Independence Day 2023:ಬ್ರಿಟಿಷರ ನೆಲದಲ್ಲಿ ರಾಷ್ಟ್ರಗೀತೆ "ಜನ ಗಣ ಮನ"ಕ್ಕೆ ಹೊಸ ಟ್ಯೂನ್ ಕೊಟ್ಟ ರಿಕ್ಕಿ ಕೇಜ್.. ವಿಶೇಷತೆ ಏನು?

ಆಗಸ್ಟ್ 15 ಭಾರತ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ದೇಶ ಪ್ರೇಮ ಮೆರೆದಿದ್ದಾರೆ. ರಾಷ್ಟ್ರಗೀತೆಗೆ ಹೊಸಬಗೆಯ ಟ್ಯೂನ್ ಕೊಟ್ಟು ಸ್ವಾತಂತ್ರ್ಯ ದಿನಾಚರಣೆಯಂದು ಜನರಲ್ಲಿ ರಾಷ್ಟ್ರಗೀತೆ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿದ್ದಾರೆ.

ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಈಗಾಗಲೇ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿರುವ ಮ್ಯೂಸಿಷಿಯನ್ ಕರ್ನಾಟಕದ ಹೆಮ್ಮೆ. ಸ್ವಾತಂತ್ರ್ಯ ದಿನಾಚರಣೆ ಈ ಸಂಭ್ರಮದಲ್ಲಿ ರಿಕ್ಕಿ ಕೇಜ್ "ಜನ ಗಣ ಮನ"ಕ್ಕೆ ಹೊಸ ಟ್ಯೂನ್ ಕೊಟ್ಟಿದ್ದಾರೆ. ಇಂದು (ಆಗಸ್ಟ್ 14) ರಿಕ್ಕಿ ಕೇಜ್ ಟ್ಯೂನ್ ಹಾಕಿದ ರಾಷ್ಟ್ರಗೀತೆ ರಿಲೀಸ್ ಆಗಿದೆ.

Independence Day-Ricky Kej-National Anthem

ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಲಂಡನ್‌ನ ಅಬೇ ರೋಡ್ ಸ್ಟುಡಿಯೋದಲ್ಲಿ ರಾಷ್ಟ್ರಗೀತೆಗೆ ಹೊಸ ಟಚ್ ಕೊಟ್ಟಿದ್ದಾರೆ. ರಿಕ್ಕಿ ಕೇಜ್ ಅವರ ಈ ಹೊಸ ಪ್ರಯತ್ನಕ್ಕೆ 100 ಮಂದಿ ಸಂಗೀತಕಾರರು ಜೊತೆಯಾಗಿದ್ದರು. ಸುಮಾರು 3 ಗಂಟೆಗಳ ಒಳಗೆ "ಜನ ಗಣ ಮನ" ರಾಷ್ಟ್ರಗೀತೆಯನ್ನು ಕಂಪೋಸ್ ಮಾಡಿರುವುದು ಮತ್ತೊಂದು ವಿಶೇಷ.

ಲಂಡನ್‌ನ ಜನಪ್ರಿಯ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದೊಂದಿಗೆ ರಾಷ್ಟ್ರಗ್ರೀತೆ ಹೊಸ ಟನ್ ನೀಡಲಾಗಿದೆ. ಇದೇ ವೇಳೆ ರಿಕ್ಕಿ ಕೇಜ್ ತಮ್ಮ ಟ್ವಿಟರ್ ಖಾತೆಯಲ್ಲಿ ರಾಷ್ಟ್ರಗೀತೆಯ ಹೊಸ ರೂಪದ ಬಗ್ಗೆ ಬರೆದುಕೊಂಡಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಗೂ ಟ್ಯಾಗ್ ಮಾಡಿದ್ದಾರೆ.

