಾರೆ. 'ಮುಂಗಾರು ಮಳೆ'ಯ ನಂತರ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಜನಪ್ರಿಯತೆಗೆ ಮನ ತುಂಬಿ ಬಂದಿದೆ ಎಂದು ನಾಯಕ ಗಣೇಶ್ ತಿಳಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು‌ ಯಶಸ್ವಿಯಾಗಿರುವುದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಆಡಿಯೋ ಹಕ್ಕು ಪಡಿದಿರುವ ಆನಂದ್ ಆಡಿಯೋದವರು ಆನಂದ ಪಟ್ಟಿದ್ದಾರೆ‌. ಈ ಸಂಭ್ರಮದ ಸಮಯದಲ್ಲಿ ನಿರ್ಮಾಪಕರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ವೀಕ್ಷಿಸಲು ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

More from Filmibeat

English summary
Ganesh movie Krishnam Pranaya Sakhi Dwapara song sets new records in social media
Read more about: ganesh actor filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X