₹200 ಕೋಟಿ ಬಾಚಿದ 'ಮಂಜುಮ್ಮೆಲ್ ಬಾಯ್ಸ್‌'ಗೆ ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ

ಮಲಯಾಳಂ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ 'ಮಂಜುಮ್ಮೆಲ್ ಬಾಯ್ಸ್'. ಈ ವರ್ಷ ತೆರೆಕಂಡ ಸಿನಿಮಾಗಳಲ್ಲಿ 'ಮಂಜುಮ್ಮೆಲ್ ಬಾಯ್ಸ್' ಅತೀ ಹೆಚ್ಚು ಗಳಿಕೆ ಕಂಡಿ ಸಿನಿಮಾಗಳಲ್ಲಿ ಒಂದಾಗಿದೆ. ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಕಲೆ ಹಾಕಿ ದೇಶದ ಗಮನವನ್ನು ಸೆಳೆದಿತ್ತು.

'ಮಂಜುಮ್ಮೆಲ್ ಬಾಯ್ಸ್' ಸಿನಿಮಾದಲ್ಲಿ ಬಳಿಸಿದ "ಕಣ್ಮಣಿ" ಹಾಡು ದಿಡೀರನೇ ಟ್ರೆಂಡ್ ಆಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಈ ಮತ್ತೆ ಹರಿದಾಡುವುದಕ್ಕೆ ಶುರುವಾಗಿತ್ತು. ಜನರು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಕ್ಕೆ ಶುರು ಮಾಡಿದ್ದರು. ಇಂದಿಗೂ ಈ ಕಣ್ಮಣಿ ಹಾಡು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.

Ilaiyaraaja sends legal notice to Manjummel Boys producers over copyright infringement

ಮಲಯಾಳಂ ಸಿನಿಮಾ 'ಮಂಜುಮ್ಮೆಲ್ ಬಾಯ್ಸ್'ನಲ್ಲಿ ಬಳಸಿದ "ಕಣ್ಮಣಿ.." ಹಾಡನ್ನು ಸಂಗೀತ ಮಾಂತ್ರಿಕ ಇಳಯರಾಜ ಕಂಪೋಸ್ ಮಾಡಿದ್ದರು. ಕಮಲ್ ಹಾಸನ್ ನಟಿಸಿದ 'ಗುಣ' ಸಿನಿಮಾಗಾಗಿ ಇಳಯರಾಜ ಟ್ಯೂನ್ ಹಾಕಿದ್ದರು. ಆ ಹಾಡನ್ನು 'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ತಂಡ ಬಳಸಿಕೊಂಡಿತ್ತು. ಈ ಕಾರಣಕ್ಕೆ ಇಳಯರಾಜ ತಮ್ಮ ಅನುಮತಿ ಇಲ್ಲದೇ ಈ ಹಾಡನ್ನು ಬಳಸಿಕೊಂಡಿದ್ದಾರೆಂದು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

'ಗುಣ' ಸಿನಿಮಾಗಾಗಿ ಕಂಪೋಸ್ ಮಾಡಿದ್ದ "ಕಣ್ಮಣಿ.." ಹಾಡನ್ನು 'ಮಂಜುಮ್ಮೆಲ್ ಬಾಯ್ಸ್' ಸಿನಿಮಾ ನಿರ್ಮಾಪಕರು ಅನುಮತಿ ಪಡೆಯದೆ ಬಳಸಿಕೊಂಡಿದ್ದಾರೆಂದು ಆರೋಪ ಮಾಡಲಾಗಿದೆ. ನಿರ್ಮಾಪಕರು ತನ್ನೊಂದಿಗೆ ಸರಿಯಾದ ರೀತಿಯಲ್ಲಿ ಅನುಮತಿಯನ್ನು ಪಡೆಯಬೇಕು. ಇಲ್ಲದೇ ಹೋದಲ್ಲಿ ಸಿನಿಮಾದಿಂದ ಆ ಹಾಡನ್ನು ತೆಗೆದು ಹಾಕಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

