'ಪ್ರೇಮಲೋಕ' ಹಾಡುಗಳು ಎಷ್ಟು ಮೊತ್ತಕ್ಕೆ ಸೇಲ್ ಆಗಿತ್ತು? 36 ಲಕ್ಷ ಕ್ಯಾಸೆಟ್ ಸೇಲ್ ಆಗಿದ್ದು ನಿಜವೇ?

'ಪ್ರೇಮಲೋಕ' ಸಿನಿಮಾದ ಮೂಲಕ ಕೇಜಿಸ್ಟಾರ್ ರವಿಚಂದ್ರನ್‌ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದ್ದರು. ಮಾಡರ್ನ್ ಲವ್ ಸ್ಟೋರಿಗೆ ನಾಂದಿ ಹಾಡಿದ್ದರು. ಈ ಸಿನಿಮಾದಲ್ಲಿ 12 ಹಾಡುಗಳನ್ನು ಇಡಲಾಗಿತ್ತು. ಹಂಸಲೇಖ ಹಾಡುಗಳನ್ನು ಕಂಪೋಸ್ ಮಾಡಿದ್ದರು. ಸಿನಿಮಾದಲ್ಲಿ 12 ಹಾಡುಗಳು ಇವೆ ಅನ್ನೋದೇ ಅಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ರವಿಚಂದ್ರನ್ ನಿರ್ದೇಶಿಸಿ, ನಟಿಸಿದ 'ಪ್ರೇಮಲೋಕ'ದ ಹಾಡುಗಳನ್ನು ಲಹರಿ ಸಂಸ್ಥೆ ಖರೀದಿ ಮಾಡಿತ್ತು. ಅದೇ ಮೊದಲ ಬಾರಿಗೆ ಸಿನಿಮಾದ ಹಾಡುಗಳಿಗೆ ರಾಯಲ್ಟಿ ಕೊಟ್ಟು ನಿರ್ಮಾಪಕರಿಂದ ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದ್ದರು. ಅಂದಿನ ಕಾಲಕ್ಕೆ ಕನ್ನಡ ಚಿತ್ರರಂಗಕ್ಕೆ ಅದೂ ಹೊಸತೇ ಆಗಿತ್ತು. ಈ ಬಗ್ಗೆ ಲಹರಿ ಸಂಸ್ಥೆಯ ವೇಲು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಮಾಹಿತಿಯನ್ನು ನೀಡಿದ್ದಾರೆ.

Lahari music owner Velu said he sold Ravichandran Prema Loka movie 36 lakh cassettes

"ಇವತ್ತು ಲಹರಿ ಸಂಸ್ಥೆ ಈ ಮಟ್ಟಿಗೆ ಬೆಳೆದಿದೆ ಅಂದರೆ, ಪ್ರೇಮಲೋಕವೇ ಅಡಿಪಾಯ. ಪ್ರೇಮಲೋಕ ಅಂತ ಒಂದು ಸಿನಿಮಾ ಬರುತ್ತಿದೆ. 12 ಹಾಡುಗಳಂತೆ. ಹೊಸ ಸಂಗೀತ ನಿರ್ದೇಶಕರು. ರವಿಚಂದ್ರನ್ ಸರ್ ಅವರ ನಿರ್ದೇಶನ. ವೀರಾಸ್ವಾಮಿ ಸಾಹೇಬ್ರು ನಿರ್ಮಾಣವಿತ್ತು. ಈಶ್ವರಿ ಅಂದರೆ ದೊಡ್ಡ ನಿರ್ಮಾಣ ಸಂಸ್ಥೆ. ಅವರು ಕೊಟ್ಟಿದ್ದೆಲ್ಲ ಹಿಟ್. ಪ್ರೇಮಲೋಕದಂತಹ ಸಿನಿಮಾ ಬರುತ್ತಿದೆ. ಚೆನ್ನೈನಲ್ಲಿ ಶೂಟಿಂಗ್ ಮತ್ತು ರೆಕಾರ್ಡಿಂಗ್ ಆಗುತ್ತಿದೆ ಅಂದರು. ಅಣ್ಣ ಮನೋಹರ್ ನಾಯ್ಡು ಅವರ ಜೊತೆ ಅಪ್ರೋಚ್ ಮಾಡೋಣ ಅಂತ ವೀರಾಸ್ವಾಮಿ ಅವರ ಹತ್ತಿರ ಹೋದೆವು." ಎಂದು ಲಹರಿ ವೇಲು ಹೇಳಿದ್ದಾರೆ.

ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಬಳಿ ಹೋದಾಗ, ಆಡಿಯೋಗೆ ರಾಯಲ್ಟಿ ಕೊಡುತ್ತೀರ ಅಂದಾಗ ಅಚ್ಚರಿಗೊಂಡಿದ್ದರಂತೆ. ಲಹರಿ ವೇಲು ಅಣ್ಣ ಸೀದಾ ವೀರಾಸ್ವಾಮಿ ಅವರಿಗೆ ಈ ಸಿನಿಮಾ ರೈಟ್ಸ್ ಬೇಕು ಎಂದಿದ್ದರು. ಒಮ್ಮೆ ದುಡ್ಡು ಕೊಟ್ಟು ಹಾಡುಗಳನ್ನು ತೆಗೆದುಕೊಂಡರೆ, ಅದು ನಮ್ಮ ಸಂಸ್ಥೆಯಲ್ಲಿ ಇರುತ್ತೆ. ನಾವು ಬಿಡುಗಡೆ ಮಾಡಿಕೊಳ್ಳುತ್ತೇವೆ ಅಂದಾಗ ವೀರಸ್ವಾಮಿಯವರು ಅಚ್ಚರಿ ಪಟ್ಟಿದ್ದರಂತೆ.

'ಪ್ರೇಮಲೋಕ' ಸಿನಿಮಾದ ಹಾಡುಗಳಿಗೆ ಅಂದೇ ಲಹರಿ ಸಂಸ್ಥೆ ದೊಡ್ಡ ಮೊತ್ತವನ್ನು ಕೊಟ್ಟು ಖರೀದಿ ಮಾಡಿತ್ತು. ಸುಮಾರು 2.25 ಲಕ್ಷ ರೂಪಾಯಿಯನ್ನು ಅಂದಿನ ಕಾಲಕ್ಕೆ ನೀಡಿದ್ದರು. ಆ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ತಂದೆ ವೀರಾಸ್ವಾಮಿಗೆ ಅಚ್ಚರಿ ಆಗಿತ್ತು. ಇಷ್ಟೊಂದು ಮೊತ್ತವನ್ನು ಹೇಗೆ ರಿಕವರಿ ಮಾಡುತ್ತಾರೆ ಎಂದು ಭಯಪಟ್ಟಿದ್ದ ಸಂಗತಿಯನ್ನು ಲಹರಿ ವೇಲು ನೆನಪಿಸಿಕೊಂಡಿದ್ದಾರೆ.

Lahari music owner Velu said he sold Ravichandran Prema Loka movie 36 lakh cassettes

"ಪ್ರೇಮಲೋಕ ಆಡಿಯೋವನ್ನು ಬಿಡುಗಡೆ ಮಾಡಿದ್ವಿ. ಯಾರೀದು ಹೊಸ ಮ್ಯೂಸಿಕ್ ಡೈರೆಕ್ಟರ್. 12 ಹಾಡುಗಳನ್ನು ಯಾರು ಕೇಳ್ತಾರೆ. ಇದು ಹೋಗುತ್ತೇನ್ರಿ ಅಂತ ಹೇಳಿದ ಮಹಾನುಭಾವರು ಇಂದಿಗೂ ಇದ್ದಾರೆ. ನಮಗೆ ಏನೂ ಅನಿಸಿಲ್ಲ. ಹೊಸತನವಿದೆ ಖಂಡಿತಾ ಈ ಸಿನಿಮಾದ ಹಾಡುಗಳು ಹಿಟ್ ಆಗುತ್ತೆ ಅಂತ ಅನಿಸುತ್ತಲೇ ಇತ್ತು. ಮೈಸೂರಿನಿಂದ ಉತ್ತಮ ರೆಸ್ಪಾನ್ಸ್ ಬಂದಿತ್ತು. ಮೈಸೂರುನಿಂದ ಒಳ್ಳೆಯ ರೆಸ್ಪಾನ್ಸ್ ಬಂದರೆ ಸಿನಿಮಾ ಹಿಟ್ ಆಗುತ್ತೆ ಅಂತ."

