350 ಸಿನಿಮಾ ಟೈಟಲ್ ಇಟ್ಕೊಂಡು ಹುಟ್ಟಿದ 'ರಣಧೀರ' ಚಿತ್ರದ ಹಾಡು ಯಾವುದು? ಹಂಸಲೇಖಗೆ ಹೊಳೆದಿದ್ದೇಗೆ?
ಕ್ರೇಜಿಸ್ಟಾರ್ ರವಿಚಂದ್ರನ್ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾಗಳಲ್ಲಿ 'ರಣಧೀರ' ಕೂಡ ಒಂದು. 'ಪ್ರೇಮಲೋಕ'ದಂತಹ ಮೆಗಾ ಹಿಟ್ ಕೊಟ್ಟ ಕ್ರೇಜಿಸ್ಟಾರ್ ನಟಿಸಿ, ನಿರ್ದೇಶಿಸಿರುವ ಸಿನಿಮಾವಿದು. ಈ ಸಿನಿಮಾದ ಹಾಡುಗಳು ಕೂಡ ಅಷ್ಟೇ ಜನಪ್ರಿಯತೆ ಕಂಡಿತ್ತು. ಸಿನಿಮಾ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ. ಹಾಡುಗಳು ಸಂಗೀತ ಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಒಂದೊಂದು ಹಾಡು ಕೂಡ ಬೇರೆ ಲೆವೆಲ್‌ನಲ್ಲಿಯೇ ಇತ್ತು.
'ರಣಧೀರ'ಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಂದೆ 'ಹೀರೊ' ಹಿಂದಿ ಸಿನಿಮಾ ಹಕ್ಕುಗಳನ್ನು ತೆಗೆದುಕೊಂಡು ಬಂದಿದ್ದರು. ಈ ಸಿನಿಮಾ ಹಕ್ಕಗಳನ್ನು ಖರೀದಿ ಮಾಡಿದಾಗ, ಹರಿಪ್ರಸಾದ್ ಚೌರಾಸೀಯ ಅವರ ಕೊಳಲು ವಾದದ ಹಕ್ಕುಗಳನ್ನು ಖರೀದಿ ಮಾಡಿದ್ದರು. ಹಂಸಲೇಖ ಅವರ ಬಳಿ ಬಂದು ನೋಡಿ ದೊಡ್ಡ ಮೊತ್ತವನ್ನು ಕೊಟ್ಟ ತಂದಿದ್ದೇನೆ. ಇದನ್ನು ಸಿನಿಮಾ ಗೀತೆಯನ್ನಾಗಿ ಮಾಡಿ ಅಂತ ಹೇಳುತ್ತಾರೆ. ಆಗ ಹಂಸಲೇಖ ಅವರಿಗೆ ಒರಿಜಿನಲ್ ಹಿಂದಿ ಟ್ಯೂನ್ ಅನ್ನು ಇಟ್ಟುಕೊಂಡು ಹಾಡಬೇಕಲ್ಲ. ನನ್ನದೇನಾದರೂ ಹೊಸತನವನ್ನು ತೋರಿಸಬೇಕು ಅಂತ ನಿರ್ಧರಿಸಿದ್ದರು. ಹೀಗೆ ಹುಟ್ಟಿಕೊಂಡು ಹಾಡುಗಳು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದವು. ಈ ಸಿನಿಮಾದ ಹಾಡುಗಳು ಹುಟ್ಟಿದ್ದೇಗೆ ಅನ್ನೋದನ್ನು ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿವಿಲ್ ಮಾಡಿದ್ದಾರೆ.

"ನನ್ನದೇನಾದರೂ ಹೊಸತನ ತೋರಿಸಬೇಕು ಅಂತ ಸ್ವಾಗತ್ ಹೋಟೆಲ್‌ನಿಂದ ಇಳಿಯುತ್ತಿದ್ದರೆ, ಕೆಎಸ್‌ಎಲ್ ಸ್ವಾಮಿಯವರು ಸಿಕ್ಕಿದರು. ಅವರಿಗೆ ಇದೂವರೆಗೂ ಬಂದಿರುವ ಸಿನಿಮಾಗಳ ಪಟ್ಟಿ ಕೊಡಿ ಅಂತ ಹಂಸಲೇಖ ಹೇಳಿದರು. ಆಗ ಕೆಎಸ್‌ಎಲ್ ಸ್ವಾಮಿಯವರು ಇವರಿಗೆ 500 ಸಿನಿಮಾಗಳ ಪಟ್ಟಿಯನ್ನು ತಂದುಕೊಟ್ಟರು. ಇದನ್ನು ಇಟ್ಟುಕೊಂಡು ಅಂದಿನ ನ್ಯೂಸ್ ಪೇಪರ್ ತೆಗೆದರೆ, ಅಂದು ಆರಂಭ ಎನ್ನುವ ಒಂದು ಸಿನಿಮಾದ ಚಿತ್ರೀಕರಣ ಶುರುವಾಗಿತ್ತು. ಆ ಪದವನ್ನು ಇಟ್ಟುಕೊಂಡು ಒಂದಾನೊಂದು ಕಾಲದಲ್ಲಿ ಆರಂಭ ಎನ್ನುವ ಗೀತೆಯನ್ನು ಬರೆದರು." ಎನ್ನುತ್ತಾರೆ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರ ಮೂರ್ತಿ.
ಇಡೀ ಹಾಡನ್ನು ಸಿನಿಮಾದ ಟೈಟಲ್‌ಗಳನ್ನು ಇಟ್ಟುಕೊಂಡು ಬರೆದಿದ್ದರು. ಹರಿಪ್ರಸಾದ್ ಚೌರಾಸಿಯಾ ಅವರ ಟ್ಯೂನ್ ಅನ್ನು ಈ ರೀತಿ ಬಳಸಿಕೊಂಡರು. ಕನ್ನಡ ಸಿನಿಮಾ ಟೈಟಲ್‌ಗಳನ್ನು ಇಟ್ಟುಕೊಂಡು ಸಾಂಗ್ ಮಾಡಿದ್ದರು. ಇದು ಅಂದಿನ ಕಾಲಕ್ಕೆ ಹೊಸ ಪ್ರಯೋಗ ಎನ್ನಬಹುದು. ಈ ಸಿನಿಮಾ ಸರಿ ಸುಮಾರು 350 ಟೈಟಲ್‌ಗಳನ್ನು ಹಂಸಲೇಖ ಬಳಸಿಕೊಂಡಿದ್ದರು. ಹಾಗಂತ ಇದೊಂದೇ ಹಾಡು ಅಲ್ಲ. ಈ ಸಿನಿಮಾ ಪ್ರತಿಯೊಂದು ಹಾಡು ಕೂಡ ಪ್ರಯೋಗವೇ ಆಗಿತ್ತು. ಅದರಲ್ಲೂ ಹೀರೋಯಿನ್ ಪರಿಚಯಿಸುವುದಕ್ಕೆ ಅಂತ ಮಾಡಿದ ಹಾಡು ಕೂಡ ಒಂದು.

