'ಲಂಕಾಸುರ'ನ 'ಮಾಡರ್ನ್ ಮಹಾಲಕ್ಷ್ಮಿ'ಗೆ ಸಾಥ್ ಕೊಟ್ಟ ಕನಸಿನ ರಾಣಿ !
ವಿನೋದ್ ಪ್ರಭಾಕರ್ ನಿರ್ಮಾಣ ಸಂಸ್ಥೆ ಟೈಗರ್ ಟಾಕೀಸ್ ಮೂಲಕ ನಿರ್ಮಿಸಿರೋ ಸಿನಿಮಾ 'ಲಂಕಾಸುರ'. ಈ ಸಿನಿಮಾಗೆ ನಾಯಕನಾಗಿ ವಿನೋದ್ ಪ್ರಭಾಕರ್ ನಟಿಸಿದ್ದಾರೆ. ಸದ್ಯ ಈ ಸಿನಿಮಾ ಬಿಡುಗಡೆ ರೆಡಿಯಾಗಿದ್ದು, ಪ್ರಚಾರ ಮಾಡೋದರಲ್ಲಿ ಬ್ಯುಸಿಯಾಗಿದೆ.
'ಲಂಕಾಸುರ' ಸಿನಿಮಾ ಹಾಡೊಂದನ್ನು ರಿಲೀಸ್ ಮಾಡಲಾಗಿದೆ. 'ಬಹದ್ದೂರ್' ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ಬರೆದಿರೋ "ಮಾಡರ್ನ್ ಮಹಾಲಕ್ಷ್ಮಿ" ಹಾಡು ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆಯುತ್ತಿದೆ. ವಿಶೇಷ ಅಂದ್ರೆ, ಈ ಹಾಡನ್ನು ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀ ರಿಲೀಸ್ ಮಾಡಿದ್ದಾರೆ.

ಇತ್ತೀಚೆಗೆ ಇದೇ ಹಾಡು ಬಿಡುಗಡೆ ಕಾರ್ಯಕ್ರಮಕ್ಕಾಗಿ ಅದ್ದೂರಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ನಟಿ ಶೃತಿ, ನಟ ಶ್ರೀನಗರ ಕಿಟ್ಟಿ, ನಿರ್ಮಾಪಕ ಎಂ.ಜಿ.ರಾಮಮೂರ್ತಿ ಹಾಗೂ ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
"ನಾನು ವಿನೋದ್ ಪ್ರಭಾಕರ್ ಅವರ ದೊಡ್ಡ ಅಭಿಮಾನಿ. ಅವರು ಮಾಡುವ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ವಿನೋದ್ ಪ್ರಭಾಕರ್ ಹಾಗೂ ನಿಶಾ ವಿನೋದ್ ಪ್ರಭಾಕರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಮಾಲಾಶ್ರೀ ಹಾರೈಸಿದರು.

"ನಾನು ಪ್ರಭಾಕರ್ ಅವರೊಂದಿಗೆ ನಟಿಸಿದ್ದೇನೆ. 'ಮಾದೇಶ' ಸಿನಿಮಾದಲ್ಲಿ ಅವರ ಮಗ ವಿನೋದ್ ಪ್ರಭಾಕರ್ ಜೊತೆ ಅಭಿನಯಿಸಿದ್ದೇನೆ. 'ಲಂಕಾಸುರ' ಚಿತ್ರದ ಮೂಲಕ ವಿನೋದ್ ಹಾಗೂ ನಿಶಾ ನಿರ್ಮಾಪಕರಾಗಿದ್ದಾರೆ. ಇಬ್ಬರಿಗೂ ಒಳ್ಳೆಯದಾಗಲಿ" ಎಂದು ನಟಿ ಶೃತಿ ಹಾರೈಸಿದ್ದಾರೆ.
"ಕೊರೊನಾ ಬರುವ ಮುನ್ನ ರಾಘವ ಮುನಿಸ್ವಾಮಿ ನನಗೆ ಅಡ್ವಾನ್ಸ್ ಕೊಟ್ಟು 'ಲಂಕಾಸುರ' ಸಿನಿಮಾ ಆರಂಭಿಸಿದ್ದರು. ಕಾರಣಾಂತರಗಳಿಂದ ನಾವೇ ಟೈಗರ್ ಟಾಕೀಸ್ ಸಂಸ್ಥೆ ಆರಂಭಿಸಿ, ಆ ಸಿನಿಮಾ ಮೂಲಕ ನಿರ್ಮಾಣ ಮಾಡಿದ್ದೇವೆ. ಟೀಸರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ, ಲೋಗೊ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾನು ಆಭಾರಿ. ನನ್ನ ಇಡೀ ಚಿತ್ರತಂಡದ ಸಹಕಾರ ಮರೆಯಲು ಸಾಧ್ಯವಿಲ್ಲ." ಎಂದಿದ್ದಾರೆ ನಾಯಕ ವಿನೋದ್ ಪ್ರಭಾಕರ್.


Click it and Unblock the Notifications