ಕ್ರೇಜಿಸ್ಟಾರ್ 'ಪ್ರೇಮ ಲೋಕ' ರಿಲೀಸ್ ಆದಾಗ ಐದು ದಿನ ಒಳ್ಳೆಯ ರಿಪೋರ್ಟ್ ಬರಲಿಲ್ಲ. ಕಪಾಲಿ ಥಿಯೇಟರ್‌ನಲ್ಲಿ ಸಿನಿಮಾವನ್ನು ಹಾಕಲಾಗಿತ್ತು. ನೋಡಿದವರು ಸಿನಿಮಾ ಚೆನ್ನಾಗಿದೆ ಅಂತಲೇ ಹೇಳಿದ್ದರು. ಆದರೂ ರೆಸ್ಪಾನ್ಸ್ ಬರುತ್ತಿಲ್ಲ. ಐದನೇ ವಾರಕ್ಕೆ ದೂರದರ್ಶನದಲ್ಲಿ ಚಿತ್ರಮಂಜರಿ ಕಾರ್ಯಕ್ರಮದಲ್ಲಿ ಒಂದು ಹಾಡನ್ನು ಪ್ರಸಾರ ಮಾಡಲಾಯ್ತು. ಮಾರನೇ ದಿನವೇ ಚಿತ್ರಮಂದಿರ ಹೌಸ್‌ಫುಲ್ ಆಯಿತು.

"ಈಶ್ವರಿ ಹಾಗೂ ಲಹರಿ ಸಂಸ್ಥೆ ಕಥೆ ಮುಗೀತು ಮಾತಾಡಿದ ಕೆಲವೇ ಕೆಲವು ಗಾಂಧಿನಗರದ ಮಂದಿಗೆ ಈ ಸಿನಿಮಾ ಸರಿಯಾಗಿ ಉತ್ತರ ಕೊಟ್ಟಿತ್ತು. ಹಾಡುಗಳಿಗೆ ಬೇಡಿಕೆ ಜಾಸ್ತಿ. ನಮ್ಮ ಬಳಿಕ ಮಿಷನರಿ ಕಮ್ಮಿ. ಚಿತ್ರದುರ್ಗದಿಂದ ಬೆಳಗ್ಗೆ 500 ಕ್ಯಾಸೆಟ್ ಅಂತಾರೆ, ಸಂಜೆ ಎರಡು ಸಾವಿರ ಕ್ಯಾಸೆಟ್ ಕೊಡಿ ಅಂತಾರೆ. ಮೈಸೂರಿಂದ ಫೋನ್ ಮಾಡಿ ಮೂರು ಸಾವಿರ ಕಳಿಸಿ ಅಂತಾರೆ. ನಮ್ಮ ಬಳಿ ಉಪಕರಣಗಳು ಕಮ್ಮಿ ಇದ್ದವು. 36 ಸಾವಿರ ಕ್ಯಾಸೆಟ್‌ಗಳು ಮಾರಾಟ ಆಗಿದ್ದವು ಅನ್ನೋದು ನಿಜ. ಅದು ನಿಜಕ್ಕೂ ದಾಖಲೆನೇ. ಇಡೀ ದಕ್ಷಿಣ ಭಾರತದ ಯಾವುದೇ ಸಿನಿಮಾನೂ ಹೋಗಿಲ್ಲ." ಎಂದು ಲಹರಿ ವೇಲು ಹೇಳಿದ್ದಾರೆ.

More from Filmibeat

English summary
Lahavi Velu revealed that Ravichandran's Prema Loka movie song craze
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X