"ಮುಟ್ಟದೆಯೇ ಮುದ್ದಾಡದೇ" ಹಾಡು ಮಾಡಿಕೊಡಿ ಅಂದ್ರು ರವಿಚಂದ್ರನ್; ಹಂಸಲೇಖ ಹಾಕಿದ ಟ್ಯೂನ್ ಯಾವುದು?

ರವಿಚಂದ್ರನ್ ಹಾಗೂ ಹಂಸಲೇಖ ಸೇರಿ ಮಾಡಿದ ಪ್ರಯೋಗಗಳು ಒಂದೆರಡಲ್ಲ. ಇವರಿಬ್ಬರ ಒಟ್ಟಿಗೆ ಸೇರಿದರೆ ಸಂಗೀತ ಪ್ರಿಯರಿಗೆ ಹಬ್ಬವೋ ಹಬ್ಬ. ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬ. ರವಿಚಂದ್ರನ್ ಕೇಜಿ ಐಡಿಯಾಗಳು, ಹಂಸಲೇಖ ಕೇಜಿ ಟ್ಯೂನ್‌ಗಳು ಎರಡೂ ಸೇರಿ ಸಿನಿಮಾ ಮಂದಿಯನ್ನು ರಂಜಿಸಿ ಬಿಡುತ್ತಿದ್ದವು. ಅದಕ್ಕೆ ಇಂದಿಗೂ ಇವರಿಬ್ಬರದ್ದೂ ಎವರ್‌ಗ್ರೀನ್ ಜೋಡಿ ಎಂದು ಹೇಳಬಹುದು.

ಹಂಸಲೇಖ ಹಾಗೂ ರವಿಚಂದ್ರನ್ ಕಾಂಬಿನೇಷನ್‌ನಲ್ಲಿ ಬಂದ ರೊಮ್ಯಾಂಟಿಕ್ ಹಾಡುಗಳಿಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಕ್ರೇಜಿ ಸ್ಟಾರ್ ಆ ರೊಮ್ಯಾಂಟಿಕ್ ಹಾಡುಗಳನ್ನು ಚಿತ್ರೀಕರಿಸುವ ಸ್ಟೈಲ್ ಇನ್ನೂ ಯಾರಿಗೂ ಒಲಿದು ಬಂದಿಲ್ಲ. ಕ್ರೇಜಿ ಸ್ಟಾರ್ ನಾಯಕಿಯೊಂದಿಗೆ ಲೀಲಾಜಾಲವಾಗಿ ರೊಮ್ಯಾಂಟಿಕ್ ಸಾಂಗ್‌ಗಳಲ್ಲಿ ಮುದ್ದಾಡುತ್ತಿದ್ದರೆ, ಇತ್ತ ಯುವಕ ಎದೆ ಬಡಿತ ಹೆಚ್ಚಾಗುತ್ತಿತ್ತು. ಇಂತಹ ಹಾಡುಗಳು ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಾಕಷ್ಟು ಬಂದಿವೆ.

Hamsalekha revealed how Ravichandran Chinna movie song Nannavalu Nannavalu born

ಆದರೆ, ಒಮ್ಮೆ ರವಿಚಂದ್ರನ್ ನಾಯಕಿಯನ್ನು ಮುಟ್ಟದೇ.. ಮುದ್ದಾಡದೇ ಒಂದು ಹಾಡನ್ನು ಮಾಡಬೇಕು ಎಂದು ಹೇಳಿದ್ದರು. ಅದು ಕ್ರೇಜಿಸ್ಟಾರ್ ಸಿನಿಮಾಗಳಿಗೆ ವಿರುದ್ಧವಾಗಿತ್ತು. ಹಂಸಲೇಖ ಕೂಡ ರವಿಚಂದ್ರನ್ ಸಿನಿಮಾದಲ್ಲಿ ಇಂತಹದ್ದೊಂದು ಹಾಡು ಬರಬಹುದೆಂಬ ಚಿಕ್ಕ ಆಲೋಚನೆ ಮಾಡಿದವರಲ್ಲ. ದಿಢೀರನೇ ಕ್ರೇಜಿ ಸ್ಟಾರ್ ಇಂತಹದ್ದೊಂದು ಬೇಡಿಕೆ ಇಟ್ಟಿದ್ದರು. ಆಗ ಒಂದು ಹಾಡು ಹುಟ್ಟಿಕೊಂಡಿತ್ತು. ಆ ಹಾಡು ಯಾವುದು? ಹಂಸಲೇಖ ಏನಂತಹ ಬರೆದರು?

ಮುಂದೆ ಓದಿ

ಮುಟ್ಟದೆಯೇ.. ಮುದ್ದಾಡದೇ ಒಂದು ಹಾಡು ಮಾಡಿ ಎಂದಿದ್ದ ರವಿಚಂದ್ರನ್
ಸೆಟ್ಟಿನಲ್ಲಿ ಕ್ರೇಜಿ ಐಡಿಯಾ ನಾಯಕಿ ಸೆಟ್ಟಾಗದೆ ಹೋದ ಥೀಮ್ ಚೇಂಜ್
ನನ್ನವಳು.. ನನ್ನವಳು.. ಮುಟ್ಟದೆಯೇ ಮುದ್ದಾಡಲೇ ಎಂದು ಬರೆದ ಹಂಸಲೇಖ

ಹೌದು, "ನನ್ನವಳು.. ನನ್ನವಳು.. ಮುಟ್ಟಿದರೆ ನಲುಗುವಳು.. ಮುಟ್ಟದೆಯೇ ಮುದ್ದಾಡಲೇ.." ಈ ಹಾಡು ಕೇಳಿದರೆ, ಯಾವ ಸಿನಿಮಾ ಅನ್ನೋದು ಕಣ್ಮುಂದೆ ಬಂದು ಬಿಡುತ್ತೆ. ರವಿಚಂದ್ರನ್ ನಟಿಸಿ, ನಿರ್ದೇಶಿಸಿದ 'ಚಿನ್ನ' ಸಿನಿಮಾದ ಹಾಡು ಇದೆ. ಈ ಸಿನಿಮಾದಲ್ಲಿ ಕ್ರೇಜಿ ಸ್ಟಾರ್‌ಗೆ ಯಮುನಾ ನಾಯಕಿಯಾಗಿ ನಟಿಸಿದ್ದರು. ಹಂಸಲೇಖ ಸಂಗೀತ ಸಂಯೋಜಿಸುತ್ತಿದ್ದರು. ಈ ವೇಳೆ ಒಮ್ಮೆ ರವಿಚಂದ್ರನ್ ಬಂದು ಮುಟ್ಟದೆಯೇ ಮುದ್ದಾಡದೇ ಒಂದು ರೊಮ್ಯಾಂಟಿಕ್ ಸಾಂಗ್ ಬೇಕು ಎಂದಿದ್ದರಂತೆ. ಅದ್ಯಾಕೆ ಈ ರೀತಿಯ ಹಾಡು ಕೇಳಿದ್ದರು? ಹಂಸಲೇಖ ಹೇಗೆ ಟ್ಯೂನ್ ಹಾಕದಿರು? ಅನ್ನೋದೇ ಇಂಟ್ರೆಸ್ಟಿಂಗ್. ಈ ಸಂಗತಿಯನ್ನು ಗೌರೀಶ್ ಅಕ್ಕಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

Hamsalekha revealed how Ravichandran Chinna movie song Nannavalu Nannavalu born

ಐಡಿಯಾ ಕೊಟ್ಟಿದೇ ರವಿಚಂದ್ರನ್

"ಮುಟ್ಟದೆಯೇ ಮುದ್ದಾಡದೇ ಈ ಐಡಿಯಾವನ್ನು ಕೊಟ್ಟಿದ್ದೇ ರವಿಚಂದ್ರನ್. ಅವರು ಏನು ಮಾಡುತ್ತಾರೆ. ಅವರ ಸಿನಿಮಾ ಶುರುವಾದಾಗ ಯಾರಾದರೂ ಸುಂದರಿಯನ್ನು ಎಂಗೇಜ್ ಮಾಡುತ್ತಾರೆ. ಆ ಯಮ್ಮ ಫ್ಲೈಟ್ ಇಳಿದು ರೂಮಿಗೆ ತಲುಪುವುದರೊಳಗೆ ಅವರು ಅದೂವರೆಗೂ ಯಾವ್ಯಾವ ಸಿನಿಮಾ ಮಾಡಿದ್ದಾರೆ, ಅದರ ಎಲ್ಲಾ ಮಾಹಿತಿಗಳನ್ನು ಅವರು ತಲುಪಿಸಿರುತ್ತಾರೆ. ತಾನು ಯಾವ ರೀತಿ ಸಿನಿಮಾ ಮಾಡುತ್ತೇನೆ ಎಂಬುವುದನ್ನು ಅರ್ಥ ಮಾಡಿಸಿರುತ್ತಾರೆ. ರೂಮಿಗೆ ತಲುಪಿ ಸೆಟಲ್ ಆಗುವ ಹೊತ್ತಿಗೆ ಎರಡು ಸಿನಿಮಾ ತೋರಿಸುತ್ತಾರೆ." ಎಂದಿದ್ದಾರೆ ಹಂಸಲೇಖ.

ಅಂಡರ್‌ಸ್ಟ್ಯಾಂಡಿಂಗ್‌ಗೆ ಬರಲಿಲ್ಲ ಅಂದ್ರೆ..