Independence Day-Ricky Kej-National Anthem

"ಕೆಲವು ದಿನಗಳ ಹಿಂದೆ. ನಾನು 100 ಜನರಿಂದ ಬ್ರಿಟಿಷ್ ಆರ್ಕೆಸ್ಟ್ರಾವನ್ನು ಆಯೋಜಿಸಿದ್ದೆ. ಲಂಡನ್‌ನ ಸುಪ್ರಸಿದ್ಧ ಅಬೇ ರೋಡ್ ಸ್ಟುಡಿಯೋದಲ್ಲಿ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಭಾರತದ ರಾಷ್ಟ್ರಗ್ರೀತೆಯನ್ನು ಪ್ರದರ್ಶಿಸಿತು. ಭಾರತದ ರಾಷ್ಟ್ರಗೀತೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಆರ್ಕೆಸ್ಟ್ರಾ ಆಯೋಜನೆ ಮಾಡಿರಲಿಲ್ಲ. ಇದೊಂದು ಅದ್ಭುತ. ಕೊನೆಯಲ್ಲಿ "ಜಯ ಹೇ" ಎಂದಿದ್ದು ಮೈನವಿರೇಳಿಸಿತ್ತು. ಒಬ್ಬ ಭಾರತೀಯ ಕಂಪೋಸರ್ ಆಗಿ ನನಗೆ ಹೆಮ್ಮೆ ಎನಿಸಿತ್ತು. ಈ ಸ್ವಾತಂತ್ರ್ಯ ದಿನಾಚರಣೆಗೆ ಈ ಐತಿಹಾಸಿಕ ರೆಕಾರ್ಡಿಂಗ್ ಅನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಂಡಿದ್ದೇನೆ. ಗೌರವದೊಂದಿಗೆ ಬಳಸಿ, ಹಂಚಿಕೊಳ್ಳಿ, ನೋಡಿ. ಈಗ ಇದು ನಿಮ್ಮದು. ಜೈ ಹಿಂದ್" ಎಂದು "ಜನ ಗಣ ಮನ"ವನ್ನು ಶೇರ್ ಮಾಡಿ ರಿಕ್ಕಿ ಕೇಜ್ ಬರೆದುಕೊಂಡಿದ್ದಾರೆ.

"ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಾವು ಹೊಸ ಭಾರತದಲ್ಲಿದ್ದೇವೆ. ನಾವೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹವಮಾನ ವೈಪರೀತ್ಯ ಹಾಗೂ ಜಾಗತಿಕ ಅರ್ಥ ವ್ಯವಸ್ಥೆ ಅಂತಹದ್ರಲ್ಲಿ ಭಾಗಿಯಾಗುತ್ತಿದ್ದೇವೆ. ಈ ರಾಷ್ಟ್ರಗೀತೆ ಹೊಸ ಭಾರತವನ್ನು ಪ್ರತಿನಿಧಿಸುತ್ತದೆ" ಎಂದು ರಿಕ್ಕಿ ಕೇಜ್ ಎಎನ್‌ಐಗೆ ಹೇಳಿದ್ದಾರೆ.

ರಿಕ್ಕಿ ಕೇಜ್ ಪ್ರಯತ್ನಕ್ಕೆ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಮ್ಮ ರಾಷ್ಟ್ರಗೀತೆ ಸಾಹಿತಿಕವಾಗಿ ಅಷ್ಟೇ ಅಲ್ಲ. ಮ್ಯೂಸಿಕಲ್ ಆಗಿ ಕೂಡ ಅದ್ಭುತವಾಗಿದೆ." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಅಸಾಧಾರಣ ಹಾಗೂ ಪ್ರೇರಣೆಯಿಂದ ಕೂಡಿದೆ ಅಭಿನಂದನೆಗಳು" ಎಂದು ಹೇಳಿದ್ದಾರೆ. " ಆರಂಭದಿಂದ .. ಮಧ್ಯ ಭಾಗದವರೆಗೂ ಅದ್ಭುತ.. ಹೃತ್ಪೂರ್ವಕ ಅಭಿನಂದನೆಗಳು" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. "ರಿಕಿ ಅವರೇ ತುಂಬ ಚೆನ್ನಾಗಿದೆ. ಸಂತೋಷ ಆಯ್ತು. ನಿಮಗೆ ಸದಾ ಯಶಸ್ಸು ಸಿಗುತ್ತಿರಲಿ.. ವಂದೇ ಮಾತರಂ" ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

More from Filmibeat

English summary
Grammy Award winner Ricky Kej's new tune to the Indian National Anthem is out now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X