ಹಿಂದಿ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸಂಚಲನ ಸೃಷ್ಟಿಸಿದ ಸಾಗರದ ಈ ಪುಟಾಣಿ ಪ್ರತಿಭೆ ಯಾರು ಗೊತ್ತೇ?
ಸಂಗೀತ ಬಗ್ಗೆ ಆಸಕ್ತಿ ಇರುವವರಿಗೆ ಈ ಪುಟಾಣಿ ಪರಿಚಯ ಇರಬಹುದು. ಅದರಲ್ಲೂ ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಇಷ್ಟ ಪಡುವವರಿಗೆ ಈ ಗಾಯಕಿ ದಿಯಾ ಹೆಗ್ಡೆ ಗೊತ್ತಿದ್ದೇ ಇರುತ್ತಾರೆ. ತಮ್ಮ ಮಧುರ ಕಂಠದಿಂದ ಕನ್ನಡಿಗರನ್ನು ರಂಜಿಸಿದ್ದಈ ಪ್ರತಿಭೆ ಈಗ ಹಿಂದಿ ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಗಮನ ಸೆಳೆಯುತ್ತಿದ್ದಾರೆ.
ಜೀ ಕನ್ನಡ ಸರಿಗಮಪ ಶೋನಲ್ಲಿ ದಿಯಾ ಹೆಗ್ಡೆ ಭಾಗವಹಿಸಿದ್ದರು. ಇವರು ಕಂಠಸಿರಿಗೆ ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದರು. ಜೀ ಕನ್ನಡದ ಸರಿಗಮಪ ಶೋನಲ್ಲಿ ಸ್ಪೆಷಲ್ ಎಂಟರ್‌ಟೈನರ್ ಪ್ರಶಸ್ತಿ ಪಡೆದಿರೋ ಈ ಪೋರಿ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಹಿಂದಿ ಭಾಷಿಗರನ್ನೂ ತನ್ನ ಕ್ಯೂಟ್‌ನೆಸ್‌ನಿಂದ, ಹಾಡಿನಿಂದ ಸೆಳೆದು ಬಿಟ್ಟಿದ್ದಾರೆ.

ಹೌದು, ಕನ್ನಡದ ಹುಡುಗಿ ಭಾರತದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಇಂಡಿಯನ್ ಐಡಲ್ ಶೋನ ಫಿನಾಲೆಯಲ್ಲಿ ಭಾಗವಹಿಸಿದ್ದರು. ದಿಯಾ ಹೆಗ್ಡೆ ಹಾಡನ್ನು ಕೇಳಿ ಜಡ್ಜ್‌ಗಳೇ ಫಿದಾ ಆಗಿದ್ದರು. ದಿಯಾ ಹಾಡಿಗೆ, ಸ್ಮೈಲ್‌ಗೆ ಥ್ರಿಲ್ ಆಗಿದ್ದರು. ಈಗ ಸೋನಿಯಲ್ಲಿಯೇ ಪ್ರಸಾರ ಆಗುತ್ತಿರುವ ಸೂಪರ್‌ಸ್ಟಾರ್ ಸಿಂಗರ್ 3ನಲ್ಲಿ ಹಾಡುತ್ತಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತನ್ನ ಕಂಠದಿಂದ ಸೆನ್ಸೇಷಲ್ ಸೃಷ್ಟಿಸಿರುವ ದಿಯಾ ಹೆಗ್ಡೆ ಮೂಲತ: ಶಿವಮೊಗ್ಗ ಜಿಲ್ಲೆಯ ಸಾಗರದವರು. ಇಲ್ಲಿನ ಪುಟ್ಟ ಗ್ರಾಮ ಬಂದಗದ್ದೆಯ ವೆಂಕಟೇಶ್ ಹೆಗ್ಡೆ, ಅಪರ್ಣಾ ದಂಪತಿಯ ಪುತ್ರಿ. ಪುಟ್ಟ ಗ್ರಾಮದ ಈ ಪುಟ್ಟ ಪೋರಿಯ ಪ್ರತಿಭೆ ಮಾತ್ರ ಅಗಾಧ. ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ.
ದಿಯಾ ಹೆಗ್ಡೆ ಇತ್ತೀಚೆಗೆ ನಡೆದ ಸೋನಿಯ ಜನಪ್ರಿಯ ಶೋ ಇಂಡಿಯನ್ ಐಡಲ್ ಫಿನಾಲೆಯಲ್ಲಿ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿ ದಿಯಾ ಹೆಗ್ಡೆ ಹಾಡಿದ ಹಾಡು ಸಂಗೀತ ಲೋಕದ ದಿಗ್ಗಜರ ಗಮನ ಸೆಳೆದಿತ್ತು. ದಿಯಾ ಕಂಠಕ್ಕೆ, ನಗುವಿಗೆ ಮರುಳಾಗಿದ್ದರು. ಆ ಬಳಿಕ 'ಸೂಪರ್‌ಸ್ಟಾರ್ ಸಿಂಗರ್' ಸೀಸನ್ 3ನಲ್ಲಿ ಭಾಗವಹಿಸುತ್ತಿದ್ದಾರೆ.
ಇದೇ ತಿಂಗಳು ಮಾರ್ಚ್ 9ರಿಂದ 'ಸೂಪರ್‌ಸ್ಟಾರ್ ಸಿಂಗರ್' ಸೀಸನ್ 3 ಆರಂಭ ಆಗಿದೆ. ಪ್ರತಿ ವೀಕೆಂಡ್‌ಗೆ ಈ ಕಾರ್ಯಕ್ರಮ ಸೋನಿ ಎಂಟರ್‌ಟೈನ್ಮೆಂಟ್‌ನಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ಪ್ರತಿ ವೀಕೆಂಡ್‌ನಲ್ಲಿ ಪುಟಾಣಿಗಳ ಸಂಗೀತ ಕಾರ್ಯಕ್ರಮ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿದೆ. ಈಗಾಗಲೇ ದಿಯಾ ಹೆಗ್ಡೆಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ದಿಯಾ ಹೆಗ್ಡೆ ಕಂಠಕ್ಕಷ್ಟೇ ಅಭಿಮಾನಿಗಳಿಲ್ಲ. ಈಕೆ ಹೆಜ್ಜೆ ಹಾಕುವುದರಲ್ಲೂ ಎಕ್ಸ್‌ಪರ್ಟ್. ತನ್ನದೇ ಇನ್‌ಸ್ಟಾಗ್ರಾಂನಲ್ಲಿ ದಿಯಾ ಹೆಗ್ಡೆ ಡ್ಯಾನ್ಸ್ ಮಾಡಿದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಆ ವಿಡಿಯೋಗಳಿಗೂ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ದಿಯಾ 'ಸೂಪರ್‌ಸ್ಟಾರ್ ಸಿಂಗರ್' ಸೀಸನ್ 3 ಗೆಲ್ಲಬೇಕು ಅಂತ ಜನರು ಬಯಸುತ್ತಿದ್ದಾರೆ.


Click it and Unblock the Notifications











