ಕೊರಿಯನ್ ಪಾಪ್ ಗಾಯಕ ಮೂನ್‌ಬಿನ್ ಹಠಾತ್ ನಿಧನ.. ಗಾಯಕರ ಸರಣಿ ಸಾವು..ಬೆಚ್ಚಿಬಿದ್ದ ಫ್ಯಾನ್ಸ್!
ದಕ್ಷಿಣ ಕೊರಿಯಾದ ಜನಪ್ರಿಯ ಕೊರಿಯನ್ ಪಾಪ್ ಗಾಯಕ ಮೂನ್‌ಬಿನ್ ಸಾವಿನ ಸುದ್ದಿ ಬೆಚ್ಚಿಬೀಳಿಸಿದೆ. ಬುಧವಾರ (ಏಪ್ರಿಲ್ 19) ರಾತ್ರಿ ಸ್ವಂತ ಅಪಾರ್ಟ್‌ಮೆಂಟ್‌ನಲ್ಲಿ ಮೂನ್‌ಬಿನ್ ಮೃತದೇಹ ಪತ್ತೆಯಾಗಿದೆ.
ಈ ಕೆ ಪಾಪ್ ಗಾಯಕ ಮೂನ್‌ಬಿನ್ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ 25 ವರ್ಷ ವಯಸ್ಸಿನಲ್ಲೇ ನಟರಾಗಿ ಮತ್ತು ಗಾಯಕರಾಗಿ ಗುರುತಿಸಿಕೊಂಡಿದ್ದರು. ಅಲ್ಲಿನ ಪ್ರಸಿದ್ಧ ಬಾಯ್ ಬ್ಯಾಂಡ್ ಆಸ್ಟ್ರೋದ ಗಾಯಕರಾಗಿ ಸಂಗೀತ ಪ್ರಿಯರ ಮಗನ ಸೆಳೆದಿದ್ದರು.

ಪಾಪ್ ಗಾಯಕ ಮೂನ್‌ಬಿನ್ ಹಠಾತ್ ಸಾವು ಕೊರಿಯನ್ ಅಭಿಮಾನಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಸಂಗೀತ ಪ್ರಿಯರ ಈ ಶಾಕಿಂಗ್ ನ್ಯೂಸ್ ಕೇಳಿ ಕಂಬನಿ ಮಿಡಿಯುತ್ತಿದ್ದಾರೆ.
ಕೊರಿಯನ್ ಗಾಯಕ ಹಠಾತ್ ಸಾವು
ದಕ್ಷಿಣ ಕೊರಿಯಾದ ಸಿಯೋಲ್‌ನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಮೂನ್‌ಬಿನ್ ವಾಸವಿದ್ದರು. ನಿನ್ನೆ (ಎಪ್ರಿಲ್ 19) ರಾತ್ರಿ ದಿಢೀರನೇ ಮೂನ್‌ಬಿನ್ ಸಾವನ್ನಪ್ಪಿರುವ ಬಗ್ಗೆ ಸುದ್ದಿ ಹೊರಬಿದ್ದಿತ್ತು.
ಮೂನ್‌ಬಿನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಯೋಲ್‌ನ ಗಂಗ್ನಮ್ ಪೊಲೀಸರು ತಿಳಿಸಿದ್ದಾಗಿ ವರದಿಯಾಗಿದೆ. ಆ ಬಳಿಕವೇ ಕೊರಿಯನ್ ಪಾಪ್ ಗಾಯನ ಸಾವಿಗೆ ಅಸಲಿ ಕಾರಣವೇನು? ಅನ್ನೋದು ತಿಳಿದು ಬರಲಿದೆ.
ದಕ್ಷಿಣ ಕೊರಿಯಾದಲ್ಲಿ ಗಾಯಕ-ನಟರ ನಿಗೂಢ ಸಾವು
ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ನಟರು ಹಾಗೂ ಗಾಯಕರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗುದ್ದಾರೆ. ಈ ಸದ್ದು ಕಳೆದ ಐದಾರು ವರ್ಷಗಳಿಂದ ಹೆಚ್ಚಾಗಿದೆ. ಅವರ ಪಟ್ಟಿ ಇಲ್ಲಿದೆ.

ಜೊಂಗ್ಹ್ಯುನ್- ದಕ್ಷಿಣ ಕೊರಿಯಾದ ಅತೀ ದೊಡ್ಡ ಬಾಯ್ ಬ್ಯಾಂಡ್, ಶಿನೀಯ ಗಾಯಕ ಜೊಂಗ್ಹ್ಯುನ್ 2017ರಲ್ಲಿ ಸಾವನ್ನಪ್ಪಿದ್ದರು.
ಗೂ ಹಾರಾ- 2019ರಲ್ಲಿ ಸಿಯೋಲ್‌ನ ತನ್ನ ಮನೆಯಲ್ಲಿ ಸಾವನ್ನಪ್ಪಿದ್ದರು.
ಸುಲ್ಲಿ- ಕೊರಿಯನ್ ಪಾಪ್ ಸ್ಟಾರ್ ಸುಲ್ಲಿ ಕೂಡ ಇದೇ ವರ್ಷ ಆತ್ಮಹತ್ಯೆಗೆ ಶರಣಾಗಿದ್ದರು.
ಮಿನ್ವೂ- ಬಾಯ್ ಬ್ಯಾಂಡ್ 100%ನ ಮಿನ್ವೂ ಆತನ ಮನೆಯಲ್ಲಿ ಸಾವನ್ನಪ್ಪಿದ್ದರು. ಸಾವಿಗೆ ಕಾರಣ ಹೃದಯಾಘಾತ ಎನ್ನಲಾಗಿತ್ತು.
ಈಗ ಮೂನ್‌ಬಿನ್ ಹಠಾತ್ ಸಾವು
ನಿನ್ನೆ ರಾತ್ರಿ (ಏಪ್ರಿಲ್ 19) ಮೂನ್‌ಬಿನ್ ಮನೆಗೆ ಮ್ಯಾನೇಜರ್ ತೆರಳಿದಾಗ, ಅವರು ಸಾವನ್ನಪ್ಪಿದ್ದು ತಿಳಿದು ಬಂದಿದೆ. ತಕ್ಷಣವೇ ದಕ್ಷಿಣ ಕೊರಿಯಾದ ಪೊಲೀಸರಿಗೆ ತಿಳಿಸಲಾಗಿತ್ತು. ಸದ್ಯ ಇವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಮೂನ್‌ಬಿನ್ ಸಾವಿನ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಮೂನ್‌ಬಿನ್ ದಿಢೀರ್ ಸಾವು ಅಭಿಮಾನಿಗಳು ಶಾಕಿಂಗ್ ಆಗಿದೆ. ಮೂನ್‌ಬಿನ್ ಫೆಬ್ರವರಿ 2016ರಲ್ಲಿ ಫ್ಯಾಂಟಜಿಯೊ ಲೇಬಲ್ ಮೂಲಕ ಗಾಯಕನಾಗಿ ಪಾಪ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದರು. ಮೂನ್‌ಬಿನ್ ಸಾವು ಆತ್ಮಹತ್ಯೆ ಇರಬಹುದೆಂದು ಪೊಲೀಸರು ಆರಂಭ ತನಿಖೆಯಿಂದ ಅನುಮಾನ ವ್ಯಕ್ತಪಡಿಸಿದ್ದಾರೆ. ತನಿಖೆ ಬಳಿಕವೇ ಅಸಲಿ ಸತ್ಯ ಹೊರಬೀಳಲಿದೆ.


Click it and Unblock the Notifications











