2025ರಲ್ಲಿ ಹುಡುಗರ ಕಣ್ಣುಗಳ ಕುಕ್ಕಿದ ಬಾಲಿವುಡ್‌ನ 5 ಐಟಂ ಸಾಂಗ್‌ಗಳು ಇವೇನೇ; ಯಾವ್ಯಾವ ಹಾಡಿಗೆ ಎಷ್ಟೆಷ್ಟು ವೀವ್ಸ್?

ಬಾಲಿವುಡ್‌ ಸಿನಿಮಾಗಳು ಅಂದರೆ ಕಲರ್‌ಫುಲ್ ಸಾಂಗ್ಸ್, ಅದ್ಧೂರಿ ಸೆಟ್ಟು, ಫಾರಿನ್ ಲೋಕೇಶ್ ಅನ್ನು ಕಣ್ತುಂಬಿಕೊಳ್ಳಬಹುದು. ಇದರೊಂದಿಗೆ ಐಟಂ ಸಾಂಗ್‌ಗಳು ಕೂಡ ಅಷ್ಟೇ ಪ್ರೇಕ್ಷಕರ ಕಣ್ಣುಗಳಿಗೆ ಒಂಥರಾ ಮಜಾ ಕೊಡುತ್ತವೆ. ಈ ವರ್ಷ ಕೂಡ ಇಂತಹದ್ದೇ ಕೆಲವು ಐಟಂ ಸಾಂಗ್‌ಗಳು ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಹುಡುಗರು ಬಿಟ್ಟ ಕಣ್ಣು ಬಿಡ ಹಾಗೇ ಕಣ್ಣಿಗೆ ದುರ್ಬಿನ್ ಹಾಕಿ ಕೂತುಬಿಟ್ಟಿದ್ದರು.

ನಾಯಕಿಯರ ತುಂಡು ಉಡುಗೆ, ಗ್ಲಾಮರಸ್ ಕಾಸ್ಟ್ಯೂಮ್, ಮಾದಕ ನೋಟ. ಆಗಾಗ ಎದೆಯಲ್ಲಿ ಚುರುಕ್ ಎನಿಸುವ ತೀಕ್ಷ್ಣ ಕಣ್‌ ನೋಟ. ಇನ್ನು ನಟಿಯರು ಸೊಂಟ ಬಳುಕಿಸಿ ಭರ್ಜರಿಯಾಗಿ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಪಡ್ಡೆ ಹುಡುಗರ ಎದೆ ಬಡಿತ ಕೂಡ ಹಾಡಿಗೆ ತಕ್ಕಂತೆ ರಿಥಂ ಹಾಕುತ್ತಿರುತ್ತೆ. ಹೀಗಾಗಿ ಬಾಲಿವುಡ್ ಮಂದಿ ಸಿನಿಮಾದಲ್ಲಿ ಒಂದಾದರೂ ಐಟಂ ಸಾಂಗ್‌ಗಳನ್ನು ಇಟ್ಟು ಪ್ರೇಕ್ಷಕರಿಗೆ ಹೃದಯ ಗೆಲ್ಲುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ.

Nasha Aaj ki Raat to Sorry Bol here is the top 5 Bollywood item songs of 2025

2025ರಲ್ಲಿ ಬಾಲಿವುಡ್‌ನಲ್ಲಿ ತಮನ್ನಾ ಭಾಟಿಯಾ, ಊರ್ವಶಿ ರೌಟೇಲಾ, ಶೆಹನಾಜ್ ಗಿಲ್ ಐಟಂ ಸಾಂಗ್‌ನಲ್ಲಿ ಮಿಂಚಿದ್ದಾರೆ. ಒಂದೊಂದು ಹಾಡುಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ಯೂಟ್ಯೂಬ್‌ನಲ್ಲಿ ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಬಂದಿವೆ. ಹಾಗಿದ್ದರೆ, ಟಾಪ್‌ 5 ಸ್ಥಾನದಲ್ಲಿ ಐಟಂ ಸಾಂಗ್‌ಗಳು ಯಾವುವು? ತಿಳಿಯುವುದಕ್ಕೆ ಮುಂದೆ ಓದಿ.


'ರೇಡ್ 2' ಸಿನಿಮಾ 'ನಶಾ'

ಅಜಯ್ ದೇವಗನ್, ರಿತೇಶ್ ದೇಶ್ಮುಖ್ ಸಿನಿಮಾ 'ರೈಡ್ 2' ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಇಡೀ ಸಿನಿಮಾ ರಾಜಕಾರಣಿಯ ಪ್ರಾಪರ್ಟಿ ಮೇಲೆ ರೇಡ್ ಬಗ್ಗೆನೇ ಇದೆ. 'ರೇಡ್' ಮೊದಲ ಪಾರ್ಟ್ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಈ ಯಶಸ್ಸಿನ ಬೆನ್ನಲ್ಲೇ 'ರೇಡ್ 2' ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಡಲಾಗಿತ್ತು. ಸಿನಿಮಾ ಸೀರಿಯಲ್ ಆಗಿದ್ದರಿಂದ ಪ್ರೇಕ್ಷಕರನ್ನು ರಂಜಿಸುವುದಕ್ಕೆ ತಮನ್ನಾ ಭಾಟಿಯಾರನ್ನು ಕರೆತಂದಿದ್ದರು. ಅದು "ನಶಾ.." ಎನ್ನುವ ಐಟಂ ಸಾಂಗ್. ಈ ಲಿರಿಕಲ್ ಸಾಂಗ್ 92 ಮಿಲಿಯನ್ ವೀವ್ಸ್ ಕಂಡಿದ್ದರೆ, ವಿಡಿಯೋ ಸಾಂಗ್ 12 ಮಿಲಿಯನ್ ವೀವ್ಸ್ ಕಂಡಿದೆ. ವಿಜಯ್ ಗಂಗೂಲಿ ಈ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ.


