'ದಿ ಲಯನ್ ಈಸ್ ಬ್ಯಾಕ್': ದಾಖಲೆ ಸೃಷ್ಟಿಸಿದ ಕೋಟಿಗೊಬ್ಬ 3 ಹಾಡು

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರದ 'ಆಕಾಶಾನೆ ಅದರಿಸುವ' ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಸೋಮವಾರ ಬೆಳಿಗ್ಗೆ ಆನಂದ್ ಆಡಿಯೋದ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಮೊದಲ ಲಿರಿಕಲ್ ವಿಡಿಯೋ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

Recommended Video

ಚಿತ್ರರಂಗದ ಹಿರಿಯ ಕಲಾವಿದರ ಹೊಟ್ಟೆ ತುಂಬಿಸುತ್ತಿದ್ದಾರೆ ಕಿಚ್ಚ ಸುದೀಪ್ | Sudeep | Dingri Nagraj | Helping

ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಕನ್ನಡ ಮಾತ್ರವಲ್ಲದೆ, ದೇಶದ ಅನೇಕ ಭಾಷೆಗಳಲ್ಲಿ, ವಿದೇಶದಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ಸುದೀಪ್, ಮತ್ತೊಂದು ಇತಿಹಾಸ ಸೃಷ್ಟಿಸುವ ಸೂಚನೆ ನೀಡಿದ್ದಾರೆ. ಲಾಕ್‌ಡೌನ್ ಕಾರಣದಿಂದ ಬೇಸರದಲ್ಲಿದ್ದ ಅಭಿಮಾನಿಗಳು ಮುಗಿಬಿದ್ದು ಈ ಹಾಡನ್ನು ವೀಕ್ಷಿಸಿದ್ದಾರೆ. ಬಳಿಕ ಮತ್ತೆ ಮತ್ತೆ ವೀಕ್ಷಿಸಿದ್ದಾರೆ. ಲಿರಿಕಲ್ ವಿಡಿಯೋದ ಹಾಡಿನ ಸಾಲುಗಳು, ಅದರಲ್ಲಿನ ಕಿಚ್ಚ ಸುದೀಪ್ ವಿಭಿನ್ನ ಗೆಟಪ್‌ಗಳು ಅವರಿಗೆ ಖುಷಿ ನೀಡಿವೆ. ಮುಂದೆ ಓದಿ...

ಕೆಲವೇ ನಿಮಿಷದಲ್ಲಿ ಲಕ್ಷ ವೀಕ್ಷಣೆ

ಕೆಲವೇ ನಿಮಿಷದಲ್ಲಿ ಲಕ್ಷ ವೀಕ್ಷಣೆ

'ಆಕಾಶಾನೆ ಅದರಿಸುವ' ಹಾಡು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷ ವೀಕ್ಷಣೆಯನ್ನು ದಾಟಿದೆ. ಅರ್ಧ ಗಂಟೆಯಲ್ಲಿ ಒಂದೂವರೆ ಲಕ್ಷ ವೀಕ್ಷಣೆಗೆ ಒಳಪಟ್ಟ ಹಾಡು, ಮುಕ್ಕಾಲು ಗಂಟೆ ಕಳೆಯುವ ವೇಳೆಗೆ ಐದು ಲಕ್ಷ ವೀಕ್ಷಣೆಯಾಗಿದೆ.

ಕನ್ನಡದಲ್ಲಿ ದಾಖಲೆ

ಕನ್ನಡದಲ್ಲಿ ದಾಖಲೆ

ಕನ್ನಡದಲ್ಲಿ ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಅನೇಕ ಲಿರಿಕಲ್ ವಿಡಿಯೋಗಳು ಭರ್ಜರಿ ಹಿಟ್ ಆಗಿವೆ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಯಾವ ಹಾಡೂ ಇಷ್ಟೊಂದು ಹಿಟ್ಸ್ ಪಡೆದಿರಲಿಲ್ಲ. ಅಂತಹದ್ದೊಂದು ವಿಶಿಷ್ಟ ದಾಖಲೆಯನ್ನು ಕೋಟಿಗೊಬ್ಬ 3 ಮಾಡಿದೆ ಎಂದು ಹೇಳಲಾಗಿದೆ.

24 ಗಂಟೆಯಲ್ಲಿ 23 ಲಕ್ಷ ಹಿಟ್

24 ಗಂಟೆಯಲ್ಲಿ 23 ಲಕ್ಷ ಹಿಟ್

ಕೋಟಿಗೊಬ್ಬ 3 ಚಿತ್ರದ 'ಆಕಾಶಾನೆ ಅದರಿಸುವ' ಹಾಡು ಒಂದೇ ದಿನದಲ್ಲಿ 2.7 ಮಿಲಿಯನ್‌ಗೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. 1.30 ಲಕ್ಷ ಮಂದಿ ಯೂಟ್ಯೂಬ್‌ನಲ್ಲಿ ಲೈಕ್ ಮಾಡಿದ್ದಾರೆ. ಹಾಡಿಗೆ ಬಂದಿರುವ ಕಾಮೆಂಟ್ಸ್‌ಗಳ ಸುರಿಮಳೆಯೇ ಹಾಡು ಹಿಟ್ ಆದ ಪರಿಯನ್ನು ಹೇಳುವಂತಿದೆ.

ಅರ್ಜುನ್ ಜನ್ಯ-ನಾಗೇಂದ್ರ ಪ್ರಸಾದ್ ಜೋಡಿ

ಅರ್ಜುನ್ ಜನ್ಯ-ನಾಗೇಂದ್ರ ಪ್ರಸಾದ್ ಜೋಡಿ

ಅರ್ಜುನ್ ಜನ್ಯ ಸಂಗೀತವಿರುವ ಈ ಚಿತ್ರದ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ವ್ಯಾಸರಾಜ್ ಸೋಸಲೆ ಹಾಡಿದ್ದಾರೆ. ಶಿವಕಾರ್ತಿಕ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ನಾಯಕಿಯಾಗಿ ಮೋನಿಕಾ ಸೆಬಾಸ್ಟಿಯನ್ ನಟಿಸಿದ್ದಾರೆ. ಅಫ್ತಾಬ್ ಶಿವದಾಸಾನಿ, ರವಿಶಂಕರ್ ಮುಂತಾದವರು ತಾರಾಗಣದಲ್ಲಿದ್ದಾರೆ.

More from Filmibeat

English summary
Kiccha Sudeep starrer Kotigobba 3 movie first lyrical video song Aakashane Adarisuva has created record in Kannada industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X