ಚೊಚ್ಚಲ‌ ಮ್ಯೂಸಿಕ್ ವಿಡಿಯೋಗೆ ನಾಂದಿ ಹಾಡಿದ ಅನೂಪ್ ಸೀಳಿನ್: 'ಪ್ರೀತಿ ಅನ್ನೊ ದ್ಯಾವ್ರು' ಸಖತ್ ರೆಸ್ಪಾನ್ಸ್

ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈಗಾಗಲೇ 'ಎದ್ದೇಳು ಮಂಜುನಾಥ', 'ಸಿದ್ಲಿಂಗು', 'ನೀರ್ ದೋಸೆ', 'ಮಾನ್ಸೂನ್ ರಾಗ', 'ಪೆಟ್ರೋಮ್ಯಾಕ್ಸ್' ಅಂತಹ ಸಿನಿಮಾಗಳಿಗೆ ಸಂಗೀತ ನೀಡಿರುವ ಅನೂಪ್ ಸೀಳಿನ್ ಈಗ ಅಲ್ಬಂ ಸಾಂಗ್‌ಗೆ ಟ್ಯೂನ್ ಹಾಕಿದ್ದಾರೆ.

ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಚಿತ್ರರಂಗಕ್ಕೆ ಬಂದು ಸುಮಾರು 16 ವರ್ಷಗಳಾಗಿವೆ. ಹೀಗಾಗಿ ಇದೇ ಮೊದಲ ಬಾರಿಗೆ ಅಲ್ಬಂ ಸಾಂಗ್ ಒಂದನ್ನು ಕಂಪೋಸ್ ಮಾಡಿ ಶೂಟ್ ಮಾಡಿದ್ದಾರೆ. ಈ ಹಾಡು ಕೂಡ ರಿಲೀಸ್ ಕೂಡ ಆಗಿದೆ. 'ಪ್ರೀತಿ ಅನ್ನೊ ದ್ಯಾವ್ರು' ಅನ್ನೋ ಅಲ್ಬಂ ಸಾಂಗ್ ಅನ್ನು ಹೊರತಂದಿದ್ದು, ಅನೂಪ್ ಸೀಳಿನ್ ಮಡದಿ ಕೃತಿ ಶೆಟ್ಟಿಯವ್ರು ಲಾಂಚ್ ಮಾಡಿದ್ದಾರೆ.

Music director Anoop Seelin new album song Preethi Anno Dyavru is out

ಅನೂಪ್ ಸೀಳಿನ್, ಇದೇ ಮೊದಲ ಬಾರಿಗೆ ಚೊಚ್ಚಲ‌ ಮ್ಯೂಸಿಕ್ ವಿಡಿಯೋ‌ ಹೊರತಂದಿದ್ದು, ಸಂಗೀತ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಪ್ರೀತಿ ಅನ್ನೊ ದ್ಯಾವ್ರು' ಅನ್ನೋ ಅಲ್ಬಂ ಸಾಂಗ್‌ಗೆ ರಾಗ ಸಂಯೋಜನೆ ಮಾಡಿದ್ದಷ್ಟೇ ಅಲ್ಲದೆ ಆ ಹಾಡಿನಲ್ಲಿ ಖುದ್ದು ಅನೂಪ್ ಸೀಳಿನ್ ನಟಿಸಿದ್ದಾರೆ.

'ಪ್ರೀತಿ ಅನ್ನೊ ದ್ಯಾವ್ರು' ಅನ್ನೋ ಈ ಹಾಡು ನಾಲ್ಕಾರು ಆಯಾಮಗಳಲ್ಲಿ ಕಾಣೋ ಕೇಳುವ ಪ್ರೀತಿಯನ್ನು ಹೇಳುತ್ತಿದೆ. 'ಪ್ರೀತಿ ಅನ್ನೊ ದ್ಯಾವ್ರು' ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಅನೂಪ್ ಸೀಳಿನ್ ಪತ್ನಿ ಕೃತಿ ಬಿ ಶೆಟ್ಟಿ ಈ ವಿಡಿಯೋ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ. ಈ ಹಾಡಿಗೆ ಕನ್ನಡ ಖ್ಯಾತ ಛಾಯಾಗ್ರಾಹಕ ಸುಜ್ಞಾನ್ ಮೂರ್ತಿ‌ ಕ್ಯಾಮರಾ ವರ್ಕ್ ಮಾಡಿದ್ದಾರೆ. ಕಾರ್ತಿಕ್ ಬಿ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದರೆ, ಮನು ಎಸ್ ಗೌಡ ಎಡಿಟಿಂಗ್ ಮಾಡಿದ್ದಾರೆ.

