ಕನ್ನಡ, ತೆಲುಗಿನಲ್ಲಿ 'ಒಂದಂಕೆ ಕಾಡು': 'ಓ ಒಲವೇ' ಎನ್ನುತ್ತಿದೆ ರೊಮ್ಯಾಂಟಿಕ್ ಜೋಡಿ!

ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಸಿನಿಮಾಗಳಿಗೇನು ಕಮ್ಮಿಯಿಲ್ಲ. ಪ್ರತಿದಿನ ಒಂದಲ್ಲ ಒಂದು ಹೊಸ ಸಿನಿಮಾ ಸೆಟ್ಟೇರುತ್ತಲೇ ಇರುತ್ತೆ. ಆದರೆ, ಗಮನ ಸೆಳೆಯುವುದು ಕೆಲವೇ ಕೆಲವು ಮಾತ್ರ. ಆದರೆ, ಇಲ್ಲೊಂದು ಸಿನಿಮಾದಲ್ಲಿ ಹೊಸಬರು ಹಾಗೂ ಅನುಭವಿಗಳ ಮಿಶ್ರಣ ಆಗಿದೆ. ಅಂದ್ಹಾಗೆ ಆ ಸಿನಿಮಾವೇ 'ಒಂದಂಕೆ ಕಾಡು'.

ಈಗಾಗಲೇ 'ಒಂದಂಕೆ ಕಾಡು' ಸಿನಿಮಾ ಎಲ್ಲರ ಗಮನ ಸೆಳೆದಿದೆ. ಟೈಟಲ್ ಹಾಗೂ ಮೋಷನ್ ಪೋಸ್ಟರ್‌ ಮೂಲಕ ಹೊಸ ಭರವಸೆಯನ್ನು ಮೂಡಿಸಿದೆ. ಸದ್ಯ 'ಒಂದಂಕೆ ಕಾಡು' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮುಗಿದಿದೆ. ಈ ವೇಳೇ ಒಂದು ರೊಮ್ಯಾಂಟಿಕ್ ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ.

ಅಂದ್ಹಾಗೆ ಕಪಿಲ್ ನಾಯರ್ ದನಿಯಲ್ಲಿ ಮೂಡಿ ಬಂದಿರೋ 'ಓ ಒಲವೇ' ಅನ್ನೋ ರೋಮ್ಯಾಂಟಿಕ್ ಹಾಡು ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಈ ಹಾಡಿಗೆ ಡಾ. ಉಮೇಶ್ ಪಿಲ್ಲಿಕುಡೇಲು ಸಾಹಿತ್ಯ ರಚಿಸಿದ್ದು, ಮಧು ಹೆಗ್ಡೆ ಟ್ಯೂನ್ ಹಾಕಿದ್ದಾರೆ.

Kannada Movie Ondanke Kaadu Movie Song O Olave Romantic Song Released

'ಒಂದಂಕೆ ಕಾಡು' ಒಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಥ್ರಿಲ್ಲಿಂಗ್ ಸ್ಟೋರಿ ಲೈನ್ ಹೊಂದಿರೋ 'ಒಂದಂಕೆ ಕಾಡು' ಬಿಡುಗಡೆ ರೆಡಿಯಾಗಿದೆ. ರಥರ್ವ್ ಪೊನ್ನಣ್ಣ ಹಾಗೂ ಸೋನಿ ಮುಲೇವ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಕಿರಣ್ ನಾಯಕ್, ಮಧು ಹೆಗಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಒಂದಂಕೆ ಕಾಡು' ಸಿನಿಮಾ ಕನ್ನಡ, ತೆಲುಗು ಸೇರಿದಂತೆ ಎರಡು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈಗ ಈ ಸಿನಿಮಾದ ಚಿತ್ರೀಕರಣ ಕೂಡ ಮುಗಿದಿದ್ದು, ಇದೇ ವರ್ಷ ಸಿನಿಮಾ ಬಿಡುಗಡೆ ಮಾಡುವುದಕ್ಕೆ ರೆಡಿಯಾಗುತ್ತಿದೆ. ಸದ್ಯದಲ್ಲೇ ಚಿತ್ರತಂಡ ಬಿಡುಗಡೆ ದಿನವನ್ನುಅನೌನ್ಸ್ ಮಾಡಲಿದೆ.

'ಒಂದಂಕೆ ಕಾಡು' ಸಿನಿಮಾ ನಿರ್ದೇಶನ ಮಾಡಿದ್ದು ರಾಮಚಂದ್ರ ವೈದ್ಯ. ಈಗಾಗಲೇ ಕಿರುತೆರೆಯಲ್ಲಿ ಇವರಿಗೆ ಸಾಕಷ್ಟು ಅನುಭವವಿದೆ. 'ಜೊತೆ ಜೊತೆಯಲಿ', 'ಶುಭ ವಿವಾಹ', 'ಮಾನಸ ಸರೋವರ' ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಸುಮಾರು ಹದಿನೈದು ವರ್ಷಗಳಿಂದ ಕಿರುತೆರೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. 'ಒಂದಂಕೆ ಕಾಡು' ರಾಮಚಂದ್ರ ವೈದ್ಯ ನಿರ್ದೇಶನದ ಚೊಚ್ಚಲ ಸಿನಿಮಾ.

Kannada Movie Ondanke Kaadu Movie Song O Olave Romantic Song Released

ಶ್ರಾವಣಿ ಶಿವ್ ಕಥೆ ಬರೆದಿದ್ದರೆ, ರಾಮಚಂದ್ರ ವೈದ್ಯ ಚಿತ್ರಕಥೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಟಿ.ಜಿ ನಂದೀಶ್ ಸಂಭಾಷಣೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, 'ಉಗ್ರಂ' ಹಾಗೂ 'ಕೆಜಿಎಫ್ ಚಾಪ್ಟರ್-1' ಖ್ಯಾತಿಯ ಶ್ರೀಕಾಂತ್ ಎಡಿಟಿಂಗ್ ಇದೆ. ಹಾಗೇ ಮಧು ಹೆಗ್ಡೆ ಈ ಸಿನಿಮಾಗಾಗಿ ಸಂಗೀತ ನೀಡಿದ್ದಾರೆ. ಇನ್ನು ಕನ್ನಡ ಹಾಡುಗಳಿಗೆ ಹೃದಯ ಶಿವ ಹಾಗೂ ಡಾಕ್ಟರ್ ಉಮೇಶ್ ಪಿಲ್ಲಿಕುಡೇಲು ಸಾಹಿತ್ಯ ಬರೆದಿದ್ದಾರೆ. ಹಾಗೇ RRR ಸೇರಿದಂತೆ ಹಲವು ಸಿನಿಮಾಗಳಿಗೆ ಸಾಹಿತ್ಯ ಬರೆದಿರುವ ವರದರಾಜು ಚಿಕ್ಕಬಳ್ಳಾಪುರ ತೆಲುಗಿನಲ್ಲಿ ಈ ಚಿತ್ರಕ್ಕೆ ಸಾಹಿತ್ಯ ರಚಿಸಿದ್ದಾರೆ.

More from Filmibeat

English summary
Kannada Movie Ondanke Kaadu Movie Song O Olave Romantic Song Released, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X