For Quick Alerts
  ALLOW NOTIFICATIONS  
  For Daily Alerts

  'ನಿನ್ನಲ್ಲಿಯೆ ಖುಷಿಯಿದೆ, ಇನ್ನೇತಕೆ ನೀ ಹುಡುಕುವೆ' ಎನ್ನುತ್ತಿದ್ದಾರೆ ಇವರು

  |

  'ಖುಷಿ' ಎನ್ನುವುದು ಎಲ್ಲಿ, ಹೇಗೆ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಖುಷಿಯನ್ನು ಎಲ್ಲಿಯೂ ಹುಡುವ ಅವಶ್ಯಕತೆ ಇಲ್ಲ, ನಮ್ಮೊಳಗೆ ಇರುತ್ತೆ. ಖುಷಿಯ ಬಗ್ಗೆ ಯಾಕಿಷ್ಟು ಪೀಠಿಕೆ ಅಂತೀರಾ? ಯಾಕಂದ್ರೆ ಖುಷಿಯ ವಿಚಾರವಾಗಿ ಕನ್ನಡದಲ್ಲಿ ಒಂದು ಆಲ್ಬಂಬ್ ಸಾಂಗ್ ಮಾಡಿದ್ದಾರೆ ನಟಿ ಸಂಜನಾ ಪ್ರಕಾಶ್.

  ಬಾಲಿವುಡ್ ಗೆ ಹೋಲಿಕೆ ಮಾಡಿದ್ರೆ ಕನ್ನಡದಲ್ಲಿ ಆಲ್ಬಂ ಸಾಂಗ್ ಗಳ ಅಬ್ಬರ ಕಡಿಮೆ. ಪ್ರಚಾರವು ಕಡಿಮೆ. ಸಂಜನಾ ಪ್ರಕಾಶ್ ತಾವೆ ಮುಂದೆ ಬಂದು ಆಲ್ಬಂ ಸಾಂಗ್ ಮಾಡಿದ್ದಾರೆ. ಇಲ್ಲಿ ಸಂಜನಾ ಅಭಿನಯದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಅವರೆ ಹೊತ್ತುಕೊಂಡಿದ್ದಾರೆ.

  ನನ್ನ ಕೈಯಲ್ಲಿ ಆಗದೇ ಇರೋದೆಲ್ಲ ಮಾಡಿದ್ದೀನಿ..! | Bharaate | Yoo Yoo | FILMIBEAT KANNADA

  ಶ್ರೇಷ್ಟ ಗಾಯಕನ ಕೊನೆ 'ಜೀವಗಾನ' : ಎಲ್ ಎನ್ ಶಾಸ್ತ್ರಿ ಬದ್ಧತೆಗೆ ದೊಡ್ಡ ಶರಣು

  ಸ್ಟೀಫನ್ ಪ್ರತೀಕ್ ಸಂಗೀತ

  ಸ್ಟೀಫನ್ ಪ್ರತೀಕ್ ಸಂಗೀತ

  ಸಂಜನಾ ಶ್ರಮ ಮತ್ತು ಪ್ರಯತ್ನಕ್ಕೆ ಅವರ ಟೀಂ ಸಪೋರ್ಟ್ ಅಷ್ಟೆ ಇದೆ. "ನಿನ್ನಲ್ಲಿಯೆ ಆ ಖುಷಿಯೊಂದಿದಿಯೊ.. ಇನ್ನೇತಕೆ ನೀ ಹುಡುಕುವೆ" ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿಗೆ ಸ್ಟೀಫನ್ ಪ್ರತೀಕ್ ಸಂಗೀತ ಸಂಯೋಜನೆ ಮಾಡಿ ಧ್ವನಿ ಕೂಡ ನೀಡಿದ್ದಾರೆ. ಶ್ರೀಕಾಂತ್ ಆರ್ ಸಾಹಿತ್ಯ ಈ ಹಾಡಿಗಿದೆ. ಪ್ರೀತಮ್ ತಗ್ಗಿನ ಮನೆ ಕ್ಯಾಮರಾ ಕಣ್ಣಲ್ಲಿ ಈ ಹಾಡು ಸೆರೆಯಾಗಿದೆ.

