ಮತ್ತೊಂದು ಖುಷಿ ಸುದ್ದಿ ಹಂಚಿಕೊಂಡ 'ಲವ್ ಮಾಕ್‌ಟೇಲ್' ತಂಡ

ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದಾದ 'ಲವ್ ಮಾಕ್‌ಟೇಲ್', ಗೆಲುವಿನ ಗುಂಗಲ್ಲಿಯೇ ಅದರ ಮುಂದುವರಿದ ಭಾಗಕ್ಕೆ ತಯಾರಿ ನಡೆಸಿರುವುದು ಗೊತ್ತಿರುವ ಸಂಗತಿ. ಜನವರಿ ಅಂತ್ಯದಲ್ಲಿ ಬಿಡುಗಡೆಯಾದ ಸಿನಿಮಾ, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಕೊರೊನಾ ವೈರಸ್ ಹಾವಳಿ ಶುರುವಾಯಿತು. ಹೀಗಾಗಿ ಪ್ರದರ್ಶನ ರದ್ದುಗೊಂಡವು.

Recommended Video

ಬೆಳಿಗ್ಗೆ 4:30ಕ್ಕೆ ಶುರುವಾಯ್ತು ಅಪ್ಪು ಪವರ್ ಫುಲ್ ವರ್ಕೌಟ್..! | Puneeth Rajkumar

ಆದರೆ ಕೆಲವೇ ದಿನಗಳಲ್ಲಿ ಸಿನಿಮಾ ಒಟಿಟಿ ಪ್ಲಾಟ್‌ ಫಾರ್ಮ್‌ನಲ್ಲಿಯೂ ಲಭ್ಯವಾಯಿತು. ಅಷ್ಟರಲ್ಲಾಗಲೇ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದರಿಂದ ಜನರು ಮುಗಿಬಿದ್ದು ವೀಕ್ಷಿಸಿದರು. ಪರ ಭಾಷೆಗಳ ಜನರೂ ಲವ್ ಮಾಕ್‌ಟೇಲ್ ಮೆಚ್ಚಿಕೊಂಡರು. ಕಿರುತೆರೆಯಲ್ಲಿ ಕೂಡ ಎರಡು ಮೂರು ಪ್ರಸಾರವಾಗಿದ್ದು, ಆಗಲೂ ಜನರು ಮತ್ತೆ ಮತ್ತೆ ನೋಡುತ್ತಿದ್ದಾರೆ. ಈಗಲೂ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ನಡುವೆ ಚಿತ್ರತಂಡ ಮತ್ತೊಂದು ಖುಷಿಯನ್ನು ಹಂಚಿಕೊಂಡಿದೆ. ಮುಂದೆ ಓದಿ...

ಲವ್ ಯೂ ಚಿನ್ನಾ ಹಿಟ್ ಹಾಡು

ಲವ್ ಯೂ ಚಿನ್ನಾ ಹಿಟ್ ಹಾಡು

ಚಿತ್ರದ ಜತೆಗೆ ಅದರ ಹಾಡುಗಳೂ ಹಿಟ್ ಆಗಿದ್ದವು. ಕಂಚಿನ ಕಂಠದ ಗಾಯಕ ರಘು ದೀಕ್ಷಿತ್ ಈ ಹಾಡುಗಳನ್ನು ಸಂಯೋಜಿಸಿದ್ದರು. ಅದರಲ್ಲಿ ಪ್ರೇಮಿಗಳಿಗೆ ಮೆಚ್ಚಿನ ಗೀತೆಯಾಗಿದ್ದು 'ಲವ್ ಯೂ ಚಿನ್ನಾ' ಹಾಡು. ಹಾಡಿನ ಸಂಗೀತ, ಸಾಹಿತ್ಯ ಹಾಗೂ ದೃಶ್ಯಗಳು ಜನರಿಗೆ ಇಷ್ಟವಾಗಿದ್ದವು.

