RRR ಸಿನಿಮಾದ 'ನಾಟು ನಾಟು' ಸಾಂಗ್ ಆಸ್ಕರ್ ನಾಮಿನೇಟ್ ಆಗಿದ್ದಕ್ಕೆ ಲಹರಿ ವೇಲು ದಿಲ್ ಖುಷ್!
95ನೇ ಆಸ್ಕರ್ ಪ್ರಶಸ್ತಿ ನಾಮಿನೇಶನ್ ಪ್ರಕ್ರಿಯೆ ಇಂದು (ಜನವರಿ 24) ಪೂರ್ಣಗೊಂಡಿದೆ. ಈ ಬಾರಿನೂ ಭಾರತಕ್ಕೆ ನಿರಾಸೆಯಾಗಿದ್ದರೂ, ರಾಜಮೌಳಿ ನಿರ್ದೇಶನದ RRR ಸಿನಿಮಾದ 'ನಾಟು ನಾಟು' ಸಾಂಗ್ ಆಸ್ಕರ್ ನಾಮಿನೇಟ್ ಆಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಲಹರಿ ವೇಲು ಸಂತಸ ವ್ಯಕ್ತಪಡಿಸಿದ್ದಾರೆ.
ಅತ್ಯುತ್ತಮ ಹಾಡು ವಿಭಾಗದಲ್ಲಿ 'ನಾಟು ನಾಟು' ಹಾಡು ಟಾಪ್ 5ನಲ್ಲಿ ಆಸ್ಕರ್‌ಗೆ ನಾಮಿನೇಟ್ ಆಗಿದೆ. ಉಳಿದ ನಾಲ್ಕು ಹಾಡುಗಳಿಗೆ ಪೈಪೋಟಿ ನೀಡುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.
RRR ಸಿನಿಮಾದ ಹಾಡುಗಳನ್ನು ಲಹರಿ ಸಂಸ್ಥೆ ಬಿಡುಗಡೆ ಮಾಡುತ್ತಿತ್ತು.ಹೀಗಾಗಿ ತಮ್ಮ ಸಂಸ್ಥೆಯಿಂದ ಬಿಡುಗಡೆಯಾದ ಸಿನಿಮಾದ ಹಾಡು ಆಸ್ಕರ್ ನಾಮಿನೇಟ್ ಆಗಿದ್ದ ಲಹರಿ ಸಂಸ್ಥೆಯ ಮಾಲೀಕರಾದ ವೇಲು ಹರ್ಷ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ಬಂದಿತ್ತು. ಈಗ ಆಸ್ಕರ್‌ಗೆ ನಾಮಿನೇಟ್ ಆಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

"ಇವತ್ತು ಸಂತೋಷದ ದಿನ. ಭಾರತ ಮಾತೆಯ ಮಡಿಲಿಗೆ, ಅದರಲ್ಲೂ ಕನ್ನಡಾಂಬೆಯ ಮಡಿಲಿಗೆ, ನಿಮ್ಮ ಲಹರಿ ಸಂಸ್ಥೆಗೆ RRR ರಾಜಮೌಳಿ ಸಾಹೇಬ್ರ ನಿರ್ದೇಶನ.. ಕೀರವಾಣಿಯವರ ಸಂಗೀತದ ನಾಟು ನಾಟು ಹಾಡಿಗೆ ತಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿತ್ತು.ಈಗ ಆಸ್ಕರ್ ಅವಾರ್ಡ್‌ನ ಟಾಪ್ 5ಗೆ ಸೆಲೆಕ್ಟ್ ಆಗಿದೆ." ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

"RRR ನಿಮ್ಮ ಲಹರಿ ಸಂಸ್ಥೆ ಬಿಡುಗಡೆ ಮಾಡಿತ್ತು.RRR ಹಾಡುಗಳು ಪ್ರಪಂಚದಾದ್ಯಂತ ಪ್ರಸಾರ ಆಗಿತ್ತು. ಇದೇನೇ ಆಗಿದ್ದರೂ. ಈ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳುವಾಗ ಪ್ರತಿಯೊಬ್ಬರನ್ನೂ ನಾನು ನೆನೆಸಿಕೊಳ್ಳುತ್ತೇನೆ.ನಮ್ಮನ್ನು ಬೆಳೆಸಿದ ಸಂಗೀತಪ್ರಿಯರು, ಸಂಗೀತ ನಿರ್ದೇಶಕರು, ಚಲನಚಿತ್ರ ನಿರ್ಮಾಪಕರು ಎಲ್ಲರಿಗೂ ನಾನು ಚಿರಋಣಿಯಾಗಿದ್ದೀನಿ." ಎಂದು ತಮ್ಮ ಸಂಸ್ಥೆಯಿಂದ ರಿಲೀಸ್ ಆಗಿ ಸಿನಿಮಾದ ಹಾಡು ಆಸ್ಕರ್‌ನಲ್ಲಿ ಸದ್ದು ಮಾಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications











