KGF 2 Sulthana Song: ರಣ ರಣಧೀರ.. ಒಂದು ಗಂಟೆಯಲ್ಲಿ ಸುಲ್ತಾನನ ಸದ್ದು ಹೇಗಿದೆ?
ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲೇ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ಬಿಡುಗಡೆಯ ಕೊನೆಯ ಕ್ಷಣದವರೆಗೂ 'ಕೆಜಿಎಫ್ 2' ತಂಡ ಜನರಲ್ಲಿ ಕುತೂಹಲವನ್ನು ಕೆರಳಿಸುತ್ತಲೇ ಇದೆ. ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಎಳೆದು ತರುವುದಕ್ಕೆ ಎಷ್ಟು ಪ್ರಯತ್ನಕ್ಕೆ ಪಡೆಬೇಕೋ ಎಲ್ಲವನ್ನೂ ಮಾಡಿದೆ.
'ಕೆಜಿಎಫ್ 2' ಸಿನಿಮಾದ ಎರಡನೆ ಸಾಂಗ್ ಸುಲ್ತಾನ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಗೆ ಇನ್ನು ಒಂದು ದಿನ ಇದೆ ಅನ್ನುವಾಗಲೇ ಚಿತ್ರತಂಡ ಸಾಂಗ್ ರಿಲೀಸ್ ಮಾಡಿದ್ದು ಸಿನಿಪ್ರಿಯರಿಗೆ ಮತ್ತಷ್ಟು ಕಿಕ್ ಕೊಟ್ಟಂತೆ ಆಗಿದೆ. ಸುಲ್ತಾನ ಹಾಡಿನ ಲಿರಿಕ್ಸ್ ಸಾಂಗ್ ಕಿಕ್ ಮೇಲೆ ಕಿಕ್ ಕೊಡುತ್ತಿದೆ.
'ಕೆಜಿಎಫ್ 2' ಸುಲ್ತಾನ ಸಾಂಗ್ ರಿಲೀಸ್
ಇಂದು( ಏಪ್ರಿಲ್ 13) ಬಿಡುಗಡೆ ಮಾಡಿರುವ ಸುಲ್ತಾನ ಸಾಂಗ್ ಯಶ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಇದೊಂಥರ ನಾಯಕ ಇಂಟ್ರುಡಕ್ಷನ್ ಸಾಂಗ್ ಇದ್ದಂತೆ. ನರಾಚಿ ಕೋಟೆಯೊಳಗೆ ರಾಕಿ ಭಾಯ್ ರಿ-ಎಂಟ್ರಿ ಹೇಗಿದೆ? ರಾಕಿ ಖದರ್ ಹೇಗಿದೆ? ರಾಕಿ ಆರ್ಭಟ ಹೇಗಿದೆ? ಅನ್ನುವುದುನ್ನು ಈ ಹಾಡು ವಿವರಿಸಲಿದೆ. ರಾಕಿ ಭಾಯ್‌ಯನ್ನು ತೆರೆಮೇಲೆ ಗ್ರ್ಯಾಂಡ್ ಎಂಟ್ರಿ ಕೊಡಿಸಲೆಂದೇ ಕ್ರಿಯೇಟ್ ಮಾಡಿರುವ ಹಾಡು ಎಂಬುದು ಮೇಲ್ನೋಟಕ್ಕೆ ಅನಿಸುತ್ತಿದೆ.