1990ರಲ್ಲಿ ಕಮಲ್ ಹಾಸನ್ ನಟಿಸಿದ 'ಗುಣ' ಸಿನಿಮಾಗಾಗಿ ಇಳಯರಾಜ "ಕಣ್ಮಣಿ ಅನ್ಬೋಡು" ಹಾಡನ್ನು ಕಂಪೋಸ್ ಮಾಡಿದ್ದರು. ಸಿನಿಮಾದ ಪ್ರಮುಖ ಘಟ್ಟದಲ್ಲಿ ಈ ಹಾಡನ್ನು ಇಡಲಾಗಿದೆ. ಈ ಹಾಡನ್ನು ತಮಿಳುನಾಡಿ ಕೊಡೈಕೆನಾಲ್‌ನಲ್ಲಿ ಗುಹೆಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅಲ್ಲಿಂದ ಈ ಗುಹೆಯನ್ನು 'ಗುಣ ಕೇವ್' ಎಂದೇ ಕರೆಯಲಾಗುತ್ತಿದೆ.

Ilaiyaraaja sends legal notice to Manjummel Boys producers over copyright infringement

'ಮಂಜುಮ್ಮೆಲ್ ಬಾಯ್ಸ್' ಸಿನಿಮಾದ ಕಥೆಯಲ್ಲಿ ಇದೇ 'ಗುಣ' ಸಿನಿಮಾದ ಹಾಡು ಪ್ರಮುಖ ಪಾತ್ರವಹಿಸಿದೆ. ಸಿನಿಮಾದ ಆರಂಭದಿಂದಲೂ 'ಗುಣ' ಚಿತ್ರದ ಕಣ್ಮಣಿ ಸಾಂಗ್ ಕೇಳುವುದಕ್ಕೆ ಸಿಗುತ್ತೆ. ಅಸಲಿಗೆ ಈ ಕೇವ್ ನೋಡುವುದಕ್ಕೆಂದು ಬರುವ ಹುಡುಗರ ಕಥೆಯನ್ನು ನಿರ್ದೇಶಕ ಚಿದಂಬರಂ ಹೇಳಿದ್ದರು. 'ಮಂಜುಮ್ಮೆಲ್ ಬಾಯ್ಸ್' ಬ್ಲಾಕ್ ಬಸ್ಟರ್ ಸಿನಿಮಾ ಆಗುವುದರಲ್ಲಿ ಕಣ್ಮಣಿ ಹಾಡಿನ ಪಾತ್ರವೂ ದೊಡ್ಡದಿದೆ.

ಈಗ ಇಳಯರಾಜ ಅವರ ಲೀಗಲ್ ಟೀಮ್ 'ಮಂಜುಮ್ಮೆಲ್ ಬಾಯ್ಸ್'ನಲ್ಲಿ ತಮ್ಮ ಹಾಡನ್ನು ತೆಗೆದು ಹಾಕಬೇಕು. ಇಲ್ಲವೇ ಸರಿಯಾದ ರೀತಿಯಲ್ಲಿ ಅನುಮತಿ ಪಡೆದು ಹಾಡನ್ನು ಬಳಸಿಕೊಳ್ಳಬೇಕು ಎಂದು ಚಿತ್ರದ ನಿರ್ಮಾಪಕರಿಗೆ ನೋಟಿಸ್ ಅನ್ನು ಕಳುಹಿಸಲಾಗಿದೆ. 'ಮಂಜುಮ್ಮೆಲ್ ಬಾಯ್ಸ್' ಸಿನಿಮಾದ ನಿರ್ಮಾಪಕರಾದ ಸೌಬಿನ್ ಶಾಹಿರ್, ಬಾಬು ಶಾಹಿರ್ ಹಾಗೂ ಶಾನ್ ಆಂಟೋನಿಗೆ ನೋಟಿಸ್ ಕಳುಹಿಸಲಾಗಿದೆ. ಈ ನೋಟಿಸ್‌ಗೆ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದು ನೋಡಬೇಕಿದೆ.

More from Filmibeat

English summary
Ilaiyaraaja Takes Legal Action Against 'Manjummel Boys' Producers for Copyright Breach
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X