ಹೀರೋಯಿನ್ ಪರಿಚಯ ಮಾಡುವುದಕ್ಕೆ ಯಾರೇ ನೀನು ಸುಂದರ ಚೆಲುವೆ ಹಾಡನ್ನು ಪರಿಚಯಿಸಿದರು. ಆ ಹಾಡನ್ನು ಮಾಡಿದ ಬಳಿಕ ಎಸ್.ಜಾನಕಿಯವರ ಬಳಿ ಅದನ್ನು ಹಾಡಿಸಬೇಕು ಅಂತ ಹಾಡಿಸಿದರು. ಆ ವೇಳೆ ಎಸ್.ಜಾನಕಿ ಟಾಪ್ ಮ್ಯೂಸಿಕ್ ಡೈರೆಕ್ಟರ್ ನೀನು ಅಂತ ಹೇಳಿದರು. ಇಲ್ಲಮ್ಮ ಮೊದಲ ಸಿನಿಮಾ ಅಂತ ಹೇಳಿದಾಗ, ಎಲ್ಲಾ ಹಾಡುಗಳನ್ನು ಟಾಪ್‌ನಲ್ಲೇ ಇಟ್ಟಿದ್ದೀಯಲ್ಲ. ಹಾಡುವುದಕ್ಕೆ ಎಷ್ಟು ಕಷ್ಟ ಪಡಬೇಕು ಎಂದು ತಮಾಷೆ ಮಾಡಿದ್ದರು. ಮೊದಲ ಭಾಗವನ್ನಷ್ಟೇ ಹಾಡಿಸಿ, ಇದನ್ನು ವೀರಸ್ವಾಮಿಯವರಿಗೆ ಕೇಳಿದ್ದರು.
"ವೀರಸ್ವಾಮಿಯವರು ಪ್ರೇಮಲೋಕ ಸಿನಿಮಾಗಳನ್ನು ಒಮ್ಮೆ ಕೇಳಿ ಎಂದು ಹೇಳಿದರು. ಯಾಕೆ ಎಂದು ಕೇಳಿದಾಗ, ನೀವು ನಿಮ್ಮ ಪ್ರೇಮಲೋಕದ ಟ್ಯೂನ್‌ಗಳನ್ನು ಕಾಪಿ ಮಾಡಿದ್ದೀರಾ. ಯಾವತ್ತೂ ಒಂದು ಸಿನಿಮಾದ ಟ್ಯೂನ್ ಅನ್ನು ಇನ್ನೊಂದು ಸಿನಿಮಾಗೆ ಮಾಡಿದರೆ, ಕಂಡಿತಾ ಗೆಲ್ಲಲ್ಲ. ಯಾರೇ ನೀನು ಸುಂದರ ಚೆಲುವೆ ನನಗೆ ಪ್ರೇಮಲೋಕದ ತರಾನೇ ಕಾಣಿಸುತ್ತಿದೆ ನನಗೆ. ಇದಕ್ಕೆ ಬೇರೆ ಬೇಕು ಎಂದರು. ಮತ್ತೆ ಬೆಂಗಳೂರಿನಿಂದ ಮದ್ರಾಸ್‌ಗೆ ಟ್ರೈನ್‌ನಲ್ಲಿ ಹೋದರು. ಆಗ ಗಿಟಾರ್ ಇಟ್ಟುಕೊಂಡು ಹೋಗುವಾಗ ಕಾಫಿ ಬಂತು. ಆಗ ಹಂಸಲೇಖ ಸಡನ್ ಆಗಿ ಯೋಚನೆ ಮಾಡಿದರು. ವಾರೇ ವ್ಹಾವ್ ಕಾಫಿ ಎಂತಹ ಬೊಂಬಾಟ್ ಆಗಿದೆ. ಆಗ ಹುಡುಗರು ಹೇಗೆ ಕಮೆಂಟ್ ಮಾಡುತ್ತಾರೆ ಅನ್ನೋ ಕಾನ್ಸೆಪ್ಟ್. ಇದು ರವಿಚಂದ್ರನ್ ಅವರಿಗೆ ತುಂಬಾನೇ ಇಷ್ಟ ಆಗಿತ್ತು.


Click it and Unblock the Notifications