ಹತ್ತು ಮಿಲಿಯನ್ ವೀಕ್ಷಣೆ

ಹತ್ತು ಮಿಲಿಯನ್ ವೀಕ್ಷಣೆ

ರಾಘವೇಂದ್ರ ವಿ ಕಾಮತ್ ಬರೆದ 'ಲವ್ ಯೂ ಚಿನ್ನಾ' ಹಾಡು ಯೂಟ್ಯೂಬ್‌ನಲ್ಲಿ ಸಕತ್ ಹಿಟ್ ಆಗಿದೆ. ನಾಲ್ಕು ತಿಂಗಳ ಹಿಂದೆ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಈ ಅವಧಿಯಲ್ಲಿ 'ಲವ್ ಯೂ ಚಿನ್ನಾ' ಹಾಡು 10 ಮಿಲಿಯನ್ ವೀಕ್ಷಣೆಗೆ ಒಳಗಾಗಿದೆ.

ಮಿಲಿಯನ್ ಲವ್

ಮಿಲಿಯನ್ ಲವ್

ಚಿತ್ರದ ಗೆಲುವಿನ ಸಂಭ್ರಮದಲ್ಲಿರುವ ಚಿತ್ರತಂಡಕ್ಕೆ ಹಾಡು ಈ ಪರಿ ಹಿಟ್ ಆಗಿರುವುದು ಮತ್ತಷ್ಟು ಉತ್ಸಾಹ ಮೂಡಿಸಿದೆ. 'ಲವ್ ಯೂ ಚಿನ್ನಾ ಹಾಡಿಗೆ 10 ಮಿಲಿಯನ್ ಲವ್' ಎಂದು ನಟಿ ಮಿಲನಾ ನಾಗರಾಜ್ ಖುಷಿ ಹಂಚಿಕೊಂಡಿದ್ದಾರೆ. 'ಇದು ನಿಮಗಾಗಿ' ಎಂದು ಡಾರ್ಲಿಂಗ್ ಕೃಷ್ಣ ಅವರನ್ನು ಟ್ಯಾಗ್ ಮಾಡಿದ್ದಾರೆ.

ಬೆಳಗಿನ ಜಾವ 4 ಗಂಟೆಯ ಕಾಲ್‌ಷೀಟ್

ಬೆಳಗಿನ ಜಾವ 4 ಗಂಟೆಯ ಕಾಲ್‌ಷೀಟ್

ಈ ಮೆಲೋಡಿ ಹಾಡನ್ನು ನೀಡಿದ ರಘು ದೀಕ್ಷಿತ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಹಾಡಿನ ಬಗ್ಗೆ ಆರಂಭದಿಂದಲೂ ಯಾವಾಗಲೂ ನೀವು ಬಹಳ ಆತ್ಮವಿಶ್ವಾಸ ಹೊಂದಿದ್ದೀರಿ' ಎಂದಿರುವ ಮಿಲನಾ, ಸೈಕಲ್‌ನಲ್ಲಿ ಸಾಗುವ ದೃಶ್ಯದ ಚಿತ್ರೀಕರಣಕ್ಕೆ ಬೆಳಗಿನ ಜಾವ 4 ಗಂಟೆಗೆ ಕಾಲ್ ಶೀಟ್ ಪಡೆದುಕೊಂಡಿದ್ದನ್ನು ಛಾಯಾಗ್ರಾಹಕ ಶ್ರೀ ಕ್ರೇಜಿಮೈಂಡ್ಸ್ ಅವರಿಗೆ ನೆನಪಿಸಿದ್ದಾರೆ.

ರಘು ದೀಕ್ಷಿತ್ ಸಂತಸ

ರಘು ದೀಕ್ಷಿತ್ ಸಂತಸ

'ಲವ್ ಯೂ ಚಿನ್ನಾ' ಹಾಡು ಹತ್ತು ಮಿಲಿಯನ್ ವೀಕ್ಷಣೆ ಪಡೆದ ಖುಷಿಯನ್ನು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಕೂಡ ಹಂಚಿಕೊಂಡಿದ್ದಾರೆ. ಈ ಹಾಡು ಮತ್ತು ಈ ಚಿತ್ರಕ್ಕೆ ನೀವು ನೀಡಿರುವ ಪ್ರೀತಿಗಾಗಿ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

More from Filmibeat

English summary
Love Mocktail movie's Love You Chinna song has crossed 10 million views on You tube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X