Kalaavati Song: ಮಹೇಶ್ ಬಾಬು- ಕೀರ್ತಿ ಸುರೇಶ್ ಜೋಡಿಯ 'ಕಲಾವತಿ' ಹಾಡಿಗೆ 100 ಮಿಲಿಯನ್
ಮಹೇಶ್ ಬಾಬು ಕೀರ್ತಿ ಸುರೇಶ್ ಅಭಿನಯದ ಸಿನಿಮಾ 'ಸರ್ಕಾರು ವಾರಿ ಪಾಟ' ಚಿತ್ರದ ಹಾಡು ಟಾಲಿವುಡ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಪ್ರೇಮಿಗಳ ದಿನದಂದು ಈ ಸಿನಿಮಾದ ಕಲಾವತಿ ಹಾಡು ರಿಲೀಸ್ ಆಗಿತ್ತು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಸಾಂಗ್ ಒಂದೊಂದೇ ದಾಖಲೆಗಳನ್ನು ಅಳಿಸಿ ಹಾಕುತ್ತಾ ಮುಂದೆ ನಡೆದಿತ್ತು. ಈಗ ಮತ್ತೊಂದು ದಾಖಲೆಯೊಂದಿಗೆ ಕಲಾವತಿ ಸುದ್ದಿಯಲ್ಲಿದೆ.
ಸಂಗೀತ ನಿರ್ದೇಶಕ ಎಸ್ ತಮನ್ ಟ್ಯೂನ್ ಹಾಕಿದ ಕಲಾವತಿ ಸಾಂಗ್ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕೇವಲ 36 ದಿನಗಳಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು, ತೆಲುಗು ಆಡಿಯನ್ಸ್ ಬಾಯಲ್ಲಿ ಕೇವಲ ಕಲಾವತಿ ಹಾಡೇ ಕೇಳಿಸುತ್ತಿದೆ. ಹಾಗಿದ್ದರೆ, ಈ ಹಾಡು ಮಾಡಿದ ಸಾಧನೆಯೇನು? ತಿಳಿಯಲು ಮುಂದೆ ಓದಿ.
36 ದಿನದಲ್ಲಿ 100 ಮಿಲಿಯನ್ ವೀವ್ಸ್
'ಸರ್ಕಾರು ವಾರಿ ಪಾಟ' ಚಿತ್ರತಂಡ ಈಗಾಗಲೇ ಎರಡು ಹಾಡುಗಳನ್ನು ರಿಲೀಸ್ ಮಾಡಿದೆ. ಅದರಲ್ಲಿ ಮೊದಲನೇ ಹಾಡು ಕಲಾವತಿ. ಈ ಹಾಡು ಫೆಬ್ರವರಿ 13 ರಂದು ಬಿಡುಗಡೆಯಾಗಿತ್ತು. ರಿಲೀಸ್ ಆದ ಕೇವಲ 36 ದಿನಗಳಲ್ಲಿ 100 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ಖುಷಿ ವಿಷಯವನ್ನು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದೆ. ಈ ಮೂಲಕ ಟಾಲಿವುಡ್‌ನಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ.

ಯುಟ್ಯೂಬ್‌ನಲ್ಲಿ 100 ಮಿಲಿಯನ್ ವೀವ್ಸ್ ಪಡೆದಿದ್ದಷ್ಟೇ ಅಲ್ಲ. ಇದರೊಂದಿಗೆ 1.7 ಮಿಲಿಯನ್ ಲೈಕ್ಸ್ ಕೂಡ ಸಿಕ್ಕಿದೆ. ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ಹಾಗೂ ಟ್ಯೂನ್, ಲೊಕೇಶನ್ ಎಲ್ಲವೂ ಈ ಚಿತ್ರದ ಹೈಲೈಟ್ ಆಗಿತ್ತು. ಹೀಗಾಗಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 'ಪುಷ್ಪ' ಸಿನಿಮಾದ ಸಮಂತಾ ಹೆಜ್ಜೆ ಹಾಕಿದ "ಊ ಅಂಟಾವಾ ಮಾವ.." ಹಾಡಿನ ದಾಖಲೆಯನ್ನು ತಲೆ ಕೆಳಗೆ ಮಾಡಿತ್ತು.
Thank you for all the love to #Kalaavathi 🤗❤️ https://t.co/Y2NX85xbPC
— Keerthy Suresh (@KeerthyOfficial) March 22, 2022
ತಮನ್ ಮ್ಯೂಸಿಕ್, ಸಿದ್ಧ್ ಶ್ರೀರಾಮ್ ಧ್ವನಿಯ ಮ್ಯಾಜಿಕ್
'ಸರ್ಕಾರು ವಾರಿ ಪಾಟ' ಚಿತ್ರದ ಕಲಾವತಿ ಹಾಡಿ ಮತ್ತಿಬ್ಬರು ಪ್ರಮುಖ ರೂವಾರಿಗಳು ಸಂಗೀತ ನಿರ್ದೇಶಕ ಎಸ್ ತಮನ್. ಇವರೊಂದಿಗೆ ಗಾಯಕ ಸಿದ್ಧ್ ಶ್ರೀರಾಮ್. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ಅಲಾ ವೈಕುಂಠಪುರಮುಲೊ' ಚಿತ್ರದ "ಸಾಮಜವರಗಮನ..." ಹಾಡು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ಮತ್ತೆ ಇದೇ ಜೋಡಿ ಒಟ್ಟಾಗಿ ಸೇರಿ ಮ್ಯಾಜಿಕ್ ಮಾಡಿದೆ. ಕಡಿಮೆ ಸಮಯದಲ್ಲಿ 100 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
ಕಲಾವತಿ ಬಳಿಕ ಎರಡನೇ ಹಾಡನ್ನು ಬಿಡುಗಡೆ ಮಾಡಲಾಗಿದೆ. 'ಪೆನ್ನಿ' ಅನ್ನೋ ಹಾಡು ಕೂಡ ಮಹೇಶ್ ಬಾಬು ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಅದಕ್ಕೆ ಕಾರಣ ಮಹೇಶ್ ಬಾಬು ಪುತ್ರಿ ಸಿತಾರಾ.
'ಸರ್ಕಾರು ವಾರಿ ಪಾಟ' ಚಿತ್ರದ ಎರಡನೇ ಸಾಂಗ್ 'ಪೆನ್ನಿ'ಯಲ್ಲಿ ಸಿತಾರಾ ಭರ್ಜರಿ ಸ್ಪೆಷಲ್ ಎಂಟ್ರಿಕೊಟ್ಟಿದ್ದು, ತಂದೆಯೊಂದಿಗೆ ಇದೇ ಮೊದಲ ಬಾರಿಗೆ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾ ಮೇ 12ರಂದು ಬಿಡುಗಡೆ ಸಜ್ಜಾಗಿದೆ.


Click it and Unblock the Notifications