ಅನೂಪ್ ಸೀಳಿನ್ ಅವರದ್ದೇ ಆದ ಜೆಪಿ ಮ್ಯೂಸಿಕ್‌ನಲ್ಲಿ 'ಪ್ರೀತಿ ಅನ್ನೊ ದ್ಯಾವ್ರು' ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿದೆ. ಜೆಪಿ ಮ್ಯೂಸಿಕ್‌ಗೆ ಸದ್ಯ ದಶಕದ ಸಂಭ್ರಮದಲ್ಲಿದೆ. ಈ ಖುಷಿ ಘಳಿಗೆಯಲ್ಲಿ ಈ ಅಲ್ಬಂ ವಿಡಿಯೋ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ಅನೂಪ್ ವೃತ್ತಿ ಬದುಕಿನಲ್ಲೇ ಮೊಟ್ಟ ಮೊದಲ ಬಾರಿಗೆ ಇಂಥಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಅನೂಪ್ ಸೀಳಿನ್ ಈ ವಿಶೇಷ ಪ್ರಯೋಗವನ್ನು ಜೆಪಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಮಾಡಿದ್ದಾರೆ. ಹಾಗೆ ಆಡಿಯೋ ಪ್ಲಾಟ್‌ ಫಾರ್ಮ್‌ಗಳಲ್ಲಿಯೂ ಈ ಹಾಡು ಲಭ್ಯವಿದೆ. ಈ ಮೂಲಕ ಮತ್ತೆ ಅಲ್ಬಂ ಹಾಡುಗಳಿಗೆ ಬೇಡಿಕೆ ಬಂದರೂ ಬರಬಹುದು.

ಇದೇ ಸಂದರ್ಭದಲ್ಲಿ ಅನೂಪ್ ಸೀಳಿನ್ ಮ್ಯೂಸಿಕ್ ವಿಡಿಯೋ ಬಗ್ಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ. "ಈ ಥರದ ಮ್ಯೂಸಿಕ್ ಆಲ್ಬಂ‌ ಆಸೆ ಮೊದಲಿಂದ ಇತ್ತು. ಇಲ್ಲಿಂದ ಇದು ಆರಂಭ ಆಗಿದೆ. ಗುರುಗಳಾದ ಹಂಸಲೇಖರನ್ನು ಸ್ಮರಿಸುತ್ತಾ, ಪ್ರೀತಿ ಅನ್ನೋ ದ್ಯಾವ್ರು ಮನುಷ್ಯ ಮತ್ತು ಪ್ರಕೃತಿ ನಡುವಿನ ಥೀಮ್ ಇರೋ‌ ಕಾನ್ಸೆಪ್ಟ್ ಹುಟ್ಟಿನಿಂದ ಸಾವಿನವರೆಗೆ ಒಂದಷ್ಟು ವಿಚಾರಗಳನ್ನು ಈ ಹಾಡಿನ ಮೂಲಕ ಹೇಳಲಾಗಿದೆ. ಎಲ್ಲಾ ಬಗೆಯ ಆಲ್ಬಂ ಹಾಡುಗಳನ್ನು ಮಾಡೋ ಉದ್ದೇಶವಿದೆ" ಎಂದು ಅನೂಪ್ ಸೀಳಿನ್ ಹೇಳಿದ್ದಾರೆ.

More from Filmibeat

English summary
Anoop Seelin new album song Preethi Anno Dyavru creating buzz:
Read more about: anoop seelin music filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X