ಸುಲ್ತಾನ ಸಾಂಗ್‌ಗೆ ರವಿಬಸ್ರೂರ್ ಟ್ಯೂನ್-ಸಾಹಿತ್ಯ
'ಕೆಜಿಎಫ್ 2' ಟೀಮ್ ರಿಲೀಸ್ ಮಾಡಿರುವ ಸುಲ್ತಾನ ಸಾಂಗ್‌ಗ ಸಖತ್ ಪವರ್‌ಫುಲ್ ಆಗಿದೆ. ವಿಶೇಷ ಅಂದ್ರೆ ಸುಲ್ತಾನ ಹಾಡಿಗೆ ರವಿ ಬಸ್ರೂರು ಟ್ಯೂನ್ ಹಾಕೋದಷ್ಟೇ ಅಲ್ಲ, ಸಾಹಿತ್ಯ ಕೂಡ ರಚಿಸಿದ್ದಾರೆ. " ರಣ ರಣಧೀರ. ರುಧಿರೆಬ್ಬಿಸಿ ನಿಂತ ರಣಧೀರ", "ಒಬ್ಬಂಟಿ ನಿಂತ ರಣಧೀರ" ಇಂತಹದ್ದೆ ಒಂದಿಷ್ಟು ಪವರ್‌ಫುಲ್ ಪದಗಳನ್ನು ಸಾಹಿತ್ಯ ಬಳಿಸಿದ್ದಾರೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ರವಿ ಬಸ್ರೂರು ಸೇರಿದಂತೆ ಹಲವು ಗಾಯಕರು ಧ್ವನಿ ನೀಡಿದ್ದಾರೆ.

ಸುಲ್ತಾನ ಸಾಂಗಿಗೆ ಹೇಗಿದೆ ರೆಸ್ಪಾನ್ಸ್?
ಒಂದು ಗಂಟೆಯೊಳಗೆ 5 ಭಾಷೆಯಲ್ಲಿ ಸುಲ್ತಾನ ಸಾಂಗಿಗೆ ರೆಸ್ಪಾನ್ಸ್ ಹೇಗಿದೆ ಎಂದು ನೋಡುವುದಾದರೆ, ಸುಲ್ತಾನ ಕನ್ನಡ ಭಾಷೆಯಲ್ಲಿ 1 ಗಂಟೆಯಲ್ಲಿ 4 ಲಕ್ಷ 23 ಸಾವಿರ ಮಂದಿ ವೀಕ್ಷಿಸಿಸಿದ್ದಾರೆ. ಸುಲ್ತಾನ ಹಿಂದಿ ಭಾಷೆಯಲ್ಲಿ 5 ಲಕ್ಷದ 50 ಸಾವಿರ ಮಂದಿ ವೀಕ್ಷಿಸಿದ್ದಾರೆ. ತೆಲುಗಿನಲ್ಲಿ 1 ಲಕ್ಷದ 53 ಸಾವಿರ, ತಮಿಳಿನಲ್ಲಿ 60 ಸಾವಿರ, 4 ಸಾವಿರದ 800 ಮಂದಿ ವೀಕ್ಷಿಸಿದ್ದಾರೆ. ಇನ್ನು ಕೆಲವುಗಳಲ್ಲಿ ಈ ಸಾಂಗಿನ ರೀಚ್ ಮತ್ತಷ್ಟು ಹೆಚ್ಚಾಗಲಿದೆ.

ತೂಫಾನ್ ಸಾಂಗಿಗೂ ಸೂಪರ್ ರೆಸ್ಪಾನ್ಸ್
'ಕೆಜಿಎಫ್ 2' ಸಿನಿಮಾದ 'ತೂಫಾನ್' ಸಾಂಗ್ ಈಗಾಗಲೇ ಬಿಡುಗಡೆಯಾಗಿದೆ. ಈ ಹಾಡಿಗೂ ರವಿಬಸ್ರೂರು ಸಾಹಿತ್ಯ ರಚಿಸಿದ್ದರು. ತೂಫಾನ್ ಸಾಂಗ್ ಕೂಡ ಸೂಪರ್ ಹಿಟ್ ಆಗಿದೆ. ವಿಶೇಷ ಅಂದ್ರೆ, ಈ ಎರಡೂ ಹಾಡುಗಳು ಕೂಡ ಕನ್ನಡಕ್ಕಿಂತ ಹಿಂದಿ ಭಾಷೆಯಲ್ಲೇ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಇನ್ನು 'ಕೆಜಿಎಫ್ 2' ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇರುವಂತೆಯೇ 'ಸುಲ್ತಾನ' ಸಾಂಗ್ ರಿಲೀಸ್ ಮಾಡಿದ್ದು, 'ಕೆಜಿಎಫ್ 2' ಸಿನಿಮಾ ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ಸಿಕ್ಕಂತಾಗಿದೆ.


Click it and Unblock the Notifications











