ಆಕಾಶಾನೆ ಅದರಿಸುವ...: 'ಕೋಟಿಗೊಬ್ಬ' ಲಿರಿಕಲ್ ವಿಡಿಯೋ ಕಿಚ್ಚ ಅಭಿಮಾನಿಗಳಿಗೆ ಹಬ್ಬ
ಲಾಕ್‌ಡೌನ್‌ನಲ್ಲಿ ಬೇಸರದಿಂದ ಕಾಲಕಳೆಯುತ್ತಿರುವ ಕಿಚ್ಚ ಸುದೀಪ ಅಭಿಮಾನಿಗಳು ಕೋಟಿಗೊಬ್ಬ 3 ಬಿಡುಗಡೆ ಮುಂದಕ್ಕೆ ಹೋಗುವ ಸೂಚನೆ ಸಿಕ್ಕಿದ್ದರಿಂದ ಮತ್ತಷ್ಟು ಬೇಸರಗೊಂಡಿದ್ದರು. ಈ ನಡುವೆ ಅವರ ನೋವಿಗೆ 'ಕೋಟಿಗೊಬ್ಬ 3' ಚಿತ್ರತಂಡದಿಂದ ಟಾನಿಕ್ ಸಿಕ್ಕಿದೆ. ಈ ಟಾನಿಕ್ ಸುದೀರ್ಘ ಕಾಲ ಚೈತನ್ಯ ನೀಡುವಂತಿದೆ.
Recommended Video
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಕೋಟಿಗೊಬ್ಬ 3' ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಇದಕ್ಕಾಗಿ ಸುದೀರ್ಘ ಸಮಯದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೋಟಿಗೊಬ್ಬನದ್ದೇ ಹಬ್ಬ ಶುರುವಾಗಿದೆ. ಲಿರಿಕಲ್ ವಿಡಿಯೋದ ಲಿಂಕ್ ಹಂಚಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಅವರ ಸಂತಸ ಹೆಚ್ಚಲು ಕಾರಣವಾಗಿರುವುದು ಧೂಳೆಬ್ಬಿಸುವ ಸಾಂಗ್. ಮುಂದೆ ಓದಿ...

ಆಕಾಶಾನೆ ಅದರಿಸುವ....
ಆಕಾಶಾನೆ ಅದರಿಸುವ ಈ ಭೂಮಿಯನ್ನೇ ಪಳಗಿಸುವ, ಕೋಟಿ ಕೋಟಿ ನೋಟುಗಳ ಕೋಟೆಯ ಮೇಲೆ ಕುಳಿತಿರುವ.. ನಾಲ್ಕು ತಲೆ ಬ್ರಹ್ಮನಿಗೂ ಅಬ್ಬಬ್ಬಾ ಕನ್‌ಫ್ಯೂಸು ಮಾಡೋನಿವಾ... ಹಾಡು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮುದ ನೀಡುತ್ತಿದೆ.

ಕಾತರದಿಂದ ಕಾದಿದ್ದ ಫ್ಯಾನ್ಸ್
'ಕೋಟಿಗೊಬ್ಬ 3' ಚಿತ್ರದ ಮೊದಲ ಲಿರಿಕಲ್ ವಿಡಿಯೋ 'ಆಕಾಶಾನೆ...' ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ತಿಳಿದಾಗಿನಿಂದ ಕಿಚ್ಚ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಇನ್ನೂ ಲಿರಿಕಲ್ ವಿಡಿಯೋದ ಪ್ರೀಮಿಯರ್ ಲಿಂಕ್ ಹಂಚಿಕೊಂಡಿಲ್ಲ ಎಂದು ಆನಂದ್ ಆಡಿಯೋ ಕಂಪೆನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ ಹೇಳಿದ ಸಮಯಕ್ಕೆ ಸರಿಯಾಗಿ ಹಾಡು ಹೊರಬಂದಿದೆ.

ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ
ಡಾ. ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯ ಸುದೀಪ್ ಫ್ಯಾನ್ಸ್ ಫಿದಾ ಆಗುವಂತೆ ಮಾಡಿದೆ. ಹಾಡಿನಲ್ಲಿ ನಾಯಕನನ್ನು ಕೊಂಡಾಡುವ ಪದಪುಂಜಗಳನ್ನು ನಾಗೇಂದ್ರ ಪ್ರಸಾದ್ ಹೊಸೆದಿದ್ದಾರೆ. ವಾಸ್‌ರಾಜ್ ಸೋಸಲೆ ಹಾಡಿರುವ ಈ ಹಾಡು, ಕ್ವಾರೆಂಟೈನ್‌ನಲ್ಲಿ ಕಿಕ್ ಕೊಡುವಂತಿದೆ.

ಅರ್ಜುನ್ ಜನ್ಯ ಸಂಗೀತ
'ಕೋಟಿಗೊಬ್ಬ 2'ಗೆ ಸಂಗೀತ ನೀಡಿದ್ದ ಅರ್ಜುನ್ ಜನ್ಯ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಈ ಹಿಂದಿನ 'ಕೋಟಿಗೊಬ್ಬ ಕೋಟಿಗೊಬ್ಬ...' ಹಾಡಿನ ನೆರಳು ಇಲ್ಲಿಯೂ ದಟ್ಟವಾಗಿದೆ. 'ಕೋಟಿಗೊಬ್ಬ 2'ದ ಟ್ರೇಡ್‌ಮಾರ್ಕ್ ಮ್ಯೂಸಿಕ್ ಅನ್ನು ಅರ್ಜುನ್ ಮುಂದುವರಿಸಿದ್ದಾರೆ. ಅರ್ಜುನ್ ಜನ್ಯ, ನಾಗೇಂದ್ರ ಪ್ರಸಾದ್ ಕಾಂಬಿನೇಷನ್ ಎಂದಿಗೂ ನಿರಾಸೆ ಮೂಡಿಸುವುದಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್
ಹಾಡು ಅಧಿಕೃತವಾಗಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳು ಚಾನೆಲ್‌ಗೆ ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಹಾಡು ಬಿಡುಗಡೆಯಾದ ಕೆಲವೇ ನಿಮಿಷದಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. #K3FirstSingle ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುವಂತೆ ಕಿಚ್ಚ ಅಭಿಮಾನಿಗಳು ಮಾಡಿದ್ದಾರೆ.

ಮಡೊನ್ನಾ ಸೆಬಾಸ್ಟಿಯನ್ ನಾಯಕಿ
ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಲಯಾಳಂ ನಟಿ ಮಡೊನ್ನಾ ಸೆಬಾಸ್ಟಿಯನ್ ಕಾಣಿಸಿಕೊಂಡಿದ್ದಾರೆ. ಮಡೊನ್ನಾ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಮಿಂಚಿದ್ದಾರೆ. ಅಫ್ತಾಬ್ ಶಿವದಾಸನಿ, ರವಿಶಂಕರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.


Click it and Unblock the Notifications