'ಅಜಾದ್' ಸಿನಿಮಾದ "ಉಯಿ ಅಮ್ಮ"

ಈ ವರ್ಷದಲ್ಲಿ ಅತೀ ಹೆಚ್ಚು ವೀವ್ಸ್ ಕಂಡ ಬಾಲಿವುಡ್ ಐಟಂ ಸಾಂಗ್ ಅಂದರೆ ಅದು 'ಅಜಾದ್'. ಬಾಲಿವುಡ್ ನಟಿ ರವೀನಾ ಟಂಡನ್ ಪುತ್ರಿ ರಶಾ ಟಂಡನ್ ಎಂಟ್ರಿ ಕೊಟ್ಟ ಸಿನಿಮಾದ ಸಾಂಗ್ ಇದೆ. "ಉಯಿ ಅಮ್ಮ.." ಸಾಂಗ್‌ನಲ್ಲಿ ಎನರ್ಜೆಟಿಕ್ ಬೀಟ್ಸ್ ಇದೆ. ಅದ್ಭುತವಾದ ಡ್ಯಾನ್ಸ್ ಮೂವ್ಮೆಂಟ್ಸ್‌ ಇವೆ. ಹೀಗಾಗಿ ಈ ಸಾಂಗ್ 361 ಮಿಲಿಯನ್ ವೀವ್ಸ್ ಕಂಡಿದೆ.

'ಜಾಟ್' ಸಿನಿಮಾದ "ಸಾರಿ ಬೋಲ್"

ಸನ್ನಿ ಡಿಯೋಲ್ ನಟಿಸಿದ ಜಾಟ್ ಸಿನಿಮಾ ಐಟಂ ಸಾಂಗ್ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ತೆಲುಗು ಗೋಪಿಚಂದ್ ನಿರ್ದೇಶಿಸಿರುವ ಐಟಂ ಸಾಂಗ್ "ಸಾರಿ ಬೋಲ್.." ಊರ್ವಶಿ ರೌಟೇಲಾ ಈ ಐಟಂ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಿದ್ದು, ಸುಮಾರು 39 ಮಿಲಿಯನ್ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ. ಈ ಹಾಡು ಕೂಡ ಬಾಲಿವುಡ್‌ನ ಟಾಪ್ ಸಾಂಗ್‌ಗಳಲ್ಲಿ ಒಂದಾಗಿದೆ.

'ಹೌಸ್‌ಫುಲ್ 5' ಸಿನಿಮಾದ "ಲಾಲ್ ಪರಿ"

ಈ ವರ್ಷ ತೆರೆಕಂಡ ಬಿಗ್ ಬಜೆಟ್ ಸಿನಿಮಾ 'ಹೌಸ್‌ಫುಲ್ 5'. ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್ ಹಾಗೂ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಲರ್‌ಫುಲ್ ಸೆಟ್ಟು, ಹೀರೋಗಳ ಸುತ್ತಮುತ್ತಲೂ ಗ್ಲಾಮರಸ್ ಹುಡುಗಿಯರು, ರಂಗೋ ರಂಗು. ಇವುಗಳಿಗೆ ಯೋ ಯೋ ಹನಿಸಿಂಗ್ ಟ್ಯೂನ್ ಹಾಕಿದ್ಮೇಲೆ ಕೇಳ್ಬೇಕಾ? ಮ್ಯೂಸಿಕ್ ಲವರ್ಸ್ ಮುಗಿಬಿದ್ದಿದ್ದು 'ಹೌಸ್‌ಫುಲ್ 5' ಸಿನಿಮಾದ "ಲಾಲ್ ಪರಿ.." ಸಾಂಗ್ ವೀಕ್ಷಿಸಿದ್ದಾರೆ. ಈ ಹಾಡನ್ನು ಸುಮಾರು 209 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.

'ಸೈಯ್ಯಾರ' ಸಿನಿಮಾದ "ಬರ್ಬಾದ್"

ಬಾಲಿವುಡ್‌ನ 'ಸೈಯ್ಯಾರ' ಸಿನಿಮಾದ "ಬರ್ಬಾದ್" ಎನ್ನುವ ಹಾಡು ಕೂಡ ಹಿಂದಿ ವೀಕ್ಷಕರಿಗೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡ ನಟಿಸಿರುವ ಈ ಸಿನಿಮಾದ ಐಟಂ ಸಾಂಗ್ ಸಂಗೀತ ಪ್ರಿಯರಿಗೆ ಕಿಕ್ ಕೊಟ್ಟಿದೆ. ಈ ಹಾಡನ್ನು ಸುಮಾರು 43 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.

More from Filmibeat

English summary
Nasha, Aaj ki Raat to Sorry Bol here is the top 5 Bollywood item songs of 2025.
Read more about: songs item songs tamannah bhatia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X