  ಹಿಂದಿಯಲ್ಲೂ ರಿಲೀಸ್

  ಹಿಂದಿಯಲ್ಲೂ ರಿಲೀಸ್

  ಖುಷಿಯ ಬಗ್ಗೆ ಇರುವ ಈ ಹಾಡಿಗೆ ಖುಷಿಯಿಂದನೆ ಬಂಡವಾಳ ಹೂಡಿದ್ದಾರೆ ಶ್ರೀಕಾಂತ್ ಎನ್ ಕೆ. ಜೆ ಐ ಸ್ಟೂಡಿಯೋ ಬ್ಯಾನರ್ ನಲ್ಲಿ ಈ ಹಾಡು ಮೂಡಿ ಬಂದಿದೆ. ವಿಶೇಷ ಅಂದ್ರೆ ಕನ್ನಡ ಜೊತೆಗೆ ಈ ಹಾಡು ಹಿಂದಿಯಲ್ಲೂ ರಿಲೀಸ್ ಆಗಿದೆ. ಕನ್ನಡಕ್ಕಿಂತ ಹಿಂದೆ ವರ್ಷನ್ ತುಂಬಾ ಚೆನ್ನಾಗಿ ಸದ್ದು ಮಾಡುತ್ತಿದೆ ಎನ್ನುವುದು ಖುಷಿ ತಂಡದವರ ಮಾತು.

  ಬೆಂಗಳೂರು ಮತ್ತು ಮೂಲ್ಕಿಯಲ್ಲಿ ಚಿತ್ರೀಕರಣ

  ಬೆಂಗಳೂರು ಮತ್ತು ಮೂಲ್ಕಿಯಲ್ಲಿ ಚಿತ್ರೀಕರಣ

  ಸಂಜನಾ ಅಭಿನಯದ ಜೊತೆಗೆ ನಿರ್ದೇಶನ ಮಾಡಿ ನೃತ್ಯ ಸಂಯೋಜನೆ ಕೂಡ ಅವರೆ ಮಾಡಿದ್ದಾರೆ. ಸಂಜನಾ ಜೊತೆಗೆ ಹಾಡಿನಲ್ಲಿ ಇನಮ್ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಸುನೈನಾ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಬೆಂಗಳೂರು ಮತ್ತು ಮೂಲ್ಕಿ ಸುತ್ತಮುತ್ತ ಈ ಹಾಡನ್ನು ಸೆರೆಹಿಡಿಯಲಾಗಿದೆ.

  ಖುಷಿ ಹಾಡಿಗೆ ಕಾರಣ ಇದೆ

  ಖುಷಿ ಹಾಡಿಗೆ ಕಾರಣ ಇದೆ

  ಸದಾ ಸಂತಸದಿಂದಿರುವ ಸಂಜನಾ ಬಗ್ಗೆ ಎಲ್ಲರು ಕುತೂಹಲದಿಂದ ಕೇಳುತ್ತಿದ್ದರಂತೆ. ಆಗ ಸಂಜನಾಗೆ ಈ ಹಾಡಿನ ಐಡಿಯಾ ತಲೆಗೆ ಬಂದಿದೆಯಂತೆ. ಕೆಲವೆ ನಿಮಿಷಗಳಲ್ಲಿ ಹಾಡಿನ ಮೂಲಕ ಖುಷಿಯ ಬಗ್ಗೆ ಯಾಕೆ ಹೇಳುವ ಪ್ರಯತ್ನ ಮಾಡಬಾರದು ಎಂದು ಯೋಚಿಸಿ ಈ ಹಾಡನ್ನು ನಿರ್ದೇಶನ ಮಾಡಿದ್ದಾರೆ.

  ಝೀ ಮ್ಯೂಸಿಕ್ ಬಿಡುಗಡೆ

  ಝೀ ಮ್ಯೂಸಿಕ್ ಬಿಡುಗಡೆ

  ಖುಷಿ ತಂಡದ ಪ್ರಯತ್ನ ಮತ್ತು ಕೆಲಸ ನೋಡಿ ಝೀ ಮ್ಯೂಸಿಕ್ ಈ ಹಾಡನ್ನು ರಿಲೀಸ್ ಮಾಡಿದೆ. ಕನ್ನಡ ಮತ್ತು ಹಿಂದಿ ಎರಡು ವರ್ಷನ್ ಅನ್ನು ಝೀ ಮ್ಯೂಸಿಕ್ ರಿಲೀಸ್ ಮಾಡುವ ಮೂಲಕ ತಂಡೆಕ್ಕೆ ಸಾಥ್ ನೀಡಿದೆ.

  English summary
  Kannada Actress Sanjana Prakash directed and acted new Album song released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X