" ಹೀರೋಯಿನ್‌ಗೆ ಹೀಗೆಲ್ಲ ಸಿನಿಮಾ ಮಾಡುತ್ತೇನೆ ಎಂದು ಹೇಳುತ್ತಾರೆ. ಅವರು ಸೆಟ್ಟಿಗರ ಬರುವಷ್ಟರಲ್ಲಿ ರೆಡಿಯಾಗಿ ಬಿಡುತ್ತಾರೆ. ರವಿಚಂದ್ರನ್ ಬಗ್ಗೆ ನಾಯಕಿಯರ ಸಹಾಯಕ ಎಲ್ಲಾ ಹೇಳಿರುತ್ತಾರೆ. ಆಗ ಅವರು ರೆಡಿಯಾಗಿ ಸೆಟ್ಟಿಗೆ ಬರಬೇಕು. ಸೆಟ್ಟಿಗೆ ಬಂದು ಅಂಡರ್‌ಸ್ಟ್ಯಾಂಡಿಂಗ್‌ಗೆ ಬರಲಿಲ್ಲ ಅಂದರೆ, ಥೀಮ್ಸ್ ಎಲ್ಲಾ ಚೇಂಜ್ ಮಾಡುತ್ತಾರೆ. ಹಾಗೇ ನನಗೆ ಬಂದು ಕೇಳಿದರು. ರಾಜು ಒಂದು ಹಾಡು ಮಾಡೋಣ. ನಾನು ಹುಡುಗಿಯನ್ನು ಟಚ್ ಮಾಡುವುದಿಲ್ಲ. ಇಡೀ ಹಾಡನ್ನು ನಾನು ಅವಳ ಬಗ್ಗೆ ಹಾಡಬೇಕು. ಅಂತಹದ್ದೊಂದು ಹಾಡು ಮಾಡು. ಸರ್ ಮುಟ್ಟದೆ ಹೇಗೆ ಹಾಡು ಮಾಡೋದು? ಅಂದೆ. ಏನಾದರೂ ಒಂದು ಮಾಡಿಕೊಡಿ ಅಂದರು." ಎಂದು ಹಂಸಲೇಖ ಹೇಳಿದ್ದಾರೆ.

ಎಸ್‌ಪಿಬಿ ಮೆಚ್ಚಿದ ಹಾಡಿದು

"ಅದು ನನ್ನ ಬ್ರೈನ್‌ಗೆ ಹೊಸದು. ಆಗ ನನ್ನವಳು ನನ್ನವಳು.. ಮುಟ್ಟದೆಯೇ ಮುದ್ದಾಡಲೇ ಅಂತ ಬರೆದೆ. ಆಗ ಹೊಸ ಐಡಿಯಾ ಬಂದು ಬಿಡ್ತು. ಆಮೇಲೆ ಚರಣಕ್ಕೆ ಹೋದರೆ, ಅದ್ಭುತವಾದ ಸಾಲುಗಳು ಬಂದವು. ತಂಗಾಳಿಯೇ ಅಂತೆಲ್ಲ ಬರೆದು, ಅದಕ್ಕೊಂದು ಹಮ್ಮಿಂಗ್ ಹಾಕಿದ್ವಿ. ಎಲ್ಲಯ್ಯ ನಿನಗೆ ಇಂತಹ ಐಡಿಯಾಗಳು ಬರುತ್ತವೆ. ಬಾಲು ಸರ್ ಹಾಡುವಾಗ ಕೇಳಿದರು. ಆಗ ನಾನು ಇದು ನನ್ನ ಐಡಿಯಾ ಅಲ್ಲ. ನಮ್ಮ ಯಜಮಾನರದ್ದು" ಎಂದು ಹೇಳಿದ್ದಾಗಿ ಹಂಸಲೇಖ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಈ ಕ್ರೆಡಿಟ್ ರವಿಚಂದ್ರನ್‌ಗೆ ಹೋಗ್ಬೇಕು

"ಎಸ್‌ಪಿಬಿ ಅವರು ಇದನ್ನು ತೆಲುಗಿನಲ್ಲಿ ಬಳಸಬಹುದಾ? ಅಂತ ಹೇಳಿದರು. ಧಾರಾಳವಾಗಿ ಬಳಸಿಕೊಳ್ಳಿ ಅಂದರೆ. ಹಾಗೇ ಇಂತಹ ಐಡಿಯಾಗಳು ರವಿಚಂದ್ರನ್‌ಗೆ ಬರುತ್ತಲೇ ಇರುತ್ತವೆ. ಈ ಕ್ರೆಡಿಟ್ ರವಿಚಂದ್ರನ್‌ಗೆ ಹೋಗಬೇಕು. ರವಿಚಂದ್ರನ್ ಅವರಿಗೆ ಹೇಳಿಬಿಡಿ." ಎಂದು ಹಂಸಲೇಖ ಈ ಹಾಡಿನ ಕ್ರೆಡಿಟ್ ಅನ್ನು ಕ್ರೇಜಿಸ್ಟಾರ್‌ಗೆ ಕೊಟ್ಟಿದ್ದಾರೆ.

More from Filmibeat

English summary
Hamsalekha revealed how Ravichandran Chinna movie song Nannavalu Nannavalu born;
Read more about: hamsalekha ravichandran songs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X