Raju Panjabi: ಕೊನೆಯ ಹಾಡು ರಿಲೀಸ್ ಮಾಡಿದ 10 ದಿನಗಳಲ್ಲೇ 40 ವರ್ಷದ ಗಾಯಕ ನಿಧನ.. ಕಂಬನಿ ಮಿಡಿದ ಗಣ್ಯರು!

ಹರಿಯಾಣ್ವಿ ಭಾಷೆಯ ಜನಪ್ರಿಯ ಗಾಯಕ ರಾಜು ಪಂಜಾಬಿ ಇಂದು (ಆಗಸ್ಟ್ 22) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಹಿನ್ನೆಲೆ ಗಾಯಕನ್ನು ಹರಿಯಾಣದ ಹಿಸಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕಳೆದ ಕೆಲವು ದಿನಗಳಿಂದ ಗಾಯಕ ರಾಜು ಪಂಜಾಬಿ ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಕೆ ಕಂಡಿದ್ದರು. ಆದರೆ, ಮತ್ತೆ ಆರೋಗ್ಯದಲ್ಲಿ ಏರು-ಪೇರು ಆಗಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ತೀರ ಹದಗೆಟ್ಟಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

haryanvi-singer-raju-punjabi-passed-away

ರಾಜು ಪಂಜಾಬಿ ಆಸ್ಪತ್ರೆ ದಾಖಲಾಗುವುದಕ್ಕೂ ಮುನ್ನ ಆಗಸ್ಟ್ 12 ರಂದು "ಆಪ್ಸೆ ಮಿಲ್ಕೆ ಯಾರಾ ಹಮ್ಕೋ ಅಚ್ಚ ಲಗಾ ಥಾ" ಅನ್ನೋ ಹಾಡನ್ನು ರಿಲೀಸ್ ಮಾಡಿದ್ದರು. ಹರಿಯಾಣ್ಣಿ ಹಾಡುಗಳ ಮೂಲಕ ಅಭಿಮಾನಿಗಳನ್ನು ಹೊಂದಿದ್ದ 40 ವರ್ಷದ ಗಾಯಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಗಾಯಕ ರಾಜು ಪಂಜಾಬಿ ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಂತಾಪ ಸೂಚಿಸಿದ್ದಾರೆ. "ರಾಜು ಪಂಜಾಬಿ ಸಾವು ಹರಿಯಾಣದ ಸಂಗೀತ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ. " ಎಂದು ಟ್ವೀಟ್ ಮಾಡಿದ್ದಾರೆ.

ರಾಜು ಪಂಜಾಬಿ ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗುತ್ತೆ. ರಾಜಸ್ಥಾನದ ರಾವತ್ಸರ್ ಖೇಡಾದಲ್ಲಿ ಅಂತ್ಯಕ್ರಿಯೆ ನಡೆದಿದೆ ಎಂದು ಸುದ್ದಿಯಾಗಿದೆ. ರಾಜು ಪಂಜಾಬಿ ಹಿಸಾರ್ ನಗರದ ಅಜಾದ್ ನಗರದಲ್ಲಿ ವಾಸವಿದ್ದರು. ಗಾಯಕ ಸಾವಿನ ಸುದ್ದಿಯನ್ನು ಹೇಳುತ್ತಿದ್ದಂತೆ ಕುಟುಂಬದ ಸದಸ್ಯರು ಹಾಗೂ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಹಿಸಾರ್‌ನಲ್ಲಿ ಸೇರಿದ್ದರು.

ಹರಿಯಾಣ್ವಿ ಸಾಂಗ್ "ದೇಸಿ ದೇಸಿ ನಾ ಬೋಲ್ಯಾ ಕರ್ ಚೋರಿ ರೇ" ಎಂಬ ಹಾಡಿನ ಮೂಲಕ ರಾಜು ಪಂಜಾಬಿ ಜನಪ್ರಿಯರಾಗಿದ್ದರು. ಇಲ್ಲಿಂದ "ತು ಚೇಜ್ ಲಾ ಜವಾಬ್", "ಲಾಸ್ಟ್ ಪೆಗ್", "ಬಾಂಗ್ ಮೇ ಯಾರಾ ನೇ", " ಹರಿಯಾಣ್ವಿಯಲ್ಲಿಯೇ ಹಲವು ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ.

More from Filmibeat

English summary
Haryanvi singer Raju Punjabi passed